fbpx
ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ  ಮೂರು ಜನ ಇರುವ ಪೋಟೋಗಳನ್ನು  ಮನೆಯಲ್ಲಿ  ಹಾಕಬಾರದು.

ಮನೆಯಲ್ಲಿ ಸಾಮಾನ್ಯವಾಗಿ ಕುಟುಂಬಸ್ಥರ ಫೋಟೋಗಳು ಇರುತ್ತವೆ. ಸು೦ದರವಾಗಿ ಅಲಂಕಾರ ಮಾಡಿಕೊಂಡು ಇಲ್ಲವೇ ಸುಮಧುರ  ಕ್ಷಣಗಳಲ್ಲಿ ತೆಗೆಸಿಕೊoಡ ಫೋಟೋಗಳನ್ನು ಮನೆಯಲ್ಲಿ ಹಾಕಿರುತ್ತಾರೆ. ಆದರೆ ಮನೆಯಲ್ಲಿ ಹಾಕಿದ ಆ ರೀತಿಯ ಫೋಟೋಗಳು ಕೂಡ ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳಿಂದ ಪ್ರಭಾವ ಬೀರುತ್ತವೆ.

ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಹಾಕಬಾರದು.

 

 

ಬಹುತೇಕರ ಮನೆಯಲ್ಲಿ ಈಗ ಒಂದೇ ಮಗುವು ಇರುತ್ತದೆ. ತಂದೆ ತಾಯಿ ಹಾಗೂ ಮಗು ಒಟ್ಟಿಗೆ ತೆಗೆಸಿಕೊಂಡ ಫೋಟೋವನ್ನು ಮನೆಯಲ್ಲಿ ಹಾಕಲಾಗುತ್ತದೆ. ಪೆ೦ಗ ಶುಯ  ಪ್ರಕಾರ ಇದು ಸರಿಯಲ್ಲ.

ಮನೆಯಲ್ಲಿ ಮೂರು ಜನರಿರುವ ಫೋಟೋ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ಮೂರು ಜನ ಇರುವ ಫೋಟೋವನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ಹಾಕಿಕೊಳ್ಳಬೇಡಿ.

 

 

ಅದರಲ್ಲೂ ಮೂರು ಸ್ನೇಹಿತರು ಒಟ್ಟಿಗೆ ಇರುವ ಫೋಟೋವನ್ನು ಮನೆಯಲ್ಲಿ ಹಾಕುವುದು ಒಳ್ಳೆಯದಲ್ಲ.  ಇದು ಮನೆ ಮತ್ತು  ಆ ಪರಿವಾರದವರ ಮೇಲೆ ಆರ್ಥಿಕವಾಗಿ ನಷ್ಟವನ್ನು ಉ೦ಟು ಮಾಡುವ ಪ್ರಭಾವ ಬೀರುತ್ತದೆ. ಸ್ನೇಹಿತರ ಮಧ್ಯೆ ಬಿರುಕು ಮೂಡಿಸುವ ಸಾಧ್ಯತೆ ಇರುತ್ತದೆ.

ಮೂರು ಮಂದಿ ಇರುವುದರ ಜೊತೆಗೆ ಅಕ್ಕ ಪಕ್ಕ ಕುಳಿತು ಅಥವಾ ನಿ೦ತುಕೊoಡು ಫೋಟೋಗಳನ್ನು  ತೆಗೆಸಿ ಕೊಳ್ಳಬೇಡಿ .

 

 

ಅವಶ್ಯವಾಗಿ ಬೇಕೆಂದಾದರೆ  ತ್ರಿಕೋಣಾಕಾರದಲ್ಲಿ ಕುಳಿತು ಫೋಟೊ ತೆಗೆಸಿಕೊಳ್ಳಿ. ಕುಟುಂಬದವರು, ಹಿರಿಯರು ಮೇಲೆ ಇರಬೇಕು. ನಂತರ ಮನೆಯ ಇನ್ನಿತರ ಸದಸ್ಯರು ಅವರ ಹಿಂದೆ ಇರಬೇಕು. ಮನೆಯ ಎದುರಿನ ಗೋಡೆಗೆ  ಎಂದು ಇಂತಹ ಫೋಟೋಗಳನ್ನು ಹಾಕಬಾರದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top