fbpx
ಮನೋರಂಜನೆ

Entertainment ಚಾನಲ್ ಗಳ TRP ದರ್ಬಾರು

EXCLUSIVE!!!
Entertainment ಚಾನಲ್ ಗಳ TRP ದರ್ಬಾರು

ಈ ವಾರ ಯಾರದು ಹೆಚ್ಚು ಕಾರುಬಾರು?
(Week 47: November 18 to 24, 2017)

ಕನ್ನಡದ ಮನರಂಜನಾ ವಾಹಿನಿಗಳ ಕಾರ್ಯಕ್ರಮಗಳ TRP ಗೇಮ್ ನಲ್ಲಿ ಈ ಬಾರಿ ಭಾರೀ ಹೊಡೆತ ಬಿದ್ದಿರೋದು ಸ್ಟಾರ್ ಸುವರ್ಣ ವಾಹಿನಿಗೆ. ಸುವರ್ಣ ಎರಡನೇ ಬಾರಿಗೆ ಮೊನ್ನೆ ಮೊನ್ನೆ ಕಣ್ತೆರೆದಿರುವ ಕಲರ್ಸ್ ಸೂಪರ್ ಗಿಂತ ಹಿಂದೆ ಬಿದ್ದಿರೋದು ಶಾಕಿಂಗ್ ಅನ್ನಬಹುದು. ಜೊತೆಗೆ ಬಿಗ್ ಬಾಸ್ ನಂತಹ ಬಿಗ್ ಟಿಕೆಟ್ ಶೋ ಇರೋ ಕಾರಣ ಸೂಪರ್ ನ ಟೈಮ್ ಸೂಪರ್ ಆಗಿ ಓಡುತ್ತಿರೋದೂ ಇಲ್ಲವೆನ್ನೋದಕ್ಕಾಗಲ್ಲ.

 

 

ಇಲ್ಲಿದೆ ಟಿವಿ ಚಾನಲ್ ಗಳ TRP ಲಿಸ್ಟ್:
(Week 47: November 18 to 24, 2017)
ಕಲರ್ಸ್ ಕನ್ನಡ: 730
ಝೀ ಕನ್ನಡ: 486
ಉದಯ: 392
ಕಲರ್ಸ್ ಸೂಪರ್: 255
ಸ್ಟಾರ್ ಸುವರ್ಣ: 241
ಕಸ್ತೂರಿ: 83
ಸ್ಟಾರ್ ಸುವರ್ಣ ಪ್ಲಸ್: 57

ಬಿಗ್ ಬಾಸ್ ಎಲ್ಲರ ಮನಗೆದ್ದಿರೋ ಶೋ. 5ನೇ ಸೀಜನ್ ನಡೀತಿದೆ, ಕಂಟೆಸ್ಟೆಂಟ್ ಗಳು ಅಷ್ಟೊಂದು ಗರಮ್ ಇಲ್ಲಾ ಅನ್ನೋ ಮಾತು ಕೇಳಿ ಬಂದಿದ್ರೂ, ಈಗಲೂ ಎಲ್ಲೆೆಡೆ ಬಿಗ್ ಬಾಸ್ ದೇ ಹವಾ.
ಈ ಶೋ, ಕಲರ್ಸ್ ಸೂಪರ್ ನಲ್ಲಿ ಬರುತ್ತಿರೋದ್ರಿಂದ TRP ಸ್ವಲ್ಪ ಹೊಡೆಸ್ಕೊಂಡಿದೆ.
ಅದ್ರೂನೂ ಟಾಪ್ ರಿಯಾಲಿಟಿ ಶೋಗಳ ಪೈಕಿ ಇದರ ಸದ್ದು ಕಮ್ಮಿಯೇನಿಲ್ಲ ಬಿಡಿ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತನ್ನ ಹವಾ ಮೇಂಟೇನ್ ಮಾಡಿದೆ.
ಇಲ್ಲಿದೆ ಬಿಗ್ ಶೋಗಳ ಸ್ಮಾಲ್ ಲಿಸ್ಟ್.

 

 

 

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್: 8
ಡ್ರಾಮಾ ಜೂನಿಯರ್ಸ್: 6.7
ಬಿಗ್ ಬಾಸ್: 4.3
ಕಾಮಿಡಿ ಟಾಕೀಸ್: 4.1

ಇನ್ನು ಸೀರಿಯಲ್ ಗಳ ಪೈಕಿ ಎಲ್ಲಾ ಶೋಗಳೂ ಆಲ್ಮೋಸ್ಟ್ ಅದೇ ಸ್ಥಾನಗಳಲ್ಲಿ ಇವೆ.
ಟಾಪ್ 5 ಶೋಗಳೂ ಎಂದಿನಂತೆ ಕಲರ್ಸ್ ಕನ್ನಡದ್ದೇ ಪಾಲು. ಉದಯ ವಾಹಿನಿಯ ನಂದಿನಿ ಸ್ವಲ್ಪ ಕಾಂಪಿಟೀಶನ್ ಕೊಟ್ರೂ ಟಾಪ್ 5ರೊಳಗೆ ಬರೋದಕ್ಕೆ ಅದರಿಂದ ಸಾಧ್ಯವಾಗಿಲ್ಲ.

 

 

ಇಲ್ಲಿದೆ ಸೀರಿಯಲ್ ಗಳ TRP ಲಿಸ್ಟ್:

ಪುಟ್ಟಗೌರಿ ಮದುವೆ: 14
ಅಗ್ನಿಸಾಕ್ಷಿ: 13.9
ಲಕ್ಷ್ಮೀ ಬಾರಮ್ಮ: 9.5
ಕುಲವಧು: 8.7
ರಾಧಾರಮಣ: 8.2

ಝೀ ಕನ್ನಡದಲ್ಲಿ ನಾಗಿಣಿ 6.1 ಗಳಿಸಿ ಸೀರಿಯಲ್ ಗಳ ಪೈಕಿ ಟಾಪ್ ಶೋ ಅನ್ನಿಸಿಕೊಂಡಿದ್ದರೆ, 6.4 ಗಳಿಸಿ ನಂದಿನಿ, ಉದಯ ಟಿವಿಯ ಟಾಪ್ ಶೋ ಆಗಿದೆ, ಕಲರ್ಸ್ ಸೂಪರ್ ನಲ್ಲಿ ನಾಗಕನ್ನಿಕೆ (2.3) ಹಾಗೂ ಸುವರ್ಣದಲ್ಲಿ ಸಿಂಧೂರ 4.3 ಗಳಿಸಿದೆ. ವರ್ಷಾನುಗಟ್ಟಲೆ ಪ್ರಸಾರವಾದ ಕಳೆದವಾರ ಕೊನೆಗೊಂಡ ಅಮೃತವರ್ಷಿಣಿ 3.6 ಗಳಿಸಿ ತನ್ನ ಇನ್ನಿಂಗ್ಸ್ ಮುಗಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top