fbpx
ಮನೋರಂಜನೆ

ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣ: ನಟಿ ಕಾವ್ಯ ತಾಯಿ ಮತ್ತು ಅಣ್ಣನ ಕೊಲೆ ಯತ್ನ.

ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣ: ನಟಿ ಕಾವ್ಯ ತಾಯಿ ಮತ್ತು ಅಣ್ಣನ ಕೊಲೆ ಯತ್ನ.

 

 

ದಯಾನಂದ ಸ್ವಾಮೀಜಿ ಜೊತೆ ರಾಸಲೀಲೆಯಲ್ಲಿ ಭಾಗಿಯಾಗಿ ಭಾರೀ ಸುದ್ದಿಯಾಗಿದ್ದ ನಟಿ ಕಾವ್ಯ ಆಚಾರ್ಯ ಸಹೋದರ ಕೃಷ್ಣ ಆಚಾರ್ಯ ಮೇಲೆ ಕೊಲೆ ಯತ್ನ ಹಾಗೂ ತಾಯಿ ನಾಗರತ್ನ ಅವರಿಗೆ ಜೀವ ಬೆದರಿಕೆ ಒಡ್ಡಿರುವ ಘಟನೆ ಗುರುವಾರ ನಡೆದಿದೆ.

 

 

 

ಗುರುವಾರ ರಾತ್ರಿ ಮಂಗಳೂರಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹೋಗುತ್ತಿರುವಾಗ ಓಮ್ನಿ ಕಾರಿನಲ್ಲಿ ಬಂದ ಐದು ಜನ ದುಷ್ಕರ್ಮಿಗಳು ಕಾರನ್ನು ನಿಲ್ಲಿಸಿ ಕಾವ್ಯಾ ಆಚಾರ್ಯ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕೇಸು, ಕಂಪ್ಲೇಂಟ್ ಎಂದು ಹೋದಲ್ಲಿ ಇಡೀ ಕುಟುಂಬದ ಎಲ್ಲರನ್ನೂ ಕೊಲೆ ಮಾಡ್ತೀವಿ ಎಂದು ಬೆದರಿಕೆ ಹಾಕಿ ಕೃಷ್ಣ ಮೇಲೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾರೆ. ತಮ್ಮ ಮಗನಿಗೆ ಚೂರಿಯಿಂದ ಟ್ರಿವುದುದನ್ನು ನೋಡಿದ ನಾಗರತ್ನ ಜೋರಾಗಿ ಕೂಗಿಕೊಂಡಿದ್ದಾಳೆ ಆಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಸಂಭಂದ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳನ್ನು ಸೆರೆಹಿಡಿಯಲು ಬಲೇ ಬೀಸಿದ್ದಾರೆ.

 

 

ಕೆಲವು ದಿನಗಳ ಹಿಂದೆ ಯಲಹಂಕದ ಹುಣಸಮಾರನಹಳ್ಳಿ ಜಂಗಮ ಮಠದ ಪೀಠಾಧ್ಯಕ್ಷ ದಯಾನಂದ ಸ್ವಾಮಿ ಹೆಣ್ಣೊಬ್ಬಳ ಜೊತೆ ಕಾಮೋನ್ಮತ್ತ ಕಾಳಗ ನಡೆಸುತ್ತಿರೋ ವಿಡಿಯೋವೊಂದು ದೃಷ್ಯ ಮಾಧ್ಯಮಗಳ ಮೂಲಕ ಜಾಹೀರಾಗಿತ್ತು. ದಯಾನಂದ ಸ್ವಾಮಿಯ ಪಲ್ಲಂಗ ಕಾಳಗ ಜಾಹೀರಾಗಿ ಆತನೊಂದಿಗೆ ಕಾಮ ಕೂಟದಲ್ಲಿ ಭಾಗಿಯಾದಾಕೆ ನಟಿ ಎಂಬ ವಿಚಾರ ಬಯಲಾಯಿತೋ ಆಗಿನಿಂದಲೇ ಸ್ವಾಮಿಯ ಕಡೆಯವರು ನಾಟಿಗೆ ಬೆದರಿಕೆಗಳನ್ನು ನೀಡುತ್ತಿದ್ದರು ಎಂದು ಹೇಳಲಾಗಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top