fbpx
ಭವಿಷ್ಯ

ಡಿಸೆಂಬರ್ 10 : ನಿತ್ಯಭವಿಷ್ಯ ಮತ್ತೆ ಪಂಚಾಂಗ.

ಭಾನುವಾರ, ೧೦ ಡಿಸೆಂಬರ್ ೨೦೧೭

ಸೂರ್ಯೋದಯ : ೦೬:೩೪
ಸೂರ್ಯಾಸ್ತ : ೧೭:೫೦
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಕೃಷ್ಣ ಪಕ್ಷ
ತಿಥಿ : ಅಷ್ಟಮೀ
ನಕ್ಷತ್ರ : ಹುಬ್ಬ
ಯೋಗ : ಪ್ರೀತಿ
ಪ್ರಥಮ ಕರಣ : ಬಾಲವ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೯ – ೧೨:೩೫
ಅಮೃತಕಾಲ : ೧೧:೧೩ – ೧೨:೪೯
ರಾಹು ಕಾಲ: ೧೬:೨೫ – ೧೭:೫೦
ಗುಳಿಕ ಕಾಲ: ೧೫:೦೧ – ೧೬:೨೫
ಯಮಗಂಡ: ೧೨:೧೨ – ೧೩:೩೬

ಮೇಷ (Mesha)

ಮನುಜ ಒಂದು ಬಾಗಿಲು ಮುಟ್ಟಿದರೆ ದೇವರು ಸಾವಿರ ಬಾಗಿಲನ್ನು ತೆರೆಯುವನು. ಹಾಗಾಗಿ ಯಾವುದನ್ನು ಮಾಡಿದರೆ ಒಳಿತಾಗುವುದು ಎಂದು ಚಿಂತಿಸಿ ಕಾರ್ಯ ಪ್ರವೃತ್ತರಾಗಿರಿ.

 

 

ವೃಷಭ (Vrushabha)

ಗುರಿ ಸಾಧಿಸುವಲ್ಲಿ ಗುರುವಿನ ಪಾತ್ರ ಹಿರಿದು. ಗುರುವನ್ನು ಮನಸಾರೆ ಕೊಂಡಾಡಿ. ಸಾಧ್ಯವಾದಲ್ಲಿ ಗುರುಮಂದಿರಕ್ಕೆ ಹೋಗಿ ಪೂಜೆಯನ್ನು ಮಾಡಿಸಿ. ಮಾತುಗಾರಿಕೆ ಪ್ರಭಾವ ಹೆಚ್ಚಾಗುವುದು.

 

ಮಿಥುನ (Mithuna)

ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ರಾಜಕೀಯ ನಾಯಕರುಗಳಿಗೆ ಉತ್ತಮ. ಪುಸ್ತಕ ಬರಹಗಾರರಿಗೆ ಉತ್ತಮ ದಿನ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು.

 

ಕರ್ಕ (Karka)

ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಸಮಾಜದ ಮುಖಂಡರುಗಳಿಗೆ ಟೀಕೆ ಟಿಪ್ಪಣಿಗಳು ಎದುರಾಗುವುದು. ಗುರು ಸ್ತೋತ್ರ ಪಠಿಸಿರಿ. ಮತ್ತು ಮನೆಯಲ್ಲಿನ ಗುರು-ಹಿರಿಯರ ಆಶೀರ್ವಾದ ಪಡೆಯಿರಿ.

 

ಸಿಂಹ (Simha)

ಕುಟುಂಬದಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ಹಮ್ಮಿಕೊಂಡ ಕಾರ್ಯಗಳು ಗುರುವಿನ ಕೃಪೆಯಿಂದ ಬಹು ಬೇಗನೆ ಮುಗಿಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಕನ್ಯಾರಾಶಿ (Kanya)

ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಲೇವಾದೇವಿ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಉತ್ತಮ ಆರೋಗ್ಯ, ಮಹತ್ತರ ಕಾರ್ಯ ಯೋಜನೆಯು ಪೂರ್ಣಗೊಳ್ಳುವುದು.

 

ತುಲಾ (Tula)

ನೀವೀಗ ಹೆಚ್ಚು ಶಕ್ತಿಶಾಲಿ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ನಿಷ್ಟುರ ಇಲ್ಲದೆ ನಿರ್ವಹಣೆ ಅಸಾಧ್ಯ ಎನ್ನುವುದು ತಿಳಿಯುತ್ತದೆ. ನಿಮ್ಮ ಸೌಮ್ಯ ಸ್ವಭಾವವನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳುವರು.

 

ವೃಶ್ಚಿಕ (Vrushchika)

ಉತ್ತಮ ಆರೋಗ್ಯ, ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು. ನೀವು ಆಯೋಜಿಸಿದ ಕಾರ್ಯಕ್ರಮಗಳು ಯಶಸ್ಸಿನತ್ತ ಸಾಗುವುದು. ಸಮಾಜ ಬಾಂಧವರಿಂದ ಮೆಚ್ಚುಗೆಯ ನುಡಿಗಳನ್ನು ಕೇಳುವಿರಿ.

 

ಧನು ರಾಶಿ (Dhanu)

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುವುದು. ಗುರುವಿನ ಬಲವಿಲ್ಲದೆ ಇರುವುದರಿಂದ ಹಣಕಾಸು ಒಪ್ಪಂದಗಳ ವಿಷಯದಲ್ಲಿ ಜಾಗ್ರತೆಯಿಂದ ಇರಿ. ನೂತನ ಆಸ್ತಿ, ಮನೆ ಖರೀದಿಗೆ ಸೂಕ್ತ ಸಮಯವಲ್ಲ.

 

ಮಕರ (Makara)

ಇಂದು ಮಹತ್ತರ ದಿನವಾಗಿ ಪರಿವರ್ತನೆ ಆಗುವುದು. ಈ ದಿನವನ್ನು ಅಷ್ಟು ಸುಲಭವಾಗಿ ಮರೆಯಲು ಆಗುವುದಿಲ್ಲ. ನಿಮ್ಮ ಬಿಡುವಿನ ವೇಳೆಯಲ್ಲಿ ಹಳೆ ಸ್ನೇಹಿತರನ್ನು ಭೇಟಿ ಮಾಡಿರಿ.

 

ಕುಂಭರಾಶಿ (Kumbha)

ಹೊಸ ಯೋಜನೆಗಳ ಅನುಷ್ಟಾನಕ್ಕೆ ಸೂಕ್ತ ಸಮಯ. ಹಣಕಾಸಿನ ಅನುಕೂಲ ತಾನೇ ತಾನಾಗಿ ಒದಗಲಿದೆ. ಸಂಗಾತಿಯ ಆಶೋತ್ತರಗಳನ್ನು ಈಡೇರಿಸುವುದರಲ್ಲಿ ಖುಷಿ ಕಾಣುವಿರಿ.

 

ಮೀನರಾಶಿ (Meena)

ಸದ್ಯದ ಪರಿಸ್ಥಿತಿಯಲ್ಲಿ ಯಾವ ದೇವರನ್ನು ಮೊರೆ ಹೋದರೂ ನಿರಾಶೆಯೇ ಆಗುವುದು. ಹಾಗಂತ ಧೈರ್ಯ ಕೆಡಬೇಡಿ.. ಹನುಮಾನ್ ಚಾಲೀಸಾ ಪಠಣ ಮಾಡಿ ಶನಿದೇವಾಲಯದಲ್ಲಿ ಎಳ್ಳುದೀಪ ಹಚ್ಚಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top