fbpx
ದೇವರು

ದತ್ತನ ಈ 24 ಗುರುಗಳ ಈ ಗುಣಗಳು ಮನುಷ್ಯ ಅವನ ಜೀವನದಲ್ಲಿ ಅಳವಡಿಸಿಕೊಂಡರೆ ಮೋಕ್ಷ ದೊರಕುವುದರಲ್ಲಿ ಯಾವುದೇ ಸಂಶಯವಿಲ್ಲ !

ದತ್ತನ 24 ಗುರುಗಳು

 

 

೧. ಭೂಮಿ :

ಭೂಮಿಯಂತೆ ಸಹನೆ ಹಾಗೂ ತಾಳ್ಮೆಯುಳ್ಳವನಾಗಿರಬೇಕು.

೨. ವಾಯು :

ತನ್ನದೇ ಗುಣಗಳನ್ನು ಕಾಪಾಡಿಕೊಂಡು ಹೋಗಬೇಕು ಹೀಗೆ ಯಾವುದೇ ಶೀತೋಷ್ಣತೆಗಳಲ್ಲಿ ಪ್ರಯಾಣಾ ಬೆಳೆಸುವಾಗಲು ತನ್ನ ಗುಣ ಕಾಯ್ದುಕೊಂಡಿರಬೇಕು

೩. ಆಕಾಶ :

ಬಹಳ ದೊಡ್ಡದು ಆದರೂ ಕಣ್ಣಿಗೆ ಕಾಣುವಷ್ಟು , ನಿರ್ವಿಕಾರ ಎಲ್ಲ ಜೀವಿಗಳನ್ನು ಸಮನಾಗಿ ಕಾಣುತ್ತದೆ.

೪. ನೀರು :

ನೀರಿಗೆ ತಮ್ಮವರು ಪರರು ಎನ್ನುವ ಭೇದವಿಲ್ಲ ಎಲ್ಲರು ಒಂದೇ .

೫. ಅಗ್ನಿ :

ಪಾಲಿಗೆ ಬಂದ ಕೆಟ್ಟದ್ದು ಒಳ್ಳೆಯವು ಎಲ್ಲವನ್ನು ಸ್ವೀಕರಿಸಿ ಒಳ್ಳೆಯ ನಡತೆಯನ್ನು ಒಳ್ಳೆಯ ಕಾಲಗಳಲ್ಲಿ ಕೆಟ್ಟ ನಡತೆಯನ್ನು ಉಪಯೋಗಿಸುವ ಸಂದರ್ಭ ಬಂದಾಗ ಉಪಯೋಗಿಸುತ್ತಾ ಸಾಗಬೇಕು.

೬. ಚಂದ್ರ :

ಅಮಾವಾಸ್ಯೆ ಉಂಟುಮಾಡುವ ಸೂಕ್ಷ್ಮ ಕಲೆ ಹೇಗೆ ಚಂದ್ರನನ್ನು ಬಾಧಿಸುವುದಿಲ್ಲವೋ ಹಾಗೆಯೇ ಕಲೆಯ ವಿಕಾರತೆ ಇದ್ದರು ತಲೆ ಕೆಡಿಸಿಕೊಳ್ಳಬಾರದು , ಶರೀರದ ನ್ಯೂನ್ಯತೆಗಳು ಹಾಗೆಯೇ.

 

 

೭. ಸೂರ್ಯ :

ಬೇಸಿಗೆಯಲ್ಲಿ ನೀರನ್ನು ಆವಿ ಮಾಡಿ ಮಳೆ ಗಾಲದಲ್ಲಿ ಮಳೆ ಸುರಿಸಿ ಸಕಲ ಜೀವ ರಾಶಿಗಳಿಗೆ ಒಳಿತು ಮಾಡುವ ಹಾಗೆ , ಮನುಷ್ಯ ನು ಹಾಗೆ ಅವಕಾಶ ಸಿಕ್ಕೆದಾಗಲೆಲ್ಲ ಪರೋಪಕಾರ ಮಾಡಬೇಕು.

೮. ಪಾರಿವಾಳ :

ಸತ್ತ ಪಾರಿವಾಳವನ್ನು ಹದ್ದು ತನ್ನ ಪರಿವಾರದೊಂದಿಗೆ ಯಾವ ರೀತಿ ತಿನ್ನುವುದೋ ಹಾಗೆ ಯಾವ ಮನುಷ್ಯ ತನ್ನ ಕುಟುಂಬದ ಮೇಲೆ ಅತಿಯಾದ ಮೋಹವಿರಿಸುತ್ತಾನೋ ಅವನಿಗೆ ಕಾಲವೇ ಪಾಠ ಕಲಿಸುತ್ತದೆ.

೯. ಹೆಬ್ಬಾವು :

ಹೆಬ್ಬಾವು ಭಯ ಪಡದೆ ತಾನು ಇರುವ ಜಾಗದಲ್ಲಿ ಏನು ಸಿಗುವುದೋ ಅದನ್ನು ತಿಂದು ತೃಪ್ತಿ ಪಡುವುದು ಹಾಗೆಯೇ ಮನುಷ್ಯ ಕೂಡ ಸಿಕ್ಕಾಗ ಸ್ವರ್ಗ ಇಲ್ಲವಾದರೆ ಪರವಾಗಿಲ್ಲ ಅಂದ್ಕೊಂಡಿರಬೇಕು.

೧೦. ಸಮುದ್ರ :

ಅನೇಕ ನದಿಗಳು ಕೂಡಿ ಹೆಚ್ಚು ನೀರನ್ನು ಸಮುದ್ರಕ್ಕೆ ಎರೆದರು ಏರದೇ ನೀರು ಕಡಿಮೆಯಾದರು ಇಳಿಯದೆ ಇರುವುದೋ ಹಾಗೆ ಮನುಷ್ಯನು ಇರಬೇಕು .

೧೧. ಬೆಳಕು ಹುಳು :

ಬೆಂಕಿಯನ್ನು ಕಂಡು ಮೋಹಿತನಾಗಿ ಕೊನೆಗೆ ಬೆಂಕಿಯಲ್ಲೇ ಬಿದ್ದು ಸಾಯದೆ ಮನುಷ್ಯ ಸ್ತ್ರೀ ಲೋಲನಾಗಿರಬಾರದು ಅಂದ ಚಂದ , ವಯಸ್ಸು ಕೇವಲ ಕ್ಷಣಿಕ

೧೨. ಜೇನುನೊಣ ಮತ್ತು ಜೇನು ಸಂಗ್ರಾಹಕ

ಎತ್ತರದ ಜಾಗದಲ್ಲಿ ಜೇನು ಜೇನುಗೂಡನ್ನು ಕಟ್ಟಿ ಅದರಲ್ಲಿ ಜೇನುತುಪ್ಪವನ್ನು ಶೇಖರಿಸುತ್ತದೆ, ಜೇನುತುಪ್ಪವನ್ನು ಸಂಗ್ರಹ ಮಾಡುವವನು ಹಠಾತ್ತಾಗಿ ಬಂದು, ಜೇನುನೊಣಗಳನ್ನು ಸಾಯಿಸಿ ಗೂಡು ಕೆಡವುತ್ತಾನೆ , ಜಿಪುಣರು ಹಾಗೆಯೇ ಹಣ ಸಂಪತ್ತನ್ನು ಕೂಡಿತ್ತು ಏನನ್ನು ಅನುಭವಿಸದೇ ಕೊನೆಗೆ ಮಣ್ಣಾಗುತ್ತಾರೆ .

೧೩. ಆನೆ:

ಆನೆಯನ್ನು ಖೆಡ್ಡಾಕ್ಕೆ ಕೆಡವಲು ಹೆಣ್ಣಿನ ಪ್ರತಿಕೃತಿಗೆ ಆನೆಯ ಚರ್ಮ ನಿಲ್ಲಿಸುತ್ತಾರೋ ಹಾಗೆ ಯಾವ ಪುರುಷನು ಸ್ತ್ರೀ ಸುಖಕ್ಕೆ ಮರುಳಾಗುತ್ತಾನೆಯೋ ಅವನು ಹಾಳಗುತ್ತಾನೆ.

 

 

೧೪. ಭ್ರಮರ :

ಸೂರ್ಯವಿಕಾಸಿ ಕಮಲ ಸಂಜೆಯ ಸಮಯದಲ್ಲಿ ಮುಚ್ಚಿಕೊಳ್ಳುತ್ತದೆ ಒಂದು ವೇಳೆ ಅಲ್ಲಿ ಭ್ರಮರ ಇದ್ದರೆ ಅದು ಕೂಡ ಬಂಧನಕ್ಕೆ ಒಳಗಾಗುತ್ತಾನೆ ಆದ್ದರಿಂದ ವಿಷಯಗಳನ್ನು ಆದಷ್ಟು ಆಸಕ್ತಿಗಿಂತ ಹೆಚ್ಚಾಗಿ ಬೆಳೆಸಿಕೊಳ್ಳಬಾರದು.

೧೫. ಜಿಂಕೆ:

ವೇಗವಾಗಿ ಓಡುವ ಜಿಂಕೆ ಮಧುರ ಧ್ವನಿಗೆ ಮನಸೋತರೇ ಪ್ರಾಣ ಹೋಗುತ್ತದೆ ಹಾಗೆಯೇ ಮೋಹಪಾಶಕ್ಕೆ ಮಾನವ ಸಿಲುಕಿಕೊಳ್ಳಬಾರದು .

೧೬. ಮೀನು :

ಗಾಳಕ್ಕೆ ಸಿಕ್ಕ ಮೀನು ಸಾಯುವುದು ಹಾಗೆಯೇ ಸದಾ ರುಚಿಯನ್ನು ಬಳಸುವ ಮನುಷ್ಯ ಮರಣದ ಸುಳಿಗೆ ಸಿಲುಕುವನು.

