fbpx
ಸಮಾಚಾರ

“ನನ್ನನ್ನು ಮುಗಿಸಲು ಮಣಿಶಂಕರ್ ಪಾಕಿಸ್ತಾನದಲ್ಲಿ ಸುಫಾರಿ ಕೊಟ್ಟಿದ್ದರು”- ಪ್ರಧಾನಿ ಮೋದಿ.

“ನನ್ನನ್ನು ಮುಗಿಸಲು ಮಣಿಶಂಕರ್ ಪಾಕಿಸ್ತಾನದಲ್ಲಿ ಸುಫಾರಿ ಕೊಟ್ಟಿದ್ದರು”- ಪ್ರಧಾನಿ ಮೋದಿ.

 

 

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನೀಚ ಮನುಷ್ಯ ಎಂದು ಪದ ಬಳಕೆ ಮಾಡಿ ಕಾಂಗ್ರೆಸ್’ನಿಂದ ಉಚ್ಚಾಟಿತರಾಗಿರುವ ಮಣಿಶಂಕರ್ ಅಯ್ಯರ್ ವಿರುದ್ಧ ಮೋದಿ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. “ಮಣಿಶಂಕರ್‌ ಅಯ್ಯರ್‌ ಅವರು ನನ್ನ ಹತ್ಯೆಗಾಗಿ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದರು” ಎಂದು ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

 

 

ಗುಜರಾತ್‌ನಲ್ಲಿ ನಡೆಯಲಿರುವ ಎರಡನೇ ಹಂತದ ವಿಧಾನ ಸಭಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ “ಮಣಿಶಂಕರ್ ಅಯ್ಯರ್‌ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಮೋದಿ ಪ್ರಧಾನಿಯಾಗಿರೋ ತನಕ ಭಾರತ-ಪಾಕಿಸ್ತಾನ ಸಂಬಂಧ ಚನ್ನಾಗಿರೊಲ್ಲ ಹಾಗಾಗಿ ಮೋದಿಯನ್ನು ಮುಗಿಸಿಬಿಡಿ ಆಗ ನೋಡಿ ಭಾರತ-ಪಾಕಿಸ್ತಾನ ನಡುವೆ ಯಾವ ರೀತಿಯ ಶಾಂತಿ ಸ್ಥಾಪನೆ ಆಗುತ್ತದೆ ಎಂದು ಹೇಳಿದ್ದರು. ಇಷ್ಟಕ್ಕೂ ನಾನು ಮಾಡಿರುವ ತಪ್ಪಾದರೂ ಏನು?” ಎಂದು ಅಯ್ಯರ್ ಅವರನ್ನು ಪ್ರಶ್ನಿಸಿದ್ದಾರೆ.

 

 

“ಮಣಿಶಂಕರ್ ಅಯ್ಯರ್ ಅವರ ಮಾತುಗಳೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಲಭ್ಯವಿತ್ತು ಆದರೆ ಕಾಂಗ್ರೆಸ್ ಇದನ್ನು ಮುಚ್ಚಿ ಹಾಕಿದ್ದು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ನಾನು ಬಡತನದಿಂದ ಬೆಳೆದು ಬಂದು ಪ್ರಧಾನಿಯಾಗಿದ್ದೇನೆ, ಪ್ರಜಾಪ್ರಭುತ್ವದ ರೀತಿಯಲ್ಲಿ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ ಆದರೆ ನೀವು ನೋಡಿದರೆ ನನ್ನನ್ನು ಮುಗಿಸಲು ಬಯಸಿದ್ದೀರಾ” ಎಂದು ಮಣಿಶಂಕರ್ ವಿರುದ್ಧ ಮೋದಿ ಆರೋಪ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top