fbpx
ದೇವರು

ಶಾಸ್ತ್ರದ ಪ್ರಕಾರ ಚಿನ್ನದ ಒಡವೆಗಳನ್ನು ಹೇಗೆ ಹಾಕಿ ಕೊಳ್ಳಬೇಕು ಮತ್ತು ಯಾವಾಗ ಚಿನ್ನದ ಆಭರಣಗಳನ್ನು ಯಾರು ಹಾಕಿಕೊಳ್ಳಬಾರದು ಗೊತ್ತಾ ?

ನೀವು ಗರ್ಭವತಿಯಾಗಲು ಪ್ರಯತ್ನಿಸುತ್ತಿದ್ದರೆ ಎಡಗೈಗೆ ಬಂಗಾರದ ಆಭರಣಗಳನ್ನು  ಧರಿಸಬೇಡಿ .ನೀವು ಯಾವ ರೀತಿ ಚಿನ್ನವನ್ನು ಧರಿಸಬೇಕೆಂದು ಇಲ್ಲಿದೆ ನೋಡಿ ತಿಳಿದುಕೊಳ್ಳಿ…

ಭಾರತ ದೇಶದಲ್ಲಿರುವವರಿಗೆ  ಚಿನ್ನದ ಮೇಲೆ ವಿಶೇಷವಾದ ವ್ಯಾಮೋಹವಿದೆ. ನಿಮಗೆಲ್ಲಾ ಚಿನ್ನದ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಚಿನ್ನದ ಒಡವೆ ಇದ್ದರೂ ಸಹ ಸಾಲದು ಎನಿಸುತ್ತದೆ. ತುಂಬಾ ಬೆಲೆ ಬಾಳುವ ಹಳದಿ ಲೋಹ ನಿಮ್ಮ ಕಷ್ಟ ಕಾಲದಲ್ಲೂ ಸಹ ನೆರವಿಗೆ ಬರುತ್ತದೆ. ಚಿನ್ನವಿದ್ದರೆ ನಿಮಗೆ ಹಣಕಾಸಿನ ತೊಂದರೆ ಕಾಣಿಸಿಕೊಂಡರೆ ಅದನ್ನು ಅಡವಿಟ್ಟು ಹಣ ಪಡೆಯಬಹುದು.

 

 

ಚಿನ್ನ ಅಥವಾ ಬೇರೆ ಒಡವೆಗಳನ್ನು ಹಾಕಿಕೊಳ್ಳುವುದರಿಂದ ನಮ್ಮ ಗ್ರಹಗತಿಯ ಮೇಲೆ ಪರಿಣಾಮ ಬೀರಬಹುದು. ಚಿನ್ನದ  ಲೋಹವನ್ನು  ಹೇಗೆ ಹಾಕಿಕೊಳ್ಳಬೇಕು ಎಂದು ತಿಳಿದುಕೊಳ್ಳಿ. ತುಂಬಾ ಹಣ ಕೊಟ್ಟು ತಂದು ಹಾಕಿಕೊಳ್ಳುವ ಒಡವೆಯಿಂದ ನಿಮಗೆ ತೊಂದರೆಯಾಗದೇ ಇರಲಿ…

ಎಡಗೈಗೆ ಚಿನ್ನದ ಒಡವೆ ಹಾಕಿಕೊಳ್ಳುವುದರಿಂದ ನಿಮಗೆ ತೊಂದರೆಯಾಗಬಹುದು. ನೀವು ಎಡಗೈಗೆ ಚಿನ್ನದ ಒಡವೆ ಹಾಕಿಕೊಳ್ಳಬೇಡಿ. ಹಾಗೆ ಹಾಕಿಕೊಳ್ಳಬೇಕು ಎಂದು ಇಷ್ಟವಿದ್ದರೆ ಮೊದಲು ಜ್ಯೋತಿಷಿಗಳನ್ನು ಕೇಳಿ ನಂತರ ಹಾಕಿಕೊಳ್ಳಿ.

 

 

ಕಾಲುಗಳಿಗೆ ಚಿನ್ನದ ಗೆಜ್ಜೆ ಅಥವಾ ಕಾಲುಂಗುರ ಹಾಕಿಕೊಳ್ಳಬಾರದು. ಯಾಕೆಂದರೆ ಇದರಿಂದ ಆರೋಗ್ಯದ ಮೇಲೆ ತೊಂದರೆ ಉಂಟಾಗಬಹುದು.

ನಿಮಗೆ ಮಗು ಬೇಕು. ಗರ್ಭವತಿ  ಆಗುತ್ತಿಲ್ಲ ಎಂದಾದರೆ ನೀವು ಉಂಗುರದ ಬೆರಳಿಗೆ ಚಿನ್ನವನ್ನು ಹಾಕಿಕೊಳ್ಳಬೇಕು. ಆವಾಗ ನಿಮ್ಮ ಗ್ರಹಗತಿಗಳಲ್ಲಿ ಸುಧಾರಣೆಯಾಗುತ್ತದೆ.

 

 

ಗರ್ಭವತಿ ಮಹಿಳೆಯರು ಹೆಚ್ಚು ಚಿನ್ನವನ್ನು ಹಾಕಿಕೊಳ್ಳಬಾರದು. ಇದರಿಂದ ಅವರಿಗೆ ತೊಂದರೆಗಳು ಉಂಟಾಗಬಹುದು.

ಸನ್ಯಾಸಿ ಅಥವಾ ಗುರುಗಳಿಗೆ ಚಿನ್ನವನ್ನು ದಾನ ಮಾಡುವುದರಿಂದ ಗ್ರಹಗಳ ಆಶೀರ್ವಾದ ನಿಮಗೆ ಸಿಗುತ್ತದೆ.

 

 

ಯಾವುದೇ ರೀತಿಯ ಚಿನ್ನವನ್ನು ಕಳೆದುಕೊಂಡರೆ ಅದು ಮುಂದೆ ಆರೋಗ್ಯದ ತೊಂದರೆಯಾಗಬಹುದು ಯಾರಿಂದಲಾದರೂ ಚಿನ್ನವನ್ನು ಪಡೆದುಕೊಂಡರೆ ನಿಮಗೆ ಖರ್ಚು ಹೆಚ್ಚಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top