fbpx
ದೇವರು

ಸತ್ತವರನ್ನು ರಕ್ಷಿಸುವ ಪವಾಡವಿರುವ ಮಹಾಭಾರತದ ಧರ್ಮರಾಯನ ಕೈಯಲ್ಲಿ ಪ್ರತಿಷ್ಠಾಪನೆಯಾಗಿರುವ ದೇವಾಲಯ ನಿಗೂಢತೆಯಿಂದ ತುಂಬಿದೆ

 

ಮಹಾಭಾರತಕ್ಕೆ ಸಂಬಂಧ ಹೊಂದಿರುವ ದೇವಾಲಯ:

 

 

ಪುರಾತನವಾದ ಲಖಮಂಡಲ್, ಎಎಸ್ಐ ಸಂರಕ್ಷಿತ ತಾಣಯಾಗಿದ್ದು ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿದೆ , ದಂತಕಥೆಗಳಿಂದ ತುಂಬಿದೆ:
ಲಖಮಂಡಲ್”ಯಮುನಾ ತೀರದಲ್ಲಿ ಇರುವ ಒಂದು ಹಳ್ಳಿ,ನಾಲ್ಕು ಯುಗಗಳಾದ್ಯಂತ ಇತಿಹಾಸವನ್ನು ಹೊಂದಿರುವ ಒಂದು ಹಳ್ಳಿ,ಪಾಂಡವರು ಮತ್ತು ಕೌರವರು ತಂಗಿದ್ದ ಗ್ರಾಮ,ಯಮುನಾ ನದಿ ಆ ಪ್ರದೇಶದ ಎಲ್ಲಾ ಜೀವಗಳಿಗೂ ಸ್ವರ್ಗೀಯ ಆನಂದ ಕೊಡುತ್ತದೆ !

ಶಿವನನ್ನು ಪೂಜಿಸುವ ದೇವಸ್ಥಾನವಾದರಿಂದ ಲಖಮಂಡಲ್ ಪ್ರಸಿದ್ಧವಾಗಿದೆ. ಇಲ್ಲಿ ಪಾಂಡವರು ಲಕ್ಷಾಂತರ ಶಿವಲಿಂಗವನ್ನು ಪ್ರತಿಷ್ಠಾಪಿಸುವುದರಿಂದ ಈ ಸ್ಥಳಕ್ಕೆ ಲಖಮಂಡಲ್ ಎಂಬ ಹೆಸರು ಬಂದಿದೆ .

 

 

ಈ ದೇವಸ್ಥಾನದ ಪ್ರಮುಖ ಆಕರ್ಷಣಿ ಮಾನವ ಮತ್ತು ದಾನವರ ಪ್ರತಿಮೆ ಮತ್ತು ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಇರುವ ದ್ವಾರಪಾಲಕರು.

ಆ ಸ್ಥಳದಲ್ಲಿ ಸತ್ತು ಹೋದರೆ ಅವರ ದೇಹವನ್ನು ಅಲ್ಲೇ ಬಿಟ್ಟರೆ ಅವರು ಮಾಡಿದ ಪುಣ್ಯದ ಫಲ ಮಾನವ ಪ್ರತಿಮೆಯ ಸಹಾಯ ದಿಂದ ಮರಳಿ ಜೀವ ಬರುತ್ತದೆ ಇಲ್ಲವಾದರೆ ದಾನವ ಪ್ರತಿಮೆಯ ಸಹಾಯದಿಂದ ಆತ್ಮ ಶುದ್ಧಿಯಾಗಿ ವೈಕುಂಠದ ಸ್ವರ್ಗದ ವಾಸಸ್ಥಾನಕ್ಕೆ ಹೊರಟು ಹೋಗುತ್ತದೆ ಎಂದು ಇಲ್ಲಿನ ಜನರ ನಂಬಿಕೆ.

 

 

ಸತ್ತವರನ್ನು ಈ ದೇವರು ರಕ್ಷಿಸುತ್ತಾನೆ ಎಂದು ಅನೇಕ ಪುರಾಣ ಕಥೆಗಳು ಹೇಳುತ್ತವೆ

ಯುಧಿಷ್ಠಿರ ಅಥವಾ ಧರ್ಮರಾಜ ಇಲ್ಲಿ ಪ್ರಮುಖ ಲಿಂಗವನ್ನು ಪ್ರತಿಷ್ಠಾಪಿಸಿದರೆ . ಭೀಮ, ಅರ್ಜುನ, ನಕುಲಾ ಮತ್ತು ಸಹದೇವಗಳಿಗೆ ಸೇರಿದ ಸಣ್ಣದಾದ ಲಿಂಗ ರಚನೆಯ ಸುತ್ತ ನಾಲ್ಕು ಆಸನಗಳು ಇವೆ. ದೇವಾಲಯದ ಕಚೇರಿಯಲ್ಲಿ ಈ ಲಿಂಗಗಳನ್ನು ಸಂರಕ್ಷಿಸುತಿದ್ದಾರೆ.

 

 

ದೇವಸ್ಥಾನದ ಸುತ್ತಲೂ ವಿವಿಧ ಗಾತ್ರಗಳಲ್ಲಿರುವ ಹಲವಾರು ಮಂಡಲಗಳು ಅಥವಾ ಲಿಂಗಗಳನ್ನೂ ನಾವು ನೋಡಬಹುದು . ಇಲ್ಲಿ ಗ್ರ್ಯಾಫೈಟ್ನಿಂದ ತಯಾರಿಸಿದ ಒಂದು ಲಿಂಗವು ಗಮನವನ್ನು ಸೆಳೆಯುತ್ತದೆ, ಅದು ತೇವವಾಗಿದ್ದಾಗ ಸುತ್ತಮುತ್ತಲಿನ ಪ್ರದೇಶ ಮತ್ತು ಲಿಂಗಗಳನ್ನು ಪ್ರತಿಬಿಂಬಿಸುತ್ತದೆ.

 

 

ಸ್ಥಳೀಯ ಜನರ ಪ್ರಕಾರ, ಮಹಾಭಾರತದಲ್ಲಿ ದುರ್ಯೋಧನರು ಲಕ್ಷ್ಯಗ್ರಹ ಮನೆಯನ್ನು ಸುಟ್ಟ ಕಥೆ ಈ ದೇವಾಲಯದ ಪಕ್ಕದಲ್ಲೇ ಇದೆಯಂತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top