fbpx
ಮನೋರಂಜನೆ

ಕನ್ನಡ ಟ್ರೊಲ್ ಪೇಜ್ ವಿರುದ್ಧ ಕನ್ನಡ ಫಿಲಂ ಇಂಡಸ್ಟ್ರಿಯನ್ನು ಎತ್ತಿ ಕಟ್ಟಿದ ಕಾಣದ ಕೈ ಆ ನಟನ ಪತ್ನಿ ಯಾರು ಗೊತ್ತಾ ?

ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್‌, ಟ್ವಿಟ್ಟರ್‌ ಗಳಲ್ಲಿ ಟ್ರೋಲ್ ಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ.. ಕನ್ನಡದ ನಟ-ನಟಿಯರ ಫೋಟೋಗಳನ್ನು ಬಳಸಿಕೊಂಡು ಅವರ ಹಾವ ಭಾವಗಳನ್ನು ಕೀಟಲೆ ಮಾಡುವುದು, ಲೇವಡಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ, ಈ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎನ್ನುವ ಉದ್ದೇಶದಿಂದ ಬೆಂಗಳೂರು ಪೊಲೀಸ್‌ರು, ಇಂಥ ಟ್ರೋಲಿಗರಿಗೆ ಎಚ್ಚರಿಕೆ ನೀಡಿದ್ದರು. ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಬಳಸಿ ಮನಸಿಗೆ ಬಂದಂತೆ ಟ್ರೋಲ್‌ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.

ಬೆಂಗಳೂರು ಪೋಲೀಸರ ಈ ಕ್ರಮಕ್ಕೆ ಕನ್ನಡ ಚಿತ್ರರಂಗವೂ ಬೆಂಬಲ ಸೂಚಿಸಿತ್ತು. “ಅವರರ ಅಭಿಪ್ರಾಯಗಳನ್ನು ಟ್ರೋಲ್ ಗಳ ಮುಖಾಂತರ ನಮ್ಮ ಮೇಲೆ ಹೇರೋದು ಸರಿಯಲ್ಲ ಇವಕ್ಕೆಲ್ಲಾ ಕಡಿವಾಣ ಹಾಕಬೇಕು, ನಮ್ಮ ಫೋಟೋ ಬಳಸಿ ಬೇರೆಯವರನ್ನು ನೋಯಿಸೋದು ಸರಿಯಲ್ಲ. ನಿಮ್ಮ ಫೋಟೋ ಹಾಕಿಕೊಂಡು ಟ್ರೊಲ್ ಮಾಡಿಕೊಳ್ಳಿ, ಟ್ರೋಲ್ ಮಾಡುವಾಗ ಯಾರ ಭಾವನೆಗಳನ್ನೂ ನೋಯಿಸಬಾರದು.” ಎಂದು ಚಿತ್ರರಂಗದವರು ಹೇಳಿದ್ದರು.

 

 

ಟ್ರಾಲ್ ಪೇಜ್’ಗಳಿಗೆ ಕಡಿವಾಣ ಹಾಕಬೇಕು ಎಂದು ಪೊಲೀಸರಿಗೆ ಬೆಂಬಲಿಸಿದ ಕನ್ನಡ ಚಿತ್ರರಂಗದ ವಿರುದ್ಧ ಟ್ರೊಲ್ ಪೇಜ್ ಗಳು ಮುನಿಸಿಕೊಂಡಿದ್ದಾರೆ. ಇಷ್ಟು ದಿನ ಚಿತ್ರರಂಗಕ್ಕೆ ಪುಕ್ಕಟೆಯಾಗಿ ಪ್ರಚಾರ ನೀಡಿ ಸೋಲುವಂತಹ ಚಿತ್ರಗಳಿಗೂ ತಕ್ಕ ಮಟ್ಟಿಗಾದರೂ ಕಲೆಕ್ಷನ್ ಆಗುವ ಹಾಗೆ ಮಾಡುತ್ತಿದ್ದ ಟ್ರೋಲ್ ಪೇಜ್’ಗಳನ್ನು ಬೆಂಬಲಿಸದಿದ್ದಕ್ಕೆ ನಮಗೆ ತಕ್ಕ ಶಾಸ್ತಿ ಆಗಿದೆ ಇನ್ನುಮುಂದೆ ನಾವು ಕನ್ನಡ ಚಿತ್ರರಂಗವನ್ನು ಬೆಂಬಲಿಸುವುದಿಲ್ಲ ಎಂಬ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

 

 

” ಕನ್ನಡ ಅಂದರೆ ಜೀವ ಆದರೆ ಕನ್ನಡ ಚಿತ್ರರಂಗದವರದ್ದು ಕೇವಲ ಬ್ಯುಸಿನೆಸ್ ಯೋಚನೆ, ಕನ್ನಡಕ್ಕೆ ನಮ್ಮ ಬೆಂಬಲವಿದೆ ಆದರೆ ಕನ್ನಡ ಚಿತ್ರರಂಗಕ್ಕಿಲ್ಲ.. ನಮ್ಮೆಲ್ಲಾ ಕೆಲಸದ ನಡುವೆಯೂ ನಿಮಗಾಗಿ ನಮ್ಮ ಸಮಯವನ್ನು ಮೀಸಲಿಟ್ಟಿದ್ದೆವು ನೀವು ನಮಗೆ ಬೆಂಬಲಿಸಲು ಸಿದ್ದರಿಲ್ಲ ಅಂದ ಮೇಲೆ ನಾವು ನಿಮ್ಮನ್ನ ಬೆಂಬಲಿಸೋದಿಲ್ಲ.” ಎಂಬುದು ಟ್ರೊಲ್ ಪೇಜ್ ಗಳ ಅಭಿಪ್ರಾಯ.

 

 

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಯಶಸ್ಸಿನ ಹಿಂದೆ ಪರೋಕ್ಷ ಕಾರಣವಾಗಿದ್ದ ಟ್ರೊಲ್ ಗಳು ತಮ್ಮ ಮೀಮ್ಸ್’ಗಳ ಮೂಲಕ ಪ್ರಚಾರ ನೀಡುತ್ತಿದ್ದವು. ಇನ್ನು ಕನ್ನಡ ಅತಿದೊಡ್ಡ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್ ಸಕ್ಸಸ್ನಲ್ಲೂ ಟ್ರೊಲ್ ಪೇಜ್’ಗಳ ದೊಡ್ಡ ಪಾತ್ರವಿದೆ. ಟ್ರೊಲ್ ಪೇಜ್’ಗಳ ಮಹತ್ವದ ಬಗ್ಗೆ ಒಂದು ಸಂಚಿಕೆಯನ್ನೇ ಬಿಗ್ ಬಾಸ್ ನಲ್ಲಿ ಮಾಡಲಾಗಿತ್ತು ಅಲ್ಲಿನ ಸ್ಪರ್ಧಿಗಳು ಕೂಡ ಟ್ರೊಲ್ ಪೇಜ್’ಗಳಿಗೆ ದನ್ಯವಾದಗಳನ್ನ ಅರ್ಪಿಸಿದ್ದರು.  ಹೀಗಿರುವಾಗ ಟ್ರೋಲ್ ಪೇಜ್’ಗಳನ್ನ ಕಡೆಗಣಿಸಿರುವುದು ಚಿತ್ರರಂಗಕ್ಕೆ ಖಂಡಿತವಾಗಿಯೂ ತೊಂದರೆಯಾಗಲಿದೆ.

 

 

 

 

ಕನ್ನಡ ಟ್ರೊಲ್ ಪೇಜ್ ವಿರುದ್ಧ ಕನ್ನಡ ಫಿಲಂ ಇಂಡಸ್ಟ್ರಿಯನ್ನು ಎತ್ತಿ ಕಟ್ಟಿದ ಕಾಣದ ಕೈ ಯಾವುದು ಗೊತ್ತಾ ?

ಕನ್ನಡ ಟ್ರೊಲ್ ಪೇಜ್ ವಿರುದ್ಧ ಕನ್ನಡ ಫಿಲಂ ಇಂಡಸ್ಟ್ರಿಯನ್ನು ಎತ್ತಿ ಕಟ್ಟಿದ ಕಾಣದ ಕೈ – ಶಿಲ್ಪ ಗಣೇಶ್ !

 

 

ಈ ಟ್ವೀಟ್ ಗೆ ಪ್ರತಿಯಾಗಿ ಕೆಲ ಟ್ರೋಲಿಗರು ಪ್ರತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ .

ನಿಮ್ಮ ಮನೆ ತೂತು ಸರಿ ಮಾಡ್ಕೊಳ್ಳಿ

 

 

ಮೂಲಗಳಿಂದ ಬಂದ ಮಾಹಿತಿ ಪ್ರಕಾರ ರಾಜರಾಜೇಶ್ವರಿ ನಗರದ ಪೊಲೀಸ್ ರು ಎಲ್ಲ ಟ್ರೊಲ್ ಅಡ್ಮಿನ್ಸ್ ಅನ್ನು ಕರೆಸಿ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ , ಯಾಕೆ ರಾಜರಾಜೇಶ್ವರಿ ನಗರದ ಪೊಲೀಸ್ ರೇ ಟ್ರೋಲಿಗರನ್ನು ಕರೆಸಿ ವಿಚಾರಿಸಿದ್ದಾರೆ ಎಂಬುದಕ್ಕೆ ಉತ್ತರ ನಿಮಗೆ ಆಗಲೇ ಸಿಕ್ಕಿದೆ ಅಲ್ಲವೇ ?

 

ಪೇಜ್ ಗಳಲ್ಲಿ ತಮಿಳು ಮತ್ತು ತೆಲುಗು ಚಿತ್ರಗಳನ್ನ ಪ್ರಚಾರ ಮಾಡಲು ಶುರು ಮಾಡಿಕೊಂಡಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top