fbpx
ಆರೋಗ್ಯ

ಸಮುದ್ರ ಮೀನು ( Cuttlefish ) ‘ಸಮಾಧ್ರೇಫನ’ ಆಯುರ್ವೇದ ಔಷಧವಾಗಿ ಕಣ್ಣು, ಕಿವಿ ಮತ್ತು ಹಲ್ಲುಗಳ ಸಮಸ್ಯೆ ಗೆ ಹೇಗೆ ಪರಿಹಾರ ಕೊಡುತ್ತೆ ತಿಳಿಯೋಣ ಬನ್ನಿ

ಸಮುದ್ರ ಮೀನು ( Cuttlefish Bone )ನಿಂದ ನಿಮ್ಮ ಕಣ್ಣು ನೋವು ,ಕಿವಿ ಯ ಸಮಸ್ಯೆ ಮತ್ತು ಹಲ್ಲುಗಳ ನೋವು ಇಂತ ಸಮಸ್ಯೆ ಯಿಂದ ಹೊರಬರಬಹುದು :ಅದು ಹೇಗೆ ಅಂತ ನಾವು ಹೇಳ್ತಿರಿ :

 

 

ಸಮುದ್ರ ಮೀನಿನ ಮೂಳೆಗಳನ್ನ ಗಾಯಗಳು, ಹುಣ್ಣುಗಳು ಮತ್ತು ಚರ್ಮದ ಕಾಯಿಲೆಗಳ ಚಿಕಿತ್ಸೆಯಲ್ಲಿ ಕೂಡ ಆಯುರ್ವೇದ ಔಷಧವಾಗಿ ಉಪಯೋಗಿಸಲಾಗುತ್ತದೆ . ಇದನ್ನು ಸಂಸ್ಕೃತದಲ್ಲಿ ‘ಸಮಾಧ್ರೇಫನ’ ಎಂದು ಕರೆಯಲಾಗುತ್ತದೆ ಮತ್ತು ಹಿಂದಿಯಲ್ಲಿ ‘ಸಮುಂದರ್ ಚಗ್’ ಎಂದು ಕರೆಯಲ್ಪಡುತ್ತದೆ.

ಆಯುರ್ವೇದದಲ್ಲಿ ಇದನ್ನು ಅಬ್ಧೀಫೇನಾ, ಹಿಂದೀರಾ, ಅಬ್ಧಿಕಫಾ, ಫೇನಾ ಮುಂತಾದ ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಸಾಮಾನ್ಯವಾಗಿ ಸಮುದ್ರ ಮೀನು 3-5 ಸೆಂ.ಮೀ ಅಗಲ ಮತ್ತು 10-20 ಸೆಂ.ಮೀ ಉದ್ದವಿರುತ್ತದೆ, ಇದರಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್, ಫಾಸ್ಫೇಟ್ ಮತ್ತು ಸಲ್ಫೇಟ್ಗಗಳು ಸಮೃದ್ಧವಾಗಿದೆ. ಇದು ಕಣ್ಣಿನ ಸಮಸ್ಯೆ ಮತ್ತು ಕಿವಿ ಸಮಸ್ಯೆಗಳಿಗೆ ಉತ್ತಮ ಪರಿಹಾರನೀಡುತ್ತದೆ.

 

 

ಮನೆಮದ್ದು:

 

೧.ಕಣ್ಣುಗಳ ಉರಿಯುವುದಕ್ಕೆ ಸಮುದ್ರ ಮೀನಿನ ಮೂಳೆ ಪುಡಿ ಮತ್ತು ರೋಸ್ ವಾಟರ್ (ಗುಲಾಭಿ ಜಲ ) ಮಿಶ್ರಣ:

 

 

5 ಗ್ರಾಂ ಸಮುದ್ರ ಮೀನಿನ ಮೂಳೆ ಪುಡಿಗೆ 100 ಮಿಲಿ ರೋಸ್ ವಾಟರ್ ಬೆರೆಸಿ ಅದನ್ನು 1-2 ಗಂಟೆಗಳ ಕಾಲ ಹಾಗೆ ಇಟ್ಟು ನಂತರ ಅದನ್ನು ಶೋಧಿಸಿ ಉರಿಯುತ್ತಿರುವ ಕಣ್ಣಿನ ಮೇಲೆ ಮುಚ್ಚಿದ ಮೇಲೆ ಹಾಕಿಕೊಂಡು ಸ್ವಲ್ಪ ಹೊತ್ತು ಬಿಟ್ಟು ನಿಮ್ಮ ಕಣ್ಣು ಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು.

 

೨.ಕಿವಿ ನೋವಿಗೆ ಸಮುದ್ರ ಮೀನಿನ ಮೂಳೆ ಪುಡಿ ಮತ್ತು ರೋಸ್ ವಾಟರ್ ಮಿಶ್ರಣ:

 

 

5 ಗ್ರಾಂ ಸಮುದ್ರ ಮೀನಿನ ಮೂಳೆ ಪುಡಿಗೆ 100 ಮಿಲಿ ರೋಸ್ ವಾಟರ್ ಬೆರೆಸಿ ಅದನ್ನು 1-2 ಗಂಟೆಗಳ ಕಾಲ ಹಾಗೆ ಇಟ್ಟು ನಂತರ ಅದನ್ನು ಶೋಧಿಸಿ ನೋವುತ್ತಿರುವ ಕಿವಿಗಳ ಒಳಗೆ ಹಾಕಿಕೊಂಡು ಸ್ವಲ್ಪ ಹೊತ್ತು ಬಿಡಬೇಕು.

 

೩.ಹಳದಿ ವಸಡುಗಳ ಪರಿಹಾರಕ್ಕಾಗಿ:

 

 

ಸ್ವಲ್ಪ ಸಮುದ್ರ ಮೀನಿನ ಮೂಳೆ ಪುಡಿಗೆ ಸ್ವಲ್ಪ ಬೂದಿ ಬೆರೆಸಿ ನಿಮ್ಮ ಹಲ್ಲುಗಳನ್ನು ಆ ಮಿಶ್ರಣದಿಂದ ದಿನ ಉಜ್ಜುವುದರಿಂದ ನಿಮ್ಮ ಹಳದಿ ವಸಡು ಬಿಳಿಯಾಗುವುದು.

 

೪.ಬಿಳಿಮಚ್ಚೆ (ಬಿಳಿ ಚರ್ಮ) ಗಳಿಗೆ ಪರಿಹಾರ ನೀಡುತ್ತದೆ:

 

 

ಸಮುದ್ರ ಮೀನಿನ ಮೂಳೆ ಪುಡಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಪೇಸ್ಟ್ ಅನ್ನು ತಯಾರಿಸಿಕೊಂಡು ಬಿಳಿ ಚರ್ಮದ ಮೇಲೆ ದಿನ ಹಚ್ಚುತ್ತಬರಬೇಕು ಇದರಿಂದ ಬಿಳಿಮಚ್ಚೆ ದಿನೇ ದಿನೇ ಕಡಿಮೆ ಆಗುತ್ತಾ ಬರುತ್ತದೆ.

ಔಷಧೀಯ ಗುಣಗಳು ಪ್ರತಿಯೊಂದು ನೈಸರ್ಗಿಕ ಸಂಪನ್ಮೂಲಗಳಲ್ಲಿ ಕಂಡುಬರುತ್ತವೆ. ನಮಗೆ ಅದನ್ನು ಗುರುತಿಸುವ ಜ್ಞಾನವಿರಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top