fbpx
ಸಾಧನೆ

8ನೇ ವರ್ಷಕ್ಕೆ ಮದುವೆಯಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಹಠ ಬಿಡದೆ ಡಾಕ್ಟರ್ ಆಗಲು ಸಿದ್ಧರಾಗಿರುವಂತ ಛಲಗಾರ್ತಿ ರೂಪಾ!

8ನೇ ವರ್ಷಕ್ಕೆ ಮದುವೆಯಾದ್ರೂ ಹಠ ಬಿಡದೆ – ಡಾಕ್ಟರ್ ಆಗಲು ಸಿದ್ಧರಾಗಿರುವಂತ ಛಲಗಾರ್ತಿ ರೂಪಾ..!

 

ಮನಸ್ಸಿದ್ದರೆ ಮಾರ್ಗ ಎಂಬ ಮಾತಿಗೆ ಜೀವಂತ ಸಾಕ್ಷಿ ಈ ಹೆಣ್ಣು ಮಗಳು ರೂಪಾ ಯಾದವ್ .

ಈ ಹೆಣ್ಣು ಮಗಳು ರೂಪಾ ಯಾದವ್ ಹುಟ್ಟಿದ್ದು ಜೈಪುರ ಜಿಲ್ಲೆಯ ಕರೇರಿಯಲ್ಲಿ. ರೂಪಾ ಮತ್ತು ಸಹೋದರಿ ರುಕ್ಮಾ 8 ವರ್ಷದವರಿದ್ದಾಗಲೇ 12 ವರ್ಷದ ಶಂಕರ್ ಲಾಲ್ ಮತ್ತು ಬಾಬುಲಾಲ್ ಜೊತೆ ಅವರ ಮನೆಯವರು ಮದುವೆಮಾಡಿಬಿಟ್ಟರು . ಆ ಕಾಲದಲ್ಲಿ ರಾಜಸ್ಥಾನದಲ್ಲಿ ಬಾಲ್ಯ ವಿವಾಹ ಮಾಮೂಲಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹದ ಸಂಖ್ಯೆ ಕಡಿಮೆಯಾಗಿದ್ದರೂ, ರಾಜಸ್ಥಾನದಲ್ಲಿ ಇನ್ನೂ ಕೂಡ ಬಾಲ್ಯ ವಿವಾಹ ನಡೆಯುತ್ತಿದೆ.

 

 

ರೂಪಾ ಅವಳ ಗಂಡ ಮತ್ತು ಅವರ ಮನೆಯವರು ಸಹಾಯದಿಂದ ವಿವಾಹದ ನಂತರ ವಿದ್ಯಾಭ್ಯಾಸವನ್ನು ಮುಂದುವರೆಸಿದ್ರು. ರಾಜಸ್ತಾನದಲ್ಲಿ ಮದುವೆ ನಂತರ ಶಿಕ್ಷಣ ಪಡೆಯುವುದು ಸವಾಲಿನ ಮಾತೇ ಸರಿ. 10ನೇ ತರಗತಿಯಲ್ಲಿ ರೂಪಾ ಶೇಕಡಾ 84ರಷ್ಟು ಅಂಕ ಪಡೆದಿದ್ದರು. 12ನೇ ತರಗತಿಯಲ್ಲಿ 84 ಶೇಕಡಾ ಅಂಕ ಪಡೆದರು. ಅಚ್ಚರಿ ಅಂದರೆ ರೂಪಾ ಮನೆ ಕೆಲಸ ಮಾಡಿಕೊಂಡೇ ಈ ಎಲ್ಲಾ ಸಾಧನೆಯನ್ನು ಮಾಡಿದ್ದರು.

 

 

ದಿನಾ ಬೆಳಗ್ಗೆ ಮೂರು ಗಂಟೆಗೆ ಎದ್ದು ಹೊಲದಲ್ಲಿ ಕೆಲಸ ಮುಗಿಸಿ ನಂತ್ರ ಬೇಗ ಬೇಗ ಶಾಲೆಗೇ ತಯಾರಾಗಿ ಹೋಗಿ ಮಧ್ಯಾಹ್ನ 2 ಗಂಟೆಗೆ ಮಾತ್ರ ಊಟ ಮಾಡಲು ಸಮಯ ಸಿಗುತ್ತಿತ್ತಂತೆ ಹೀಗೆ ರೂಪ ಬದುಕು ತುಂಬ ಕಷ್ಟಕರವಾಗಿತ್ತು .

 

 

ರೂಪಾ ಸಂಬಂಧಿಯೊಬ್ಬರು, ಎದೆ ನೋವಿನಿಂದ ಬಳಲುತ್ತಿದ್ದ ವೇಳೆ ಸರಿಯಾದ ಚಿಕಿತ್ಸೆ ಸಿಗದೆ ಮರಣ ಹೊಂದಿದ್ದರು. ಇದು ರೂಪಾಗೆ ಡಾಕ್ಟರ್ ಆಗುವಂತೆ ಪ್ರೇರೇಪಿಸಿತು.
ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ರೂಪಾ ,ಆಲ್ ಇಂಡಿಯಾ ಶ್ರೇಯಾಂಕದಲ್ಲಿ 2612 ಶ್ರೇಯಾಂಕ ಪಡೆದುಕೊಂಡರು ಆಗ ರೂಪ ರಲ್ಲಿ ಮೆಡಿಕಲ್ ಓದುವ ಆಸೆ ಮೊಳಕೆಯೂರಿತ್ತು ಆದರೆ ಹಳ್ಳಿಯ ಜನ ಹೆಣ್ಣು ಮಕ್ಕಳ ಓದಿಗೆ ಸಹಕಾರ ನೀಡಲಿಲ್ಲ ಆದರೆ ರೂಪ ಗಂಡ ಹಾಗು ಭಾವ ಹಣವನ್ನು ಹೊಂದಿಸಿ ಆಕೆಗೆ ಕಾಲೇಜು ಸೇರಲು ಸಹಾಯ ಮಾಡಿ ಪ್ರೋತ್ಸಾಹ ನೀಡಿದರು .

 

 

ಈಗ ಮೆಡಿಕಲ್ ಸೀಟ್ ಪಡೆದುಕೊಂಡು ಡಾಕ್ಟರ್ ಆಗಿದ್ದಾರೆ .

ಇಂತಹ ಹೆಣ್ಣು ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ,ಹೆಣ್ಣು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಬೇಕು ಇದೇ ನಮ್ಮ ಆಶಯ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top