fbpx
ಭವಿಷ್ಯ

ಡಿಸೆಂಬರ್ 07 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೦೭ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೩೩
ಸೂರ್ಯಾಸ್ತ : ೧೭:೪೯
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಕೃಷ್ಣ ಪಕ್ಷ
ತಿಥಿ : ಚೌತಿ
ನಕ್ಷತ್ರ : ಪುಷ್ಯ
ಯೋಗ : ಬ್ರಹ್ಮ
ಪ್ರಥಮ ಕರಣ : ಬಾಲವ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೮ – ೧೨:೩೩
ಅಮೃತಕಾಲ : ೧೪:೦೩ – ೧೫:೩೧

ರಾಹು ಕಾಲ: ೧೩:೩೫ – ೧೫:೦೦
ಗುಳಿಕ ಕಾಲ: ೦೯:೨೨ – ೧೦:೪೬
ಯಮಗಂಡ: ೦೬:೩೩ – ೦೭:೫೭

 

ಮೇಷ (Mesha)

ವೃತ್ತಿಪರರಿಗೆ ವಿಶ್ರಾಂತಿ ಭಾಗ್ಯ, ಬಂಧುಮಿತ್ರರಿಂದ ವಿಮರ್ಶೆ ಟೀಕೆಗಳು ವ್ಯಾಪಕವಾಗುತ್ತವೆ. ದೂರದೃಷ್ಟಿಯಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ವೃಷಭ (Vrushabha)

ಕೆಲವು ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ, ಆದರೆ ಗುರುವಿನ ಬಲದಿಂದ ದೃಢರಾಗುತ್ತೀರಿ. ಕುಟುಂಬದಲ್ಲಿ ಉತ್ತಮ ಪ್ರಗತಿ. ಕಚೇರಿಯಲ್ಲಿ ಬಿಕ್ಕಟ್ಟು ನಿವಾರಣೆ ಆಗಲಿದೆ. ಮುಂದೆ ಹಮ್ಮಿಕೊಳ್ಳುವ ಯೋಜನೆಗಳ ವಿಚಾರದಲ್ಲಿ ಹಿತಚಿಂತಕರೊಡನೆ ಸಮಾಲೋಚನೆ.

 

ಮಿಥುನ (Mithuna)

ಜನಪ್ರಿಯತೆ ಹೆಚ್ಚಾಗುವುದು. ವ್ಯಾಪಾರ ವ್ಯವಹಾರಗಳು ನಿರೀಕ್ಷೆಗೆ ತಕ್ಕಷ್ಟು ವರಮಾನವಿರುತ್ತದೆ. ಬಂಧುಗಳಿಂದ ಅಥವಾ ಸರಕಾರದಿಂದ ಮಾನಸಿಕ ಕಿರಿಕಿರಿ ಆಗುವುದು.

 

ಕರ್ಕ (Karka)

ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಉಂಟಾದರೂ ಸಂಜೆಯ ವೇಳೆಗೆ ಅನುಕೂಲವಾಗುವುದು. ಮನೆಯ ವಿದ್ಯುತ್ ಉಪಕರಣಗಳ ರಿಪೇರಿಗೆ ಖರ್ಚು ಮಾಡಬೇಕಾಗುವುದು. ಪ್ರಯಾಣದಲ್ಲಿ ಎಚ್ಚರ.

 

ಸಿಂಹ (Simha)

ನಿಮ್ಮ ಕಾರ್ಯಗಳಲ್ಲಿ ತಾಳ್ಮೆ ವಹಿಸಿ. ಅವಸರದಿಂದ ಕಾರ್ಯ ಸಿದ್ಧಿಸುವುದಿಲ್ಲ. ಈ ದಿನ ಉತ್ತಮ ವಾರ್ತೆಯನ್ನು ಕೇಳುವಿರಿ. ಸ್ಥಿರಾಸ್ತಿ ಖರೀದಿಗೆ ಚಿಂತಿಸುವಿರಿ. ತಾಯಿಯವರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

ಕನ್ಯಾರಾಶಿ (Kanya)

ವ್ಯಾಪಾರ-ವ್ಯವಹಾರದಲ್ಲಿ ನಂಬಿಕೆಗೆ ದ್ರೋಹವಾಗುವ ಸಾಧ್ಯತೆ. ಕೈಕೆಳಗಿನ ಕೆಲಸಗಾರರು ಅಸಹಕಾರ ತೋರುವರು. ಹಾಗಾಗಿ ಹಮ್ಮಿಕೊಂಡ ಪ್ರಾಜೆಕ್ಟನ್ನು ಸರಿಯಾದ ಸಮಯಕ್ಕೆ ಮುಗಿಸಲು ಆಗುವುದಿಲ್ಲ. ಆರೋಗ್ಯದತ್ತ ಗಮನ ನೀಡಿ.

