fbpx
ಸಮಾಚಾರ

‘ನೀನೆ ಸಾಕಿದ ಗಿಣಿ ನನ್ನ ಮುದ್ದಿನ ಗಿಣಿ ‘ – ರವಿ ಬೆಳಗೆರೆ ಸುಪಾರಿ ಕೇಸ್ ನಲ್ಲಿ ಹೆಣ್ಣಿನ ಮಾಯೆ

ಗೌರಿ ಲಂಕೇಶ್ ಹಂತಕರು ಬಳಸಿದ್ದ ಗನ್ ನ ಮಾಹಿತಿ ವಿಚಾರಣೆಯ ಸಲುವಾಗಿ ಗನ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಶಾರ್ಪ್ ಶೂಟರ್ ಅನೂಪ್ ಗೌಡ ಅಲಿಯಾಸ್ ತಾಹಿರ್ ನನ್ನ ಬಂಧಿಸಿದ್ದರು , ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾಹಿತಿ ಕೇಳುವ ಸಂಧರ್ಭದಲ್ಲಿ ಶ್ರೀಧರ್ ಎನ್ನುವ ವ್ಯಕ್ತಿ ನನಗೆ ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ 2014 ರ ವರೆಗೆ ಕೆಲಸ ಮಾಡುತ್ತಿದ್ದ ಸುನಿಲ್ ಹೆಗ್ಗರವಳ್ಳಿ ಯ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಬಾಯಿಬಿಟ್ಟಿದ್ದ .

ಆದರೆ ಯಾರಿ ಶ್ರೀಧರ್ ಇತ ಯಾಕೆ ಸುನಿಲ್ ಹೆಗ್ಗರವಳ್ಳಿ ಯ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೇ ಎಂಬ ಮಾಹಿತಿಯ ಹಿಂದೆ ಹೋದ ಪೊಲೀಸ್ ರು ಶ್ರೀಧರ್ ನನ್ನ ಬಂಧಿಸಿ ವಿಚಾರಿಸಿದಾಗ ಬಸಪ್ಪ ಹರಿಜನ ಎಂಬ ಭೀಮ ತೀರದ ಹಂತಕ 30 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆ ಮಾಡುವಂತೆ ಹೇಳಿದ್ದ ಎನ್ನಲಾಗಿದೆ , 2017ರ ಆಗಸ್ಟ್ 26ಕ್ಕೆ ಸುನೀಲ್ ಹೆಗ್ಗರವಳ್ಳಿ ಹತ್ಯೆ ನಡೆಯಬೇಕಿತ್ತು ಆದರೆ ಅದು ನಡೆಯಲಿಲ್ಲ .

 

ಕೊಲೆಯ ಹಿಂದಿತ್ತು ಹೆಣ್ಣಿನ ಮೇಲಿನ ಮೋಹ

 

‘ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ , ರವಿಬೆಳಗೆರೆಯವರ ಎರಡನೇ ಪತ್ನಿ ಯಶೋಮತಿಯವರ ಜೊತೆ ಸುನಿಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ,ಎಷ್ಟು ಬೇಡ ಎಂದರು ಆಕೆಗೆ ಸಹಾಯ ಮಾಡುತ್ತಿದ್ದರು ಎನ್ನುವ ಹಿನ್ನಲೆಯಲ್ಲಿ ರವಿ ಬೆಳಗೆರೆ ಸುಪಾರಿ ನೀಡಿದ್ದರು ಎನ್ನಲಾಗಿದೆ, ರವಿಬೆಳಗೆರೆಯವರ ಎರಡನೇ ಪತ್ನಿ ಕೂಡ ‘ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ ಹಿಂದೆ  ಕೆಲಸ ಮಾಡುತ್ತಿದ್ದರು.

“ಹೆಜ್ಜೆ ಇಡುವಾಗ ತುಂಬಾ ಎಚ್ಚರ ಇರಬೇಕು. ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ” ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದರು.

