fbpx
ಮನೋರಂಜನೆ

ಪ್ರೇಮಬರಹದ ಸ್ಪೆಷಲ್ ಸಾಂಗ್’ನಲ್ಲಿ ಸರ್ಜಾ ಫ್ಯಾಮಿಲಿಯ ಜೊತೆ ಹೆಜ್ಜೆಹಾಕಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಪ್ರೇಮಬರಹದ ಸ್ಪೆಷಲ್ ಸಾಂಗ್’ನಲ್ಲಿ ಸರ್ಜಾ ಫ್ಯಾಮಿಲಿಯ ಜೊತೆ ಹೆಜ್ಜೆಹಾಕಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್..!

 

 

ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪ್ರೇಮಬರಹ’ ಚಿತ್ರ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಮೂಡಿಬರುತ್ತಿದೆ.ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡುತ್ತಿದ್ದಾರೆ.

 

 

ಹೌದು ಸ್ವತಃ ಅರ್ಜುನ್ ಸರ್ಜಾ ಅವರೇ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿರುವ ಅಪ್ಪ ಮಗಳ ಕಾಂಬಿನೇಷನ್ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ಇದೆ. ಪ್ರೇಮ ಬರಹ’ ಸಿನಿಮಾದ ಕೊನೆಯ ಹಾಡಿನ ಚಿತ್ರೀಕರಣ ಇನ್ನು ಬಾಕಿ ಉಳಿದಿದ್ದು ಈ ಹಾಡನ್ನು ವಿಶೇಷವಾಗಿ ಮೂಡಿಬರಿಸಲು ಅರ್ಜುನ್ ಸರ್ಜಾ ನಿರ್ಧರಿಸಿದ್ದಾರೆ. ಈ ಹಾಡಿನಲ್ಲಿ ಸರ್ಜಾ ಕುಟುಂಬದ ಮೂವರು ನಟರ ಜೊತೆಗೆ ದರ್ಶನ್ ಕೂಡ ಕಾಣಿಸಿಕೊಳ್ಳಲಿದ್ದಾರಂತೆ.

 

 

ದರ್ಶನ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಅರ್ಜುನ್ ಸರ್ಜಾ ಒಟ್ಟಿಗೆ ಹೆಜ್ಜೆ ಹಾಕಲಿರುವ ಈ ಹಾಡನ್ನು ನಾಲ್ಕು ದಿನಗಳ ಶೂಟ್ ಮಾಡಲು ಅರ್ಜುನ್ ಸರ್ಜಾ ನಿರ್ಧರಿಸಿದ್ದಾರೆ. ನೃತ್ಯ ನಿರ್ದೇಶಕ ಮೋಹನ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ. ಹಾಡಿನಲ್ಲಿ ಹನುಮಾನ್ ಚಾಲೀಸಾ ಇದೆಯಂತೆ.

 

 

 

ಅಂದಹಾಗೆ ಪ್ರೇಮಬರಹ ಚಿತ್ರಕ್ಕೆ ಬಿಗ್ ಬಾಸ್ ಸೀಸನ್ 3ರ ರನ್ನರ್ ಅಪ್ ಚಂದನ್ ನಾಯಕ. ಸಾಧು ಕೋಕಿಲಾ, ಸುಹಾಸಿನಿ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದು ಜೆಸ್ಸಿ ಗಿಫ್ಟ್ ಅವರ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಕೂಡ ಅರ್ಜುನ್ ಸರ್ಜಾ ಅವರೇ ಹೊತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top