 

ತುಲಾ (Tula)

ಮನೆಯಲ್ಲಿ ಭೋಗ-ಭಾಗ್ಯಗಳನ್ನು ಕಾಣುವಿರಿ. ಎಲ್ಲರೂ ನಿಮ್ಮನ್ನು ಕೊಂಡಾಡುವರು. ಸ್ನೇಹಕೂಟದಲ್ಲಿ ಭಾಗವಹಿಸುವಿರಿ. ಪರಿಶ್ರಮಕ್ಕೆ ತಕ್ಕ ಪ್ರತಿಲವಿದೆ. ಕುಟುಂಬದಲ್ಲಿ ಆನಂದ ಹೆಚ್ಚಾಗಲಿದೆ.

 

ವೃಶ್ಚಿಕ (Vrushchika)

ಸಮಾಜದಲ್ಲಿ ನಿಮ್ಮ ಪ್ರತಿಷ್ಟೆಯು ಬೆಳೆದು ಸನ್ಮಾನ ಉಂಟಾಗುವ ಸಾಧ್ಯತೆ. ನಿಮ್ಮಿಂದ ದೂರ ಹೋದವರು ಪುನಃ ನಿಮ್ಮ ದಾರಿಗೆ ಬರುವರು. ಉನ್ನತ ಅಕಾರಿಗಳ ಭೇಟಿಯಿಂದ ಮಹತ್ವದ ನಿರ್ಧಾರ ತಳೆಯುವಿರಿ. ಹರ್ಷದ ವಾತಾವರಣ.

 

ಧನು ರಾಶಿ (Dhanu)

ನಿಮ್ಮ ಕಾರ್ಯಗಳನ್ನು ಎದುರಿಗೆ ಹೊಗಳಿ ಹಿಂದುಗಡೆ ತೆಗಳುವ ಮಂದಿಯಿಂದ ದೂರವಿರಿ. ಆಂಜನೇಯ ಸ್ತೋತ್ರ, ಶನೇಶ್ವರ ದೇವಸ್ಥಾನಕ್ಕೆ ಹೋಗಿ ಬನ್ನಿರಿ. ಮನಸ್ಸಿನ ತುಮುಲಗಳು ಕಡಿಮೆ ಆಗುವುದು.

 

ಮಕರ (Makara)

ಮುಂಜಾನೆ ಮನಸ್ಥಿತಿ ಸರಿ ಇಲ್ಲದಿರುವ ಸಾದ್ಯತೆ.ಆದರೆ ಮಧ್ಯಾಹ್ನ ನಂತರ ಸರಿಯಾಗುವುದು. ಧನಾತ್ಮಕ ಚಿಂತನೆಯಿಂದ ಯಶಸ್ಸು. ವಿರೋಧಿಗಳಿಗೆ ಸೋಲು. ವಿವಾಹ ಮಂಗಳಕಾರ್ಯಗಳಲ್ಲಿ ಅಡೆ-ತಡೆ ಬರುವುದು.

 

ಕುಂಭರಾಶಿ (Kumbha)

ವ್ಯಾಪಾರ, ವಹಿವಾಟುಗಳಲ್ಲಿ ಯಶಸ್ಸು ಪಡೆಯುವಿರಿ. ಯೋಚಿತ ಕಾರ್ಯ ಸಿದ್ಧಿಸುವುದು. ಗುರು ಹಿರಿಯರ ಆಶೀರ್ವಾದ ದೊರೆಯುವುದು. ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುವುದು.

 

ಮೀನರಾಶಿ (Meena)

ಜಾಗ್ರತೆಯಿಂದ ವ್ಯವಹರಿಸಿರಿ. ಹಣಕಾಸಿನ ವಿಷಯದಲ್ಲಿ ಯೋಚಿಸಿ ಹೆಜ್ಜೆಯಿಡಿ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಹಣಕಾಸಿನ ತೊಂದರೆ ಇರುವುದಿಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top