fbpx
ಮನೋರಂಜನೆ

ಹೊಸ ಪ್ರಯೋಗದೊಂದಿಗೆ, ಹೊಸಬರ ಜತೆ ಯೋಗರಾಜ್ ಭಟ್ ಸಿನಿಮಾ.

ಹೊಸ ಪ್ರಯೋಗದೊಂದಿಗೆ, ಹೊಸಬರ ಜತೆ ಯೋಗರಾಜ್ ಭಟ್ ಸಿನಿಮಾ.

 

 

‘ಮುಗುಳುನಗೆ’ ಸಿನಿಮಾದ ನಂತರ ಯೋಗರಾಜ್ ಭಟ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಭಟ್ಟರು ಶಿವರಾಜ್ ಕುಮಾರ್ ಜೊತೆ ಸೇರಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಶಿವಣ್ಣನ ಜೊತೆ ಮುಂದಿನ ವರ್ಷ ಸಿನಿಮಾ ಮಾಡುವುದರಿಂದ ಅಲ್ಲಿಯವರೆಗೂ ಸುಮ್ಮೆನೆ ಯಾಕೆ ಕೂರೋದು ಅಂತ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ..

 

 

ಸದ್ಯ ಭಟ್ರು ಹೊಸ ಹುಡುಗರನ್ನು ಇಟ್ಟುಕೊಂಡು ಒಂದು ಪ್ರಯೋಗಾತ್ಮಕ ಚಿತ್ರವನ್ನು ಮಾಡಲು ಮುಂದಾಗಿದ್ದು ಚಿತ್ರಕ್ಕೆ ನಾಯಕ ನಾಯಕಿಯ ಹುಡುಕಾಟದಲ್ಲಿದ್ದಾರೆ. ಇನ್ನೂ ಹೆಸರಿಡದ ಈ ಹೊಸ ಚಿತ್ರಕ್ಕೆ ನಾಳೆ ಸರಳವಾಗಿ ಮುಹೂರ್ತ ನೆರವೇರಿಸಲಿದ್ದು ಇದೇ ಡಿಸೆಂಬರ್ 18ರಿಂದ ಚಿತ್ರದ ಕೆಲಸಗಳು ಪ್ರಾರಂಭವಾಗಲಿದೆ. ಯೋಗರಾಜ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಸ್ವತಃ ತಾವೇ ಯೋಗರಾಜ್ ಭಟ್ ಈ ಚಿತ್ರವನ್ನು ನಿರ್ಮಾಣಮಾಡುತ್ತಿದ್ದಾರೆ.

 

 

ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮತ್ತು ಸುಜ್ಞಾನ್ ಮೂರ್ತಿಯವರ ಛಾಯಾಗ್ರಹಣವಿರುತ್ತದೆ. ಈ ಚಿತ್ರಕ್ಕೆ ಕಾಂತರಾಜುರವರು ಕತೆ ಬರೆದಿದ್ದು ಮಾಸ್ತಿ ಎಂಬುವವರು ಚಿತ್ರಕತೆ ಬರೆಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top