fbpx
ಮನೋರಂಜನೆ

ಕಳೆದ 60 ದಿನಗಳಲ್ಲಿ ಕನ್ನಡ ಚಿತ್ರ ನಿರ್ಮಾಪಕರು ಕಳೆದುಕೊಂಡಿದ್ದು ಬರೋಬ್ಬರಿ 60 ಕೋಟಿ !

ಹೌದು ಅಕ್ಟೋಬರ್ ನಲ್ಲಿ 18 ಹಾಗು ನವೆಂಬರ್ ನಲ್ಲಿ 23 ಚಿತ್ರಗಳು ಬಿಡುಗಡೆ ಭಾಗ್ಯ ಪಡೆದರು ಸಹ ಒಟ್ಟು 41 ಚಿತ್ರಗಳಲ್ಲಿ ಯಾವ ಚಿತ್ರವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಾಧ್ಯವಾಗಲಿಲ್ಲ !

 

 

ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕರು ಕಂಗಾಲಾಗಿದ್ದಾರೆ , ಭರ್ಜರಿ ಸ್ಟಾರ್ ಕ್ಯಾಸ್ಟ್ ಇದ್ದ ಉಪೇಂದ್ರ ಅಭಿನಯದ `ಉಪೇಂದ್ರ ಮತ್ತೆ ಬಾ’ ಭಾರಿ ನಿರೀಕ್ಷೆ ಹುಟ್ಟಿಸಿತ್ತು ಆದರೆ ಮೂರನೇ ವಾರಕ್ಕೆ ಥಿಯೇಟರ್ ನಿಂದ ಎತ್ತಂಗಗಡಿಯಾಯಿತು , ಇನ್ನು ಸತೀಶ್ ನೀನಾಸಂರ ‘ಡು ಆರ್ ಡೈ’ ಚಿತ್ರ `ಟೈಗರ್ ಗಲ್ಲಿ ಸದ್ದು ಮಾಡಲಿಲ್ಲ .

 

 

ಇನ್ನು ಶರಣ್ ಅಭಿನಯದ `ಸತ್ಯ ಹರಿಶ್ಚಂದ್ರ’ ಸದ್ದೇ ಇಲ್ಲದೆ ಹೊರಟು ಹೋಯಿತು , ಹೀಗಿರುವಾಗ ನಿರ್ಮಾಪಕರು ಪ್ರಚಾರಕ್ಕೆ ಖರ್ಚು ಮಾಡಿದ ಹಣವು ವಸೂಲಿಯಾಗದೆ ಇರುವುದು ದುಃಖದ ಸಂಗತಿ .

 

 

ಇನ್ನು ಸದಾಭಿರುಚಿಯ ಚಿತ್ರಗಳಾದ ವಿಭಿನ್ನ ಕಥಾ ಹಂದರವಿದ್ದ ‘ಕೆಂಪಿರ್ವೆ’, `ಹುಲಿರಾಯ’, `ಕಟಕ’, `ದಯವಿಟ್ಟು ಗಮನಿಸಿ’, `ಕಾಲೇಜ್ ಕುಮಾರ್’ ಅಡ್ರೆಸ್ ಇಲ್ಲದಂತೆ ಆದವು ಇನ್ನು ಮುಂದಾದರು ಪ್ರೇಕ್ಷಕನ ಅಭಿರುಚಿಗೆ ಅನುಗುಣವಾಗಿ ಚಿತ್ರಗಳು ಬಿಡುಗಡೆಯಾಗುವುದೇ ಕಾದು ನೋಡೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top