fbpx
ಮನೋರಂಜನೆ

ಕಿಚ್ಚನಿಗೆ ಶ್ರುತಿ ಹರಿಹರನ್‌ ಹೀರೋಯಿನ್…?

ಕಿಚ್ಚನಿಗೆ ಶ್ರುತಿ ಹರಿಹರನ್‌ ಹೀರೋಯಿನ್…?

 

 

ಅಂಬರೀಶ್ ಮುಖ್ಯಭೂಮಿಕೆಯಲ್ಲಿರೋ ಅಂಬಿ ನಿಂಗೆ ವಯಸಾಯ್ತೋ ಚಿತ್ರ ಟೈಟಲ್ ಕಾರಣದಿಂದಲೇ ಭಲೇ ಪ್ರಸಿದ್ಧಿ ಪಡೆದಿದೆ. ಚಿತ್ರೀಕರಣಕ್ಕೂ ಮುಂಚೆಯೇ ಇಂಥಾದ್ದೊಂದು ಕ್ರೇಜ್ ಹುಟ್ಟಿಕೊಂಡಿರೋದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಅವರೇ ನಿರ್ಮಿಸಿ, ತಾವೇ ಸ್ವತಃ ಒಂದು ಪಾತ್ರವನ್ನೂ ನಿರ್ವಹಿಸೋ ವಿಚಾರ ಈಗಾಗಲೇ ಜಾಹೀರಾಗಿದೆ.

 

 

ಅಂಬರೀಷ್ ನಾಯಕನಾಗಿ ನಟಿಸುತ್ತಿರುವ “ಅಂಬಿ ನಿಂಗೆ ವಯಸ್ಸಾಯ್ತೋ” ಚಿತ್ರದಲ್ಲಿ ಅಂಬರೀಷ್ ಅವರ ಫ್ಲಾಶ್ ಬ್ಯಾಕ್ ದೃಶ್ಯಗಳಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.ಯುವಕ ಅಂಬಿಯ ಪಾತ್ರದಾರಿಯಾಗಿರುವ ಸುದೀಪ್ ರವರಿಗೆ ನಾಯಕಿಯನ್ನು ಇನ್ನು ಆಯ್ಕೆ ಮಾಡಿರಲಿಲ್ಲ. ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ನಟಿ ಶ್ರುತಿಹರಿಹರನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳುತ್ತಿದೆ. ಈಗಾಗಲೇ ಶ್ರುತಿ ಹರಿಹರನ್‌’ರವರ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿದಿದ್ದು,ಸುದೀಪ್ ರವರಿಗೆ ನಾಯಕಿಯಾಗಿ ಬಹುತೇಕ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

 

 

ಗುರುದತ್ತ ಗಾಣಿಗ ನಿರ್ದೇಶನದ ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.ಅರ್ಜುನ್ಯ ಜನ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಷ್ ಅವರ ಫ್ಲಾಷ್ ಬ್ಯಾಕ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.ಚಿತ್ರದಲ್ಲಿ ಅಂಬರೀಷ್’ಗೆ ನಟಿ ಸುಹಾಸಿನಿ ನಾಯಕಿಯಾಗಿದ್ದಾರೆ. ಡಿಸೆಂಬರ್‌ 7 ಅಥವಾ 8ರಿಂದ ಚಿತ್ರೀಕರಣ ಶುರುವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top