 

“ನಾನು ಕಿರಿ ಕಿರಿ ಮನುಷ್ಯ ಅಲ್ಲ. ಸಿಡಿಮಿಡಿ ಇಲ್ಲ. ಸಿಟ್ಟು ಮೊದಲಿತ್ತು. ಈಗ ಮರೆತೇ ಹೋಗಿದೆ. ಈಗಲೂ ಒಮ್ಮೊಮ್ಮೆ ಗುರ್ರ್ ಅಂತೀನಿ. ದ್ವೇಷ ನನ್ನ ಜಾಯಮಾನವಲ್ಲ. ಅಸಹ್ಯವಾದರೆ ದೂರ ಸರಿದುಬಿಡ್ತೇನೆ. ನನ್ನದು ಇಂಟೆನ್ಸ್ ಆದ ಪ್ರೀತಿ. ತೀವ್ರವಾಗಿ ಪ್ರೀತಿಸುತ್ತೇನೆ. ಕೆಲಬಾರಿ ಅವರಿಗೆ ಕಿರಿಕಿರಿ ಆಗುವಷ್ಟು. ಮಾತು, ಹರಟೆ, ನಗು, ಕೊಂಚ ಪೋಲಿತನ, ಇಂಟೆನ್ಸ್ ಆದ ಕಾಮ, ಅತಿಯಾದ ಭಾವುಕತೆ, ಅಮ್ಮನ ನಾಸ್ಟಾಲ್ಜಿಯಾ, ಅವಳನ್ನು ಎಲ್ಲರಲ್ಲೂ ಹುಡುಕೋದು…..ಇವೆಲ್ಲ ನನ್ನ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್. ಆದರೆ ಮೋಸ ಸಹಿಸೋದು ತುಂಬಾ ಕಷ್ಟ. ಮೋಸ ನನಗೆ ಆಗಿದ್ದರೂ ನರಳೋದು ನಾನೇ. ತಪ್ಪು ಮಾಡಿದೋರನ್ನ ಕ್ಷಮಿಸಬಹುದು. ಮೋಸ ಮಾಡಿದೋರನ್ನ ಕ್ಷಮಿಸೋಕಾಗಲ್ಲ. ಯಾಕೆಂದರೆ, ಚೆನ್ನಾಗಿ ಯೋಚನೆ ಮಾಡಿ, ಪ್ಲಾನ್ ಮಾಡಿ ಉದ್ದೇಶವಿಟ್ಟುಕೊಂಡೇ ಅವರು ಮೋಸ ಮಾಡಿರುತ್ತಾರೆ. ಗೊತ್ತಿಲ್ಲದೆ ಮೋಸ ಮಾಡಿಬಿಟ್ಟೆ ಅನ್ನೋಕೆ ಆಗಲ್ಲ.

ಗೊತ್ತಿಲ್ಲದೆ ತಪ್ಪು ಮಾಡಿದೆ ಅನ್ನಬಹುದು. ನಾನು ತುಂಬಾ ಹುಷಾರು, ನಂಗೆ ಯಾರೂ ಮೋಸ ಮಾಡೋಕಾಗಲ್ಲ, ನಾನು ಮೈ ಮರೆಯಲ್ಲ ಅಂತೆಲ್ಲ ಹೇಳಿಕೊಳ್ತಿದ್ದೆ. but, ಒಂದು ಮೋಸ ಹೇಗೆ ಆಯಿತು ಅಂದ್ರೆ, ಅವತ್ತೇ ನಾನು ಸತ್ತು ಹೋಗಿಬಿಟ್ಟೆ. ನಂಗೆ ಗೊತ್ತು, ನಾನು ಈ ಜನ್ಮದಲ್ಲಿ ಅದರಿಂದ ಚೇತರಿಸಿಕೊಳ್ಳಲಾರೆ. ಒಬ್ಬ ಗೆಳೆಯ ಬಂದು ‘ ಆದದ್ದು ಆಯಿತು. ಕ್ಷಮಿಸಿ ಮತ್ತೆ ರಾಜಿ ಆಗಿಬಿಡು’ ಅಂದ. ” ನೋಡೋ, ನನ್ನ ಆಫೀಸ್ ನ ಒಂದು ರೌಂಡ್ ಹಾಕಿ ಬಾ. ಎಲ್ಲೊ ಒಂದು ಕಡೆ ನಿಂಗೆ ಕೊಳಕು ಕಾಣಬಹುದು. ಆದರೆ ಬಾತ್ ರೂಮ್ ನಲ್ಲಿ ಒಂದು ಹನಿ ನೀರೂ ಚೆಲ್ಲಿರಲ್ಲ. ಹೇಟ್ ಇಟ್. ಅದು ತುಂಬಾ ಕ್ಲೀನ್ ಆದ ಜಾಗ. ಹಾಗಂತ ವಿಸರ್ಜನೆ ಮಾಡೋ ಜಾಗದ ಪಕ್ಕ ಕೂತು ಊಟ ಮಾಡೋಕೆ ಆಗಲ್ಲ” ಅಂದೆ . ಅವನು ಸುಮ್ಮನಾದ.

