fbpx
ಮನೋರಂಜನೆ

ಇಪ್ಪತೈದನೇ ದಿನದತ್ತ ಸಂಯುಕ್ತ-2 ಗೆಲುವಿನ ಹೆಜ್ಜೆ!

ಇಪ್ಪತೈದನೇ ದಿನದತ್ತ ಸಂಯುಕ್ತ-2 ಗೆಲುವಿನ ಹೆಜ್ಜೆ!

 

 

ಸಂಗತಿ ಸಿನಿಮಾದ್ದೇ ಆಗಿದ್ದರೂ ಅದರೊಳಗಿನ ವಿಚಾರಗಳು, ಅಪರೂಪಕ್ಕೆಂಬಂತೆ ಅನಾವರಣಗೊಳ್ಳೋ ಕಾಳಜಿ ಪ್ರಾಮಾಣಿಕವಾಗಿದ್ದರೆ ಪ್ರೇಕ್ಷಕರನ್ನು ಮುಟ್ಟದಿರಲು ಸಾಧ್ಯವೇ ಇಲ್ಲ. ಈ ಮಾತಿಗೆ ತಾಜಾ ಉದಾಹರಣೆಯಂತಿರೋ ಚಿತ್ರ ಸಂಯುಕ್ತ-೨. ಹಾರರ್ ಕಥೆಯೊಂದರ ಮೂಲಕ ಪರಿಣಾಮಕಾರಿಯಾಗಿ ದೇಶಪ್ರೇಮದ ಬಗ್ಗೆ ಸಂದೇಶ ಸಾರಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಗೆಲುವು ಕಂಡಿದೆ. ಈ ಕಾರಣದಿಂದಲೇ ೨೫ನೇ ದಿನದತ್ತ ಸಂಯುಕ್ತ-೨ ಚಿತ್ರ ದಾಪುಗಾಲಿಟ್ಟಿದೆ.

 

 

ಹಾರರ್ ಕಥೆ ಹೊಂದಿರೋ ಸಿನಿಮಾ ಒಂದನ್ನು ದೇಶ ಕಾಯೋ ಸೈನಿಕರಿಗೆ ಅರ್ಪಿಸೋದು ಮತ್ತು ಸಿನಿಮಾದೊಳಗೇ ಸೈನಿಕರ ಬಗ್ಗೆ ಮನ ಮಿಡಿಯೋ ಕಥೆ ಹೇಳೋದೇ ಕನ್ನಡಕ್ಕೆ ಹೊಸಾ ವಿಚಾರ. ಅದು ಸಾಧ್ಯವಾದದ್ದು ನಿರ್ಮಾಪಕ ಮಂಜುನಾಥ್ ಅವರ ಪ್ರಾಮಾಣಿಕ ಕಾಳಜಿಯಿಂದ. ಯಾವುದೇ ಗಿಮಿಕ್ ಇಲ್ಲದೆ ಸೈನಿಕರ ಬಗ್ಗೆ ತೋರಿಸಿದ ಪ್ರೇಮಕ್ಕೆ, ಇಡೀ ಚಿತ್ರದ ಅಚ್ಚುಕಟ್ಟುತನಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.

 

 

ಮುನ್ನೂರು ಮಂದಿ ಸೈನಿಕರು ಈ ಚಿತ್ರವನ್ನು ನೋಡಿ ಮೆಚ್ಚಿಕೊಳ್ಳೋ ಮೂಲಕ ಸಂಯುಕ್ತ೨ ಚಿತ್ರದ ಬಗ್ಗೆ ಆಕರ್ಷಿತರಾಗಿ ಮತ್ತಷ್ಟು ಜನ ಚಿತ್ರ ಮಂದಿರದತ್ತ ಬರುತ್ತಲೇ ಇದ್ದಾರೆ. ಈ ಪ್ರೀತಿಯಿಂದಲೇ ಈ ಚಿತ್ರವೀಗ ೨೫ನೇ ದಿನದತ್ತ ಯಶಸ್ವಿಯಾಗಿ ಪಯಣ ಬೆಳೆಸಿದೆ. ಸದ್ಯದಲ್ಲಿ ಚಿತ್ರರಂಗದ ವಿದ್ಯಾಮಾನಗಳನ್ನು ಗಮನದಲ್ಲಿಟ್ಟುಕೊಂಡು ಹೇಳೋದಾದರೆ ಇದೊಂದು ಅಪ್ಪಟ ಗೆಲುವು. ವಾರಕ್ಕೆ ಸರಾಸರಿ ಏಳು ಸಿನಿಮಾಗಳು ತೆರೆಗೆ ಬರುತ್ತಿವೆ. ಆರಂಭದಿಂದಲೂ ಭಾರೀ ಕುತೂಹಲ ಹುಟ್ಟು ಹಾಕಿ, ಉಪೇಂದ್ರ ಚಿತ್ರದ ಹವಾ ಮತ್ತೆ ಶುರುವಾಗುತ್ತೆ ಅಂತೆಲ್ಲ ಪ್ರಚಾರ ಗಿಟ್ಟಿಸಿದ್ದ ಉಪೇಂದ್ರ ಅವರ ಉಪೇಂದ್ರ ಮತ್ತೆ ಬಾ ಚಿತ್ರವೇ ಸೋತಿದೆ. ಅಂಥಾದ್ದೇ ಸದ್ದು ಮಾಡುತ್ತಾ ತೆರೆ ಕಂಡಿದ್ದ ಚೇತನ್ ಅಭಿನಯದ ಅತಿರಥ ಚಿತ್ರವೂ ತೆರೆ ಮರೆಗೆ ಸರಿದಂತಿದೆ.

 

 

ಆದರೆ ಇಂಥಾ ಚಿತ್ರಗಳ ಆಸುಪಾಸಲ್ಲಿಯೇ ತೆರೆ ಕಂಡಿರುವ ಸಂಯುಕ್ತ-೨ ಚಿತ್ರಕ್ಕೆ ಪ್ರಚಾರ ಸಿಕ್ಕಿದ್ದೇ ಬಿಡುಗಡೆಯ ಕಡೇ ಕ್ಷಣದಲ್ಲಿ. ಅದೂ ಕೂಡಾ ಚಿತ್ರದ ಕಂಟೆಂಟಿನ ಕಾರಣದಿಂದಲೇ. ಆದರೂ ಈ ಚಿತ್ರ ಗೆದ್ದಿದೆ. ಇಪ್ಪತೈದನೇ ದಿನದ ಹೊಸ್ತಿಲಾಚೆಗೂ ಅದೇ ಕ್ರೇಜ್ ಮುಂದುವರೆಸೋ ಲಕ್ಷಣಗಳೂ ಗಾಢವಾಗಿವೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top