fbpx
ಕಿರುತೆರೆ

ಸಿಹಿಕಹಿ ಚಂದ್ರು ಬೊಂಬಾಟ್ ಭೋಜನ ಮುಕ್ತಾಯ..!

ಸಿಹಿಕಹಿ ಚಂದ್ರು ಬೊಂಬಾಟ್ ಭೋಜನ ಮುಕ್ತಾಯ..!

 

 

ಕಳೆದ ವಾರ ಎಲಿಮಿನೇಟ್ ಇಲ್ಲದೆ ಖುಷಿಗೊಂಡಿದ್ದ ಬಿಗ್‌ಬಾಸ್ ಮನೆಯೊಳಗೆ ಈ ಬಾರಿ ಯಥಾ ಪ್ರಕಾರ ಒಂದು ವಿಕೆಟ್ ಪತನವಾಗಿದೆ. ಈ ವಾರ ಮನೆಯಿಂದ ಹೊರ ಬಿದ್ದವರು ಬೊಂಬಾಟ್ ಭೋಜನ ಖ್ಯಾತಿಯ ಸಿಹಿಕಹಿ ಚಂದ್ರು.

 

 

ಚಂದ್ರು ಅಂದರೆ ಉತ್ಸಾಹದ ಚಿಲುಮೆ. ಆದ ವಯಸ್ಸೂ ನಾಚಿಕೊಳ್ಳುವಂಥಾ ಪುಟಿಯುವ ವ್ಯಕ್ತಿತ್ವ. ಅದೇ ಉತ್ಸಾಹದಿಂದ ಕೆನೆದಾಡುತ್ತಲೇ ಬಿಗ್‌ಬಾಸ್ ಶೋ ಪ್ರವೇಶ ಮಾಡಿದ್ದ ಚಂದ್ರು ಮನಸು ವಾರ ಕಳೆಯುತ್ತಲೇ ಕೋಪಾಗ್ನಿಯ ಕುಲುಮೆಯಂತಾಗಿದ್ದು ಬಿಗ್‌ಬಾಸ್‌ನ ಅಸಲೀ ಮಹಿಮೆ..

 

 

 

ಮನೆ ಮಂದಿಗೆಲ್ಲ ಇತಿಮಿತಿಯೊಳಗೇ ರುಚಿಯಾದ ಅಡುಗೆ ಮಾಡುತ್ತಾ ನಂತರ ಅದೇ ವಿಚಾರವಾಗಿ ವಾದ ವಿವಾದಗಳಿಗೂ ಕೇಂದ್ರಬಿಂದುವಾಗಿದ್ದ ಚಂದ್ರು ಕೆಲ ಸಂದರ್ಭಗಳಲ್ಲಿ ಪ್ರೇಕ್ಷಕರೂ ಕಸಿವಿಸಿಗೊಳ್ಳುವಂಥಾ ವರ್ತನೆ ಪ್ರದರ್ಶಿಸಿದ್ದರು. ಸಣ್ಣಗೆ ಹೊರ ಹಾಕೋ ಕೋಪಾಗ್ನಿ ಕೆಲವೊಮ್ಮೆ ವಿನಾ ಕಾರಣ ಗಡಿ ಬಿಡಿ ಸೃಷ್ಟಿಸಿದ್ದೂ ಇದೆ. ಕೆಲ ಬಾರಿ ವಯಸಿನ ಮಹಿಮೆಯಿಂದ ಸಿಟ್ಟನ್ನು ಕಂಟ್ರೋಲ್ ಮಾಡಿಕೊಳ್ಳಲು ಸೋತಂತೆ ಭಾಸವಾಗಿದ್ದೂ ಇದೆ.

ಬಿಗ್‌ಬಾಸ್ ಮನೆಯ ಹಿತಿಯ ಸ್ಪರ್ಧಿಯಾದ ಚಂದ್ರಿ ಬಹಳಷ್ಟು ಸಂದರ್ಭಗಳಲ್ಲಿ ತಾವು ಮಾಡಿದ ತಪ್ಪು ಯಾರ ಹೆಗಲಿಗೋ ತಗುಲಿಕೊಂಡಾಗಲೂ ಜಾಣ ಮೌನ ವಹಿಸಿದ ಆರೋಪಕ್ಕೂ ಗುರಿಯಾಗಿದ್ದರು. ಆದರೆ ಇದೆಲ್ಲದರಾಚೆಗೆ ಟಾಸ್ಕ್‌ಗಳಲ್ಲಿ ಸಕ್ರಿಯರಾಗಿ ಎಂಟರ್‌ಟೈನರ್ ಆಗಿ ಹೊರಹೊಮ್ಮಿದ್ದ ಚಂದ್ರು ಅಖಂಡ ಐವತ್ತು ದಿನಗಳ ಯಾನ ಮುಗಿಸಿ ಬಿಗ್‌ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top