 

 

ನೀವು ರಾಜಕುಮಾರಿ ಡಯಾನಾ ಫೋಟೋ ನೋಡಿ. ಇಷ್ಟ ಆಗ್ತಾಳೆ. ಆಕೆ ಸುಂದರಿ. ಆದರೆ ಎಂಥ ವಂಚಕಿ! ರಾಜಕುಮಾರ ಚಾಲ್ರ್ಸ್ ಅದನ್ನು ಹೇಳಿಕೊಂಡಿಲ್ಲ. ಅನುಭವಿಸಿದ ನೋವು ಸುಳ್ಳು ಅಂತೀರಾ? ನಂಗೆ ತಾಯಿ ಥೆರೇಸ ತುಂಬಾ ಇಷ್ಟ. ನೋಡಲು ಪರಮ ಕುರೂಪಿ. ಆದರೆ ವಂಚಕಿಯಲ್ಲ. ಅಲ್ಲವಾ. ಕೆಲವು ವಿಷಯಗಳಲ್ಲಿ ನಾನು ಬೆರಗಾಗುವಷ್ಟು ಪ್ರಾಮಾಣಿಕ. ಉದಾಹರಣೆಗೆ ದುಡ್ಡು. ಯಾರಿಗೂ ನಾನು ಮೋಸ ಮಾಡಿಲ್ಲ. ಕಂಡವರ ಹಣ ಮುಟ್ಟಿಲ್ಲ. ಉಳಿದಂತೆ ನಾನು ಬೇಲಿ ಹಾರಿದ್ದುಂಟು. ನನ್ನನ್ನ ಯಾರೂ ಒಂದು ಚೌಕಟ್ಟು ಹಾಕಿ ಇಡಲಾರರು. ತಪ್ಪು ಮಾಡಿದ್ದೇನೆ. ಅದು ಗೊತ್ತಾಗುವಂತೆ, ಚೆನ್ನಾಗಿ ತಿಳಿಸಿ ಮಾಡಿದ್ದೇನೆ. ಕ್ಷಮೆ ಕೇಳಿದ್ದೇನೆ. ಆದರೆ ಮೋಸ ಮಾಡಿಲ್ಲ. ಅನುಮಾನ ಇದೆಯಾ?”

ಈ ಮೇಲಿನ ಸ್ಟೇಟಸ್ ಆಗಸ್ಟ್ ನಲ್ಲಿ ಹಾಕಿಕೊಂಡಿದ್ದರು

 

 

ಒಟ್ಟಿನಲ್ಲಿ ಈ ಎಲ್ಲ ವಿಷಯಗಳು ಈ ಪ್ರಕರಣದಲ್ಲಿ ಹೆಣ್ಣಿನ ಮಾಯೆ ಇರೋದಂತು ಖಾತ್ರಿ ಮಾಡಿವೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top