fbpx
ಮನೋರಂಜನೆ

ಟ್ರೋಲ್ ಪೇಜ್ ಗಳ ಪರ ಬ್ಯಾಟಿಂಗ್ ಆಡಿದ ಕನ್ನಡ ಚಿತ್ರ ನಟರು

ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್‌, ಟ್ವಿಟ್ಟರ್‌ ಗಳಲ್ಲಿ ಟ್ರೋಲ್ ಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ.. ಕನ್ನಡದ ನಟ-ನಟಿಯರ ಫೋಟೋಗಳನ್ನು ಬಳಸಿಕೊಂಡು ಅವರ ಹಾವ ಭಾವಗಳನ್ನು ಕೀಟಲೆ ಮಾಡುವುದು, ಲೇವಡಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ, ಈ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎನ್ನುವ ಉದ್ದೇಶದಿಂದ ಬೆಂಗಳೂರು ಪೊಲೀಸ್‌ರು, ಇಂಥ ಟ್ರೋಲಿಗರಿಗೆ ಎಚ್ಚರಿಕೆ ನೀಡಿದ್ದರು. ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಬಳಸಿ ಮನಸಿಗೆ ಬಂದಂತೆ ಟ್ರೋಲ್‌ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.

 

ಬೆಂಗಳೂರು ಪೋಲೀಸರ ಈ ಕ್ರಮಕ್ಕೆ ಕನ್ನಡ ಚಿತ್ರರಂಗವೂ ಬೆಂಬಲ ಸೂಚಿಸಿತ್ತು. “ಅವರರ ಅಭಿಪ್ರಾಯಗಳನ್ನು ಟ್ರೋಲ್ ಗಳ ಮುಖಾಂತರ ನಮ್ಮ ಮೇಲೆ ಹೇರೋದು ಸರಿಯಲ್ಲ ಇವಕ್ಕೆಲ್ಲಾ ಕಡಿವಾಣ ಹಾಕಬೇಕು, ನಮ್ಮ ಫೋಟೋ ಬಳಸಿ ಬೇರೆಯವರನ್ನು ನೋಯಿಸೋದು ಸರಿಯಲ್ಲ. ನಿಮ್ಮ ಫೋಟೋ ಹಾಕಿಕೊಂಡು ಟ್ರೊಲ್ ಮಾಡಿಕೊಳ್ಳಿ, ಟ್ರೋಲ್ ಮಾಡುವಾಗ ಯಾರ ಭಾವನೆಗಳನ್ನೂ ನೋಯಿಸಬಾರದು.” ಎಂದು ಚಿತ್ರರಂಗದವರು ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಯಶಸ್ಸಿನ ಹಿಂದೆ ಪರೋಕ್ಷ ಕಾರಣವಾಗಿದ್ದ ಟ್ರೊಲ್ ಗಳು ತಮ್ಮ ಮೀಮ್ಸ್’ಗಳ ಮೂಲಕ ಪ್ರಚಾರ ನೀಡುತ್ತಿದ್ದವು. ಇನ್ನು ಕನ್ನಡ ಅತಿದೊಡ್ಡ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್ ಸಕ್ಸಸ್ನಲ್ಲೂ ಟ್ರೊಲ್ ಪೇಜ್’ಗಳ ದೊಡ್ಡ ಪಾತ್ರವಿದೆ. ಟ್ರೊಲ್ ಪೇಜ್’ಗಳ ಮಹತ್ವದ ಬಗ್ಗೆ ಒಂದು ಸಂಚಿಕೆಯನ್ನೇ ಬಿಗ್ ಬಾಸ್ ನಲ್ಲಿ ಮಾಡಲಾಗಿತ್ತು ಅಲ್ಲಿನ ಸ್ಪರ್ಧಿಗಳು ಕೂಡ ಟ್ರೊಲ್ ಪೇಜ್’ಗಳಿಗೆ ದನ್ಯವಾದಗಳನ್ನ ಅರ್ಪಿಸಿದ್ದರು.  ಹೀಗಿರುವಾಗ ಟ್ರೋಲ್ ಪೇಜ್’ಗಳನ್ನ ಕಡೆಗಣಿಸಿರುವುದು ಚಿತ್ರರಂಗಕ್ಕೆ ಖಂಡಿತವಾಗಿಯೂ ತೊಂದರೆಯಾಗಲಿದೆ.

 

ಈ ಬಗ್ಗೆ ಚಿತ್ರರಂಗದವರು ಏನು ಹೇಳ್ತಾರೆ ಕೇಳೋಣ ಬನ್ನಿ

 

ಜಗ್ಗೇಶ್ ಇದಕ್ಕೆ ಪ್ರತಿಕ್ರಿಯೆ ನೀಡಿ ಈ ರೀತಿ ಹೇಳಿದರು

 

 

ಟ್ರೋಲ್ ಪೇಜ್ ಗಳು ತಮಾಷೆಯಾಗಿ ಸಾಮಾಜಿಕ ಅಂಕುಡೊಂಕು ಎತ್ತಿತೋರಿಸುತ್ತಿದ್ದರು..
ಅದನ್ನ ತಪ್ಪುಎಂದು ಭಾವಿಸುವದರಲ್ಲಿ ಅರ್ಥವಿಲ್ಲಾ..
ಇದರಲ್ಲಿ ಪೋಲಿಸರು ಯಾಕೆ ಮೂಗು ತೂರಿಸಿದರು ಅರ್ಥವಾಗಲಿಲ್ಲಾ..ಕನ್ನಡದ
ಟ್ರೋಲ್ ಪೇಜ್ ಮಾತ್ರ ಯಾಕೆtarget ಕರ್ನಾಟಕ ಪೋಲಿಸ್..ಇದು ಕೂಡ ಪ್ರಚಾರದ ಅಂಗ. #isupporttrollpages.

 

ಸಾಧು ಮಹಾರಾಜ್ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ ವಿಡಿಯೋ ನೋಡಿ ..

 

 

ಅತಿ ಹೆಚ್ಚು ಟ್ರೊಲ್ ಗೆ ಬಳಕೆಯಾಗುವ ಚಿತ್ರ ಸಾಧು ಅವ್ರದ್ದು ಆದರೆ ಸಾಧು ಹೇಳೋದು ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಟ್ರೊಲ್ ಗಳಿಗೆ ನಮ್ಮ ಚಿತ್ರಗಳನ್ನು ಬಳಕೆ ಮಾಡುವುದು ತುಂಬಾ ಬೇಸರ ತರಿಸುತ್ತದೆ ಎಂದು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top