fbpx
ಬಿಗ್ ಬಾಸ್

ದಿವಾಕರ್ ಅನುಕರಣೆ ಮಾಡುತ್ತಿದ್ದಾರೆ ಅಂದ್ರು ಪ್ರಥಮ್ ಮುಂದೆ ನಡೀತು ಅಕುಲ್ ಪ್ರಥಮ್ ಹೈ ಡ್ರಾಮಾ

ಬಿಗ್‌ಬಾಸ್‌ ಸೀಸನ್‌ 5 ಯಶಸ್ವಿಯಾಗಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ಅತಿಥಿಗಳಾಗಿ ಆಗಮಿಸಿದ್ದರು
ಆದರೆ ಶೂಟಿಂಗ್ ಇದ್ದ ಕಾರಣ ವಿಜಯ್‌ ರಾಘವೇಂದ್ರ ವೇದಿಕೆಗೆ ಆಗಮಿಸಲಿಲ್ಲ.

 

 

 

ಈ ವಾರ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದು ಚಂದ್ರು ಅವರನ್ನು ಮಾತನಾಡಿಸಿದ ಬಳಿಕ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ರು ಸುದೀಪ್‌ ಹೀಗೆ ಬಿಗ್ ಬಾಸ್ ಬಗೆಗಿನ ಅಭಿಪ್ರಾಯ ಪಡೆದುಕೊಂಡರು .

 

 

ಆಟ ಚೆನ್ನಾಗಿ ಆಡುತ್ತಿರುವವರು ರಿಯಾಜ್ ಎಂದು ಅಕುಲ್ ಉತ್ತರ ಕೊಟ್ಟರೆ , ಶ್ರುತಿಯವರು ದಿವಾಕರ್ ಹೆಸರು ತೆಗೆದುಕೊಂಡರು , ಸೆಲೆಬ್ರಿಟಿ ಗಳ ಮಧ್ಯೆ ತಾವು ಆಟ ಆಡಿದ ರೀತಿ ಇಷ್ಟವಾಯಿತು , ಸರಿ ಇಲ್ಲದ ವಿಷಯಗಳನ್ನು ಕಡ್ಡಿ ತುಂಡು ಮಾಡಿದ ಹಾಗೆ ಹೇಳುವುದು ಇಷ್ಟ ಎಂದರು .

 

 

ಮುಂದೆ ಪ್ರಥಮ್ ಸರಣಿ ಬಂದಾಗ ಪ್ರಥಮ್ ಕೂಡ ದಿವಾಕರ್ ಹೆಸರು ತೆಗೆದುಕೊಳ್ಳಲು ಮರೆಯಲಿಲ್ಲ , ಇದಕ್ಕೆ ಕಾರಣವಾಗಿ ಪ್ರಥಮ್ ‘ಹಿಂದಿನ ಸೀಸನ್ ನ ಸ್ಪರ್ಧಿಯನ್ನು ಅನುಕರಣೆ ಮಾಡುತ್ತಿದ್ದಾರೆ ಎಂದರು ಇಲ್ಲಿಗೆ ಬಂದಿರುವುದು ನಿಮ್ಮ ತನವನ್ನು ತೋರಿಸಲು ಈ ಶೋ ಇರುವುದು ನೀವು ನೀವಾಗಿದ್ದರೆ ಒಳ್ಳೆಯದು’ ಎಂದರೆ ಇದಕ್ಕೆ ಮಧ್ಯೆ ಮಾತಾಡಿದ ಅಕುಲ್ ‘ಯಾರನ್ನು ಅನುಕರಣೆ ಮಾಡುತ್ತಿದ್ದಾರೆ ? ಅವರ ಮನಸ್ಥಿತಿ ಹಾಗೆಯೇ ಇರಬಹುದೋ ಏನೋ’ ಎಂದಾಗ ವೇದಿಕೆಯ ಮೇಲೆ ಭಾರಿ ಕೋಲಾಹಲ ಉಂಟು ಮಾಡಿದರು ಅಕುಲ್ ಹಾಗು ಪ್ರಥಮ್ .

 

ಈ ವೇಳೆ ದಿವಾಕರ್ ನನ್ನನ್ನು ಅನುಕರಣೆ ಮಾಡುತ್ತಿದ್ದಾನೆ ಎಂದರು ಪ್ರಥಮ್ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top