fbpx
ಮನೋರಂಜನೆ

ಡ್ರಗ್ಸ್ ಮಾಫಿಯಾ ಬೆಂಬಿದ್ದ ಮಂತ್ರಂ ಬೆಡಗಿ ಪಲ್ಲವಿ ರಾಜು!

ವಾರದ ಹಿಂದಷ್ಟೇ ತೆರೆ ಕಂಡಿದ್ದ ಮಂತ್ರಂ ಚಿತ್ರದ ಟೀಚರ್ ಪಾತ್ರದ ಮೂಲಕ ಗಮನ ಸೆಳೆದಿರೋ ಹುಡುಗಿ ಪಲ್ಲವಿ ರಾಜು. ಈ ಹಿಂದೆ `ಕ ಎಂಬ ಚಿತ್ರದಲ್ಲಿ ನಟಿಸಿದ್ದ ಪಲ್ಲವಿ ನಟನೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದರದರೂ ಆ ಚಿತ್ರ ನಿರೀಕ್ಷಿತ ಗೆಲುವು ಕಂಡಿರಲಿಲ್ಲ. ಆದರೆ ಮಂತ್ರಂ ಚಿತ್ರದಲ್ಲಿ ಟೀಚರ್ ಆಗಿ ಕಾಣಿಸಿಕೊಂಡು ಹಾರರ್ ಶೇಡ್‌ನಲ್ಲಿ ಈಕೆಯ ಅಭಿನಯ ಕಂಡ ಎಲ್ಲರೂ ಫಿದಾ ಆಗಿದ್ದಾರೆ.

 

 

ಈ ಮೂಲಕವೇ ಪಲ್ಲವಿ ರಾಜು ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ನಿಲ್ಲೋ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ. ಮಂತ್ರಂ ಚಿತ್ರದ ಹಾರರ್ ಶೇಡ್‌ನಲ್ಲಿ ಸೌಂದರ್ಯಾ ಅವರ ನಾಗವಲ್ಲಿ ಪಾತ್ರವನ್ನು ನೆನಪಿಸುವಂತೆ ನಟಿಸಿರೋ ಪಲ್ಲವಿ ಸದ್ಯ ಪಕ್ಕಾ ಬ್ಯುಸಿಯಾಗಿರೋ ನಟಿ. ಇವರು ನಟಿಸಿರೋ ಒಂದಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಅದಾಗಲೇ ಪಲ್ಲವಿ ಡಿಫರೆಂಟಾದೊಂದು ಚಿತ್ರದಲ್ಲಿ ಅಷ್ಟೇ ಭಿನ್ನವಾದೊಂದು ಪಾತ್ರ ಮಾಡಲು ತಯಾರಿ ಆರಂಭಿಸಿದ್ದಾರೆ!

 

 

ಮಧುಚಂದ್ರ ನಿರ್ದೇಶನದ ಚಿತ್ರದಲ್ಲಿಯೂ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರ ಸದ್ಯ ಕಡೇ ಹಂತ ತಲುಪಿಕೊಂಡಿದೆ. ಸಾಲಿಗ್ರಾಮ ಎಂಬ ಹಾರರ್ ಚಿತ್ರದಲ್ಲಿಯೂ ಪಲ್ಲವಿ ನಾಯಕಿ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರದಲ್ಲಿಯೂ ಅವರು ಸವಾಲಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಹೀಗೆ ಸಾಲುಸಾಲಾಗಿ ಚಿತ್ರಗಳನ್ನು ಮುಗಿಸಿಕೊಂಡಿರೋ ಪಲ್ಲವಿ ರಾಜು ಸದ್ಯ ಹೊಸಾ ಚಿತ್ರವೊಂದಕ್ಕೆ ತಯಾರಿ ನಡೆಸಲಾರಂಭಿಸಿದ್ದಾರೆ. ಈ ಹಿಂದೆ `ಕ’ ಚಿತ್ರದಲ್ಲಿ ನಟಿಸಿದ್ದ ಕೆಲ ಮಂದಿ ಹೊಸಬರೇ ಸೇರಿಕೊಂಡು ಒಂದು ಚಿತ್ರ ಮಾಡಲು ತಯಾರಾಗಿದ್ದಾರೆ. ಡ್ರಗ್ಸ್ ಮಾಪಿಯಾದ ಸುತ್ತ ಹೆಣೆದಿರೋ ಈ ಚಿತ್ರದಲ್ಲಿ ಪಲ್ಲವಿ ಸಂಪೂರ್ಣ ಬದಲಾದ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಸಖತ್ ರಿಚ್ ಫೀಲ್ ಹುಟ್ಟಿಸೋ ಬಿಂದಾಸ್ ಪಾತ್ರದಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿಯೇ ಹೇರ್ ಸ್ಟೈಲ್ ಸೇರಿದಂತೆ ಹಲವಾರು ಬದಲಾವಣೆ ಮಾಡಿಕೊಂಡಿರೋ ಪಲ್ಲವಿ ನಿರ್ದೆಶನದ ವಿಭಾಗದಲ್ಲಿಯೂ ಕೆಲಸ ಮಾಡಲಿರೋದು ನಿಜವಾದ ವಿಶೇಷ!

 

 

ನಟನೆಗೆ ಅವಕಾಶವಿರೋ ಸವಾಲಿನ ಪಾತ್ರವನ್ನೇ ಬಯಸೋ ಪಲ್ಲವಿ ರನ್ನು ಅವರೊಳಗಿನ ಕಲೆಯೇ ಚಿತ್ರರಂಗಕ್ಕೆ ಕರೆ ತಂದು ಬಿಟ್ಟಂತಿದೆ. ರಾಜಕಾರಣದಲ್ಲಿ ಸಕ್ರಿಯವಾಗಿರೋ ಕುಟುಂಬವೊಂದರಿಂದ ಬಂದಿರೋ ಪಲ್ಲವಿ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನಲ್ಲೇ. ಆರಂಭದಲ್ಲಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದವರು. ಆದರೆ ನಟನೆಯಲ್ಲಿ ವಿಪರೀತ ಆಸಕ್ತಿ ಹೊಂದಿದ್ದ ಅವರು ಒಂದು ನಾಟಕ ತಂಡ ಸೇರಿಕೊಂಡು ನಟನೆ ಶುರು ಮಾಡಿಕೊಂಡಿದ್ದರು. ಹೀಗೆ ಬೇರೆ ಬೇರೆ ನಾಟಕಗಳಲ್ಲಿ ನಟಿಸುತ್ತಲೇ ರಂಗಭೂಮಿಯಲ್ಲೇ ನಟಿಯಾಗಿ ರೂಪುಗೊಂಡ ನಂತರ ಕಿರುಚಿತ್ರಗಳಲ್ಲಿ ಅಭಿನಯಿಸಲಾರಂಭಿಸಿದ್ದರು. ಕನ್ನಡದಲ್ಲಿ ಮಾತ್ರವಲ್ಲದೇ ತಮಿಳಿನಲ್ಲೂ ಎರಡು ಕಿರುಚಿತ್ರಗಳಲ್ಲಿ ಪಲ್ಲವಿ ನಟಿಸಿದ್ದಾರೆ.

ಸದ್ಯ ಸಿನಿಮಾ ಉದ್ದೇಶದಿಂದಲೇ ತಯಾರಾಗುತ್ತಿರೋ ಕಿರುಚಿತ್ರವೊಂದರ ಚಿತ್ರೀಕರಣದಲ್ಲಿ ಪಲ್ಲವಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೇ ಕ ಚಿತ್ರದ ತಂಡ ಸೇರಿ ಮಾಡುತ್ತಿರೋ ಹೊಸಾ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಪಲ್ಲವಿ ಬಹಳಷ್ಟು ಮಹತ್ವಾಕಾಂಕ್ಷೆ ಹೊಂದಿರೋ ಈ ಚಿತ್ರಕ್ಕೆ ಬರುವ ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top