fbpx
ಮನೋರಂಜನೆ

ಟ್ರೋಲಿಗರಿಗೆ ಪೊಲೀಸರ ಎಚ್ಚರಿಕೆ: ಟ್ರೋಲ್ ಪೇಜ್’ಗಳ ಬೆನ್ನಿಗೆ ನಿಂತ ಒಳ್ಳೆ ಹುಡ್ಗ ಪ್ರಥಮ್.

ಟ್ರೋಲಿಗರಿಗೆ ಪೊಲೀಸರ ಎಚ್ಚರಿಕೆ: ಟ್ರೋಲ್ ಪೇಜ್’ಗಳ ಬೆನ್ನಿಗೆ ನಿಂತ ಒಳ್ಳೆ ಹುಡ್ಗ ಪ್ರಥಮ್.

 

 

 

ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್‌, ಟ್ವಿಟ್ಟರ್‌ ಗಳಲ್ಲಿ ಟ್ರೋಲ್ ಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ.. ಕನ್ನಡದ ನಟ-ನಟಿಯರ ಫೋಟೋಗಳನ್ನು ಬಳಸಿಕೊಂಡು ಅವರ ಹಾವ ಭಾವಗಳನ್ನು ಕೀಟಲೆ ಮಾಡುವುದು, ಲೇವಡಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ, ಈ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎನ್ನುವ ಉದ್ದೇಶದಿಂದ ಬೆಂಗಳೂರು ಪೊಲೀಸ್‌ರು, ಇಂಥ ಟ್ರೋಲಿಗರಿಗೆ ಎಚ್ಚರಿಕೆ ನೀಡಿದ್ದರು. ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಬಳಸಿ ಮನಸಿಗೆ ಬಂದಂತೆ ಟ್ರೋಲ್‌ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.

 

 

ಬೆಂಗಳೂರು ಪೋಲೀಸರ ಈ ಕ್ರಮಕ್ಕೆ ಕನ್ನಡ ಚಿತ್ರರಂಗವೂ ಬೆಂಬಲ ಸೂಚಿಸಿತ್ತು. “ಅವರರ ಅಭಿಪ್ರಾಯಗಳನ್ನು ಟ್ರೋಲ್ ಗಳ ಮುಖಾಂತರ ನಮ್ಮ ಮೇಲೆ ಹೇರೋದು ಸರಿಯಲ್ಲ ಇವಕ್ಕೆಲ್ಲಾ ಕಡಿವಾಣ ಹಾಕಬೇಕು, ನಮ್ಮ ಫೋಟೋ ಬಳಸಿ ಬೇರೆಯವರನ್ನು ನೋಯಿಸೋದು ಸರಿಯಲ್ಲ. ನಿಮ್ಮ ಫೋಟೋ ಹಾಕಿಕೊಂಡು ಟ್ರೊಲ್ ಮಾಡಿಕೊಳ್ಳಿ, ಟ್ರೋಲ್ ಮಾಡುವಾಗ ಯಾರ ಭಾವನೆಗಳನ್ನೂ ನೋಯಿಸಬಾರದು.” ಎಂದು ಚಿತ್ರರಂಗದವರು ಹೇಳಿದ್ದರು.

 

 

ಪೋಲೀಸರ ಈ ಕ್ರಮಕ್ಕೆ ಟ್ರೋಲಿಗರಿಂದಲೇ ಖ್ಯಾತಿ ಗಳಿಸಿದ ಬಿಗ್ ಬಾಸ್ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ವಿಜೇತ ಪ್ರಥಮ್ ಟ್ರೋಲ್ ಪೇಜ್ ಗಳ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು

” ಇತ್ತೀಚೆಗೆ troll page ಗಳ ಮೇಲೆ ಕಾನೂನು ಕ್ರಮಕ್ಕೆ ಪೋಲೀಸ್ ಇಲಾಖೆ ಮುಂದಾಗಿರುವುದು ನನ್ನ ಗಮನಕ್ಕೆ ಬಂದಿದೆ.
Troll ನ ಹಾಸ್ಯವಾಗಿ ನೋಡಿದರೆ ಈ ಸಮಸ್ಯೆ ಇರಲ್ಲ.ನನಗೆ ವೈಯುಕ್ತಿಕವಾಗಿ troll ಮಾಡುವವರ ಮೇಲೆ ಯಾವ ಬೇಸರವೂ ಇಲ್ಲ.ನನ್ನ ಒಂದು ಹಂತಕ್ಕೆ ಜನ ಗುರುತಿಸೋ ತರ(ಹೀರೋ) ಮಾಡಿದ್ದೇ ಈ troll pages.
ಆದರೆ ಒಂದು ಮನವಿ…ನಿಮ್ಮ troll ಗಳು ಯಾರೇ ನೋಡಿದರೂ ನಗುವಂತಿರಲಿ….
ಛೇಡಿಸುವುದು ಬೇಡ.but personally ಎಲ್ಲಾ troll pages ಮೇಲೆ ಪೋಲೀಸ್ ನಿಗ ಇಟ್ಟಿದ್ದು ನನಗೇಕೋ ಬೇಜಾರಾಯ್ತು.
Troll pages ಇಲ್ಲದಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು”

ಎಂದು ಪೋಸ್ಟ್ ಮಾಡಿದ್ದಾರೆ. ಟ್ರೊಲ್ ಪೇಜ್ ಗಳಿಗೆ ಬೆಂಬಲದ ಜೊತೆ ಬುದ್ಧಿಮಾತನ್ನು ಪ್ರಥಮ್ ಹೇಳಿದ್ದಾರೆ. ಟ್ರೋಲ್ ಪೇಜ್ ಗಳಿಗೆ ಪ್ರಥಮ್ ಬೆಂಬಲ ಸೂಚಿಸಿರುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top