fbpx
ಭವಿಷ್ಯ

2018 ನೇ ಇಸವಿಯ ವರ್ಷದ ನಿಮ್ಮ ಭವಿಷ್ಯ ಹೇಗಿದೆ ತಿಳ್ಕೊಳ್ಳಿ

ಮೇಷ (Mesha)

 

 

 

ಮೇಷ ರಾಶಿಯವರಿಗೆ ಸಂಪೂರ್ಣ ಉತ್ಸಾಹದಿಂದ ಇರುವ ವರ್ಷ ಇದು. ಉತ್ಸಾಹದಿಂದಲೇ ಆರಂಭವಾಗುತ್ತದೆ. ಉತ್ತಮ ನಿರ್ಧಾರದಿಂದ ಈ ವರ್ಷದಲ್ಲಿ ನಿಮಗೆ ಉತ್ತಮ ಸುದ್ದಿಗಳನ್ನು ಹೊತ್ತು ತರುತ್ತದೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಅತಿಯಾದ ