fbpx
ಕಿರುತೆರೆ

ಸ್ಟಾರ್ ಸುವರ್ಣ ವಾಹಿನಿ ಪ್ರೇಕ್ಷಕರಿಗೆ ಡಬಲ್ ಧಮಾಕಾ!

ಸ್ಟಾರ್ ಸುವರ್ಣ ವಾಹಿನಿ ಪ್ರೇಕ್ಷಕರಿಗೆ ಡಬಲ್ ಧಮಾಕಾ!

 

 

ಚೆಂದದ ಧಾರಾವಾಹಿಗಳ ಮೂಲಕವೇ ಸ್ಟಾರ್ ಸುವರ್ಣ ವಾಹಿನಿ ಕಳೆದೊಂದು ದಶಕದಿಂದ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಕಾಯ್ದಿಟ್ಟುಕೊಂಡಿದೆ. ನೂರಾರು ಸಂಚಿಕೆಗಳಾಚೆಗೂ ಕುತೂಹಲ ಉಳಿಸಿಕೊಂಡ ಅನೇಕ ಧಾರಾವಾಹಿಗಳನ್ನು ಕೊಟ್ಟ ಈ ವಾಹಿನಿಯ ಕಡೆಯಿಂದ ಮತ್ತೆರಡು ಚೆಂದದ ಸೀರಿಯಲ್‌ಗಳು ಪ್ರೇಕ್ಷಕರಿಗೆ ಮುದ ನೀಡಲು ತಯಾರಾಗಿವೆ. ಜಾನಕಿ ರಾಘವ ಹಾಗೂ ಪುಟ್ಮಲ್ಲಿ ಧಾರಾವಾಹಿಗಳನ್ನು ಶೀಘ್ರದಲ್ಲಿಯೇ ಪ್ರೇಕ್ಷಕರೆದುರು ಅನಾವರಣಗೊಳಿಸಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ. ಪ್ರೇಕ್ಷಕರ ಮನಸ್ಥಿತಿಯನ್ನು ಅರ್ಥೈಸಿಕೊಂಡು ಅವರ ಮನರಂಜನೆಯನ್ನೇ ಆಧ್ಯತೆಯಾಗಿಸಿಕೊಂಡಿರೋ ಈ ವಾಹಿನಿ ಇವೆರಡು ಧಾರಾವಾಹಿಗಳ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳೋ ಭರವಸೆಯಿಂದ ಮುಂದಡಿ ಇಡುತ್ತಿದೆ. ಇದೇ ತಿಂಗಳ ನಾಲಕ್ಕನೇ ತಾರೀಕಿನಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಈ ಧಾರಾವಾಹಿ ರಾತ್ರಿ ೯.೩೦ಕ್ಕೆ ಪ್ರಸಾರವಾಗಲಿದೆ.

ಜಾನಕಿ ರಾಘವ ಧಾರಾವಾಹಿ ಭಿನ್ನವಾದೊಂದು ಕಥಾ ಹಂದರ ಹೊಂದಿದೆ. ಈವತ್ತಿನ ಕಾಲಮಾನಕ್ಕೂ ಪ್ರಸ್ತುತವಾದ ಸೀತಾರಾಮರಂಥಾ ಜೋಡಿಯ ಕಥೆಯನ್ನು ಇಂದಿನ ವಾತಾವರಣಕ್ಕೆ ಅನುಗುಣವಾಗಿ ಹೊಸಾ ಬಗೆಯಲ್ಲಿ ಕಟ್ಟಿಕೊಡಲಾಗುತ್ತದೆಯಂತೆ. ದೇವರನ್ನು ಒಂದು ಮಾಡಲು ಹೋಗಿ ರಾಘವ ಜಾನಕಿಯರ ನಡುವೆ ಹಬ್ಬಿಕೊಳ್ಳೋ ಪ್ರೀತಿಯ ಕಥೆ ಈ ಧಾರಾವಾಹಿಯ ಮೂಲಕ ಕುತೂಹಲಕರವಾಗಿ ಅನಾವರಣಗೊಳ್ಳಲಿದೆ. ಇದು ಬಹುಮುಖ ಪ್ರತಿಭೆ ನವೀನ್ ಸಾಗರ್ ಅವರ ಸಂಭಾಷಣೆಯಲ್ಲಿ ಮೂಡಿ ಬರಲಿದೆ.

 

 

ಈಗಾಗಲೇ ಪ್ರೀತಿ ಇಲ್ಲದ ಮೇಲೆ, ಜೋಗುಳ, ಚಿಟ್ಟೆ ಹೆಜ್ಜೆ, ನಿಹಾರಿಕಾ ಮುಂತಾದ ಯಶಸ್ವೀ ಧಾರಾವಾಹಿಗಳನ್ನು ಕೊಟ್ಟಿರೋ ವಿನು ಬಳಂಜ ಜಾನಕಿ ರಾಘವ ಧಾರಾವಾಹಿಯನ್ನು ನಿರ್ದೇಶನ ಮಾಡಲಿದ್ದಾರೆ. ನಿಖಿಲ್ ಹೋಮ್ ಸ್ಕ್ರೀನ್ ಮೂಲಕ ಲಿಂಗೇಗೌಡ ಮತ್ತು ಸುಭಾಷ್ ಗೌಡ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರುಕಿರಣ್ ಸಂಗೀತದಲ್ಲಿ, ಅನುರಾಧಾ ಭಟ್ ಧ್ವನಿಯಲ್ಲಿ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಅಣಿಗೊಂಡಿದೆ. ಪವನ್ ಹಾಗೂ ಜೀವಿತಾ ರಾಘವ-ಜಾನಕಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಪದ್ಮಜಾ ರಾವ್ ತಾಯಿ ಪತ್ರದ ಮೂಲಕ ಏಳು ವರ್ಷದ ಬಳಿಕ ಕಿರುತೆರೆಗೆ ವಾಪಾಸಾಗಿದ್ದಾರೆ.

ಇದೇ ಡಿಸೆಂಬರ್ ೧೧ರಿಂದ ಆರಂಭವಾಗಲಿರೋ ಮತ್ತೊಂದು ಧಾರಾವಾಗಿ ಪುಟ್ಮಲ್ಲಿ. ಅನಾಥೆಯಾದ ಮನೆಗೆಲಸದ ಹುಡುಗಿಯೊಬ್ಬಳು ಆ ಮನೆಯ ಮಗನನ್ನೇ ಮದುವೆಯಾಗಬೇಕಾಗಿ ಬರೋದರ ಸುತ್ತ ನಡೆಯೋ ಕಥಾ ಹಂದರ ಹೊಂದಿರೋ ಈ ಧಾರಾವಾಹಿ ಹರೀಶ್ ಅವರ ಸಂಭಾಷಣೆಯೊಂದಿಗೆ ಮೂಡಿ ಬರಲಿದೆ. ಈ ಧಾರಾವಾಹಿಯನ್ನು ಅವನು ಮತ್ತೆ ಶ್ರಾವಣಿ, ಗೀತಾಂಜಲಿ ಮುಂತಾದ ಯಶಸ್ವೀ ಧಾರಾವಾಹಿಗಳನ್ನು ಕೊಟ್ಟಿರೋ ಸಂಜೀವ್ ತಗಡೂರ್ ನಿರ್ದೇಶನ ಮಾಡಲಿದ್ದಾರೆ. ಪುಟ್ಮಲ್ಲಿಯಾಗಿ ರಾಧಾ ರಮಣ ಖ್ಯಾತಿಯ ರಕ್ಷಾ ನಟಿಸಲಿದ್ದಾರೆ. ಜಸ್ಟ್ ಮಾತ್ ಮಾತಲ್ಲಿ ಧಾರಾವಾಹಿ ಖ್ಯಾತಿಯ ಯಶ್ ನಾಯಕನಾಗಿ ನಟಿಸಲಿದ್ದಾರೆ. ಶ್ರೀಧರ್ ಹೆಗಡೆ ಕ್ರುಷಿಬಲ್ ಕ್ರಿಯೇಷನ್ಸ್ ಕಡೆಯಿಂದ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top