fbpx
ಕಿರುತೆರೆ

ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಶಾಕ್ ನೀಡಿದ ಬಿಗ್ ಬಾಸ್.

ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಶಾಕ್ ನೀಡಿದ ಬಿಗ್ ಬಾಸ್.

 

 

ಈಗಾಗಲೇ ಐವತ್ತು ದಿನ ಪೂರೈಸಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ 5 ನೇ ಆವೃತ್ತಿ ಮನೆಗೆ ಎಂಟ್ರಿ ಕೊಟ್ಟಿದ್ದ 17 ಜನರ ಪೈಕಿ 5 ಜನ ಮನೆಯಿಂದ ಹೊರಹೋಗಿದ್ದಾರೆ.ಸುಮಾರಾಜಕುಮಾರ್,ಮೇಘ, ದಯಾಳ್,ತೇಜಸ್ವಿನಿ ಮತ್ತು ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದಾರೆ. ದೇವ್ರಂಥಾ ಮನುಷ್ಯ ಚಿತ್ರದ ನಾಯಕಿ ವೈಷ್ಣವಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.

 

 

ಈ ವಾರ ಮನೆಯಿಂದ ಹೊರಹೋಗಲು ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸಲಿಲ್ಲ. ಮನೆಗೆ ಹೊಸದಾಗಿ ಬಂದಿದ್ದ ವೈಷ್ಣವಿ ಮತ್ತು ಮನೆಯ ಈ ವಾರದ ಕ್ಯಾಪ್ಟನ್ ಆಗಿದ್ದ ಜಗನ್ ಅವರನ್ನು ಹೊರತು ಪಡಿಸಿ ಉಳಿದ 11 ಸ್ಪರ್ಧಿಗಳನ್ನೂ ಕೂಡ ನಾಮಿನೇಟ್ ಮಾಡಲಾಯಿತು.

 

 

ಮನೆಯ ನಿಯಮದಂತೆ ಪ್ರತಿ ವಾರ ಸದಸ್ಯರ ಆಯ್ಕೆ, ಇನ್ನಿತರ ವಿಶೇಷ ನಿಯಮಗಳ ಅನುಸಾರ ಸದಸ್ಯರು ಮನೆಯಿಂದ ಹೊರಹೋಗಲು ನಾಮಿನೇಟ್ ಆಗುತ್ತಿದ್ದರು. ಕಳೆದ ಏಳು ವಾರಗಳಲ್ಲೂ ಕೂಡ ನಾಮಿನೇಷನ್ ಪ್ರಕ್ರಿಯೆ ಇದೆ ರೀತಿ ನಡೆದಿತ್ತು. ಸದಸ್ಯರು ಮನೆಯನ್ನು ಪ್ರವೇಶಿಸಿ ಈಗಾಗಲೇ 50 ದಿನಗಳು ಕಳೆದಿದ್ದು ಈ ಹಂತದಲ್ಲಿ ಮನೆಯ ಸದಸ್ಯರ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನು ಏಕಕಾಲಕ್ಕೆ ತಿಳಿಯಲು ಈವಾರದ ಕ್ಯಾಪ್ಟನ್ ಆಗಿರುವ ಜಗನ್ ಮತ್ತು ಮನೆಗೆ ಹೊಸದಾಗಿ ಬಂದಿದ್ದ ವೈಷ್ಣವಿಯವರನ್ನು ಹೊರತುಪಡಿಸಿ ಉಳಿದ 11 ಸ್ಪರ್ಧಿಗಳನ್ನೂ ನೇರವಾಗಿ ನಾಮಿನೇಟ್ ಮಾಡಲಾಗಿದೆ.

ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವ ಸದಸ್ಯರ ಪೈಕಿ ನಿಮ್ಮ ಪ್ರಕಾರ ಯಾರು ಸೇವ್ ಆಗಬೇಕು ಮತ್ತು ಯಾರು ಮನೆಯಿಂದ ಹೊರ ಹೋಗಬೇಕು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top