fbpx
ಕಿರುತೆರೆ

ನಾಲ್ಕೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರನಡೆದ ವೈಷ್ಣವಿ..!

ನಾಲ್ಕೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರನಡೆದ ವೈಷ್ಣವಿ..!

 

 

ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿರುವ ವೈಷ್ಣವಿ ಅನಾರೋಗ್ಯ ಎದುರಾದ ಹಿನ್ನಲೆಯಲ್ಲಿ ಬಿಗ್ ಬಾಸ್ ನಿಂದ ಹೊರಗೆ ಬಂದಿದ್ದಾರೆ.. ನೆನ್ನೆ ಟಾಸ್ಕ್ ಮಾಡುವಾಗ ಇದ್ದಕ್ಕಿದ್ದ ಹಾಗೆ ಮೂರ್ಛೆ ತಪ್ಪಿ ಬಿದ್ದ ವೈಷ್ಣವಿ ಸ್ವಲ್ಪಹೊತ್ತಿನ ನಂತರ ಎಚ್ಚರವಾದರೂ ಗುಣಮುಖರಾಗದ ಕಾರಣ ಬಳಿಕ ಅವರನ್ನು ಕನ್ಫೆಷನ್ ರೂಮ್ ನಲ್ಲಿ ಚಿಕಿತ್ಸೆ ಕೊಡಿಸಲಾಯಿತು.

 

 

ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಇರುವ ಸಾಮರಸ್ಯವನ್ನು ಸ್ಪರ್ಧಿಗಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಗಂಧದ ಗುಡಿ ಎನ್ನುವ ಟಾಸ್ಕ್‌ಅನ್ನು ಬಿಗ್ ಬಾಸ್ ನೀಡಿದ್ದರು. ಇದರ ಅನ್ವಯ ಮನೆಯ ಸದಸ್ಯರನ್ನು ಕಾಡು ಪ್ರಾಣಿಗಳು ಹಾಗೂ ಕಾಡು ಜನರ ಎರಡು ಗುಂಪುಗಳನ್ನು ಮಾಡಿದ್ದರು. ಈ ಕಾಡಿಗೆ ಪಟ್ಟಣದಿಂದ ಅಕುಲ್ ಅವರು ರಿಂಗ್ ಮಾಸ್ಟರ್ ಆಗಿ ಬಂದಿದ್ದರು. ಈ ಟಾಸ್ಕ್ ನಲ್ಲಿ ವೈಷ್ಣವಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದರು. ಆದ್ರೆ ಅನಾರೋಗ್ಯದ ಕಾರಣ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ.

 

 

ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ವೈಷ್ಣವಿ ಕನ್ಫೆಷನ್ ರೂಮ್ ನಿಂದ ನೆನ್ನೆಯೇ ವಾಪಸ್ಸು ಬಂದು 24 ಗಂಟೆಗಳವರೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಪಡೆದುಕೊಂಡಿದ್ದರು. ಒಂದು ವೇಳೆ ಬೆನ್ನು ನೋವು ಕಮ್ಮಿ ಆಗದಿದ್ದರೆ ಅನಂತರ ಬಿಗ್ ಬಾಸ್ ನಿಂದ ಹೊರ ಹೋಗಬೇಕು ಎಂದು ಅಕುಲ್ ಮುಂದೆ ನೆನ್ನೆಯೇ ಹೇಳಿಕೊಂಡರು. 24 ಗಂಟೆಯವರೆಗೂ ಆರೋಗ್ಯ ಸ್ವಲ್ಪವೂ ಚೇತರಿಕೆ ಕಾಣದ ಹಿನ್ನೆಲೆ ತೀವ್ರ ಬೆನ್ನುನೋವಿಗೆ ತುತ್ತಾಗಿ ತಮ್ಮ ಬಿಗ್ ಬಾಸ್ ಪಯಣವನ್ನು ಕೇವಲ ನಾಲ್ಕು ದಿಗಳಲಿಗೆ ಮುಗಿಸಿ ಹೊರನಡೆದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top