೧೭.ವೇಶ್ಯೆ :

ಗಿರಾಕಿಗಾಗಿ ಬಹಳ ಹೊತ್ತು ಕಾಯುತ್ತಾ ಕುಳಿತಿರುವ ವೇಶ್ಯೆಗೆ ಆ ರಾತ್ರಿ ಯಾವ ಪುರುಷನು ಸಿಗಲಿಲ್ಲವೆಂದರೆ ಹೇಗೆ ವೈರಾಗ್ಯದ ಕಡೆಗೆ ಹೋಗುವಳೋ ಹಾಗೆ ಆಸೆ ಆಮಿಷ ಬಿಟ್ಟರೆ ಎಲ್ಲವು ಚಂದ .

೧೮. ಟಿಟ್ಟಿಭ ಪಕ್ಷಿ :

ಟಿಟ್ಟಿಭ ತನ್ನ ದೊಡ್ಡ ಕೊಕ್ಕಿನಿಂದ ಮೀನನ್ನು ಹಿಡಿಯುತ್ತದೆ ಹೀಗೆ ಹಿಡಿದ ತಕ್ಷಣ ಕಾಗೆ ಹದ್ದುಗಳು ಅದರ ಬೆನ್ನಟ್ಟಿ ಹಿಂಸೆ ಕೊಡುತ್ತದೆ , ಹೀಗೆ ಹಿಂಸೆ ತಾಳಲಾರದೆ ಟಿಟ್ಟಿಭ ಮೀನನ್ನು ಬಿಟ್ಟು ಹಾರಿ ನೆಮ್ಮದಿಯಾಗಿರುತ್ತದೆ , ಹಾಗೆ ಮನುಷ್ಯ ಮೋಹ ಬಿಟ್ಟರೆ ಆರಾಮಾಗಿರಬಹುದು.

೧೯. ಬಾಲಕ :

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಚಿಕ್ಕ ಮಗುವಾಗಿ ಇದ್ದರೆ ಒಳ್ಳೆಯದು.

 

೨೦. ಕೈಬಳೆ :

ಎರಡು ಬಳೆ ಒಂದಕ್ಕೊಂದು ತಗಲಿ ಶಬ್ದವಾಗುತ್ತದೆ, ಹಾಗೆ ಕೆಲವರ ಸಂಗ ಯಾವಾಗಲೂ ಜಗಳಕ್ಕೆ ದಾರಿಮಾಡಿಕೊಡುತ್ತದೆ ಆದ್ದರಿಂದ ಇಂತವರಿಂದ ದೂರವಿರಿ.

೨೧. ಶಸ್ತ್ರಗಳನ್ನು ತಯಾರಿಸುವವನು :

ಶಸ್ತ್ರಗಳನ್ನು ತಯಾರಿಸುವವನು ತನ್ನ ಧ್ಯಾನ ಅತ್ತ ಇತ್ತ ಹೊರಡಿಸಿದರೆ ಶಸ್ತ್ರ ಸರಿಯಾಗಿ ಮೂಡಿಬರುವುದಿಲ್ಲ , ಹಾಗೆಯೇ ಮನುಷ್ಯ ಸಾಧನೆಯನ್ನು ಧ್ಯಾನ ಕೊಟ್ಟು ಮಾಡಬೇಕು

೨೨. ಸರ್ಪ :

ಎರಡು ಸರ್ಪಗಳು ಎಂದಿಗೂ ಒಟ್ಟಿಗೆ ಇರುವುದಿಲ್ಲ ಹಾಗೆಯೇ ಯಾವಾಗಲೂ ಇಬ್ಬರು ಬುದ್ಧಿವಂತರು ಒಟ್ಟಿಗೆ ತಿರುಗಾಡ ಬಾರದು, ಮಿತವಾಗಿ ಮಾತನಾಡ ಬೇಕು. ಯಾರೊಂದಿಗೂ ಜಗಳ ಮಾಡ ಬಾರದು

೨೩. ಜೇಡ :

ಜೇಡವು ಬಲೆಯನ್ನು ಎಣೆದು ಮತ್ತೆ ಹಾಳಾದ ಮೇಲೆ ಕಟ್ಟುವುದೋ ಹಾಗೆಯೇ ದೇವರು ಹಾಳಾದ ಜಗತ್ತನ್ನು ಮತ್ತೆ ಮತ್ತೆ ನಿರ್ಮಾಣ ಮಾಡುತ್ತಾನೆ.

 

 

೨೪. ಕಣಜ :

ಹೇಗೆ ಭ್ರಮರವನ್ನು ಧ್ಯಾನಿಸುವ ಕೀಟವು ತಾನೇ ಭ್ರಮರವಾಗುತ್ತದೆಯೋ, ಹಾಗೆಯೇ ಏಕನಿಷ್ಠತೆಯಿಂದ ಪರಮಾತ್ಮತತ್ತ್ವದ ಚಿಂತನೆ ಮಾಡುವ ಯೋಗಿಯು ಪರಮಾತ್ಮ ಸ್ವರೂಪನಾಗುತ್ತಾನೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top