fbpx
ದೇವರು

ಕಳೆದು ಹೋದ ಆಸ್ತಿ,ಹಣ, ಮನಸ್ಸಿನ ಶಾಂತಿಯನ್ನು ಮತ್ತೆ ಪಡೆಯಬೇಕಾದ್ರೆ ಶ್ರೀ ಕಾರ್ತವೀರ್ಯಾರ್ಜುನ ಮಂತ್ರ ಪಠನೆ ಮಾಡಿದ್ರೆ ಸಾಕು

ಕಳೆದು ಹೋಗಿರುವುದನ್ನು ಮತ್ತೆ ಗಳಿಸಲು ಈ ಮಂತ್ರವನ್ನು ಪಠಿಸಬೇಕು.

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚಾರ ವಿಚಾರಗಳು ಬಹಳಷ್ಟಿವೆ. ಪ್ರತಿ ಸಮಸ್ಯೆಗೂ ತನ್ನದೇ ಆದ ಒಳ್ಳೆಯ ಪರಿಹಾರ ಮಾರ್ಗ ಇದ್ದೇ ಇರುತ್ತದೆ.

 

 

ಹಾಗೆಯೇ ನಾವು ಯಾವುದಾದರೂ ಕಳೆದುಕೊಂಡಿರುವ ವಸ್ತುಗಳನ್ನು ಅಥವಾ ಆಸ್ತಿ,ಹಣ, ಮನಸ್ಸಿನ ಶಾಂತಿಯನ್ನು ಮತ್ತೆ ಗಳಿಸಬೇಕು, ಆ ವಸ್ತುವನ್ನು ಮರಳಿ ಪಡೆಯಬೇಕು, ತೆಗೆದುಕೊಂಡು ಬರಬೇಕು ಎಂದರೆ ಒಂದು ಒಳ್ಳೆಯ ಪರಿಹಾರ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮತ್ತು ಶಾಸ್ತ್ರಗಳಲ್ಲಿ ಇದೆ.

 

 ಅದೇ ಶ್ರೀ ಕಾರ್ತವೀರ್ಯಾರ್ಜುನ ಮಂತ್ರ

ಈ ಮಂತ್ರವನ್ನು ಜಪಿಸುವ ಮುಂಚೆ ಪಾಲಿಸಬೇಕಾದ ಕೆಲವು ನಿಯಮಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ….

 

 

ಮೊದಲು ಸ್ನಾನ ಮಾಡಿ ಶುಚಿರ್ಭೂತರಾಗಿ ಮನಸ್ಸು ಸ್ಫೂರ್ತಿಯಾಗಿ ಶ್ರದ್ಧೆ, ಭಕ್ತಿಯಿಂದ ಈ ಮಂತ್ರವನ್ನು ಪಠಿಸಬೇಕು…

 

 “ಓಂ ಕಂ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಹುಸಹಸ್ರವಾನ್ l

 ಹ್ರೀಂ ತನ್ನ ಸ್ಮರಣಾದೇವ ಹತ0 ನಷ್ಟ0 ಚ ಲಭ್ಯತೇ II

 ಕ್ರೋ0 ಸಹಸ್ರಾರ ಹುಂ  ಫಟ್ ಕ್ರೋ0  ಹ್ರೀಂ ಓಂ”

 

ಕಾರ್ತವೀರ್ಯರ್ಜುನ ಯಾರು ಎಂದರೆ ಸಾಕ್ಷಾತ್ ಮಹಾ ವಿಷ್ಣುವಿನ ಬಲಗೈನಲ್ಲಿರುವ ಸುದರ್ಶನ ಚಕ್ರ.

ಈ ಸುದರ್ಶನ ಚಕ್ರವೇ ವಿಷ್ಣುವಿನ ಶಾಪಕ್ಕೆ ಒಳಗಾಗಿ ಕಾರ್ತವೀರ್ಯಾರ್ಜುನನಾಗಿ ಭೂಮಿಯ ಮೇಲೆ ಅವತರಿಸಿದನು. ಈ ಸುದರ್ಶನ ಚಕ್ರ ಇರುವುದರಿಂದಲೇ ವಿಷ್ಣು ದೇವರು ರಾಕ್ಷಸನನ್ನು ಸಂಹಾರ ಮಾಡುತ್ತೇನೆ ಎಂಬ ಅಹಂಕಾರ ಈ ಸುದರ್ಶನ ಚಕ್ರಕ್ಕೆ  ಇತ್ತು. ಅದನ್ನು ತಿಳಿದುಕೊಂಡ ವಿಷ್ಣುವು ಆ ಸುದರ್ಶನ ಚಕ್ರವನ್ನು ಮನುಷ್ಯನಾಗಿ ಹುಟ್ಟುವಂತೆ ಮಾಡುತ್ತಾನೆ.

 

 

ಆದರೆ ಈ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದ ಕಾರ್ತವೀರ್ಯಾರ್ಜುನನಿಗೆ  ಕೈಗಳು ಇರುವುದಿಲ್ಲ. ಅವನು ದತ್ತಾತ್ರೇಯ ದೇವರನ್ನು ಪೂಜಿಸಿ ಸಾವಿರ ಕೈಗಳು  ಉಳ್ಳವನಾಗುತ್ತಾನೆ. ಆದ್ದರಿಂದ ಇವರನ್ನು ಸಹಸ್ರಬಾಹು ಎಂದು ಸಹ ಕರೆಯುತ್ತಾರೆ.

ಕಾರ್ತವೀರ್ಯಾರ್ಜುನ ಹೇಗೆ ತನ್ನ ಕೈಗಳನ್ನು ಮತ್ತೆ ಪಡೆಯುತ್ತಾನೋ ಹಾಗೆ ವಿಷ್ಣು ದೇವನ ಕೈಗೆ ಮತ್ತೆ ಸುದರ್ಶನ ಚಕ್ರವಾಗಿ ಬದಲಾಗುತ್ತದೆ. ಹಾಗೆಯೇ ನಾವು ಸಹ ಈ ಮಂತ್ರವನ್ನು ಜಪಿಸುವುದರಿಂದ ಕಳೆದು ಹೋಗಿರುವ ವಸ್ತುಗಳು, ಆಸ್ತಿ ಮತ್ತು ಮನಸ್ಸಿನ ಶಾಂತಿಯನ್ನು ಮತ್ತೆ ಗಳಿಸಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Raghavendra Katti says:

ಧನ್ಯವಾದಗಳು.
ಈ ಮಂತ್ರಗಳ ಮೂಲವನ್ನು ಹಾಕಿದರೆ ಓಳ್ಳೆಯದು. Source of this mantra is very important.
Ragu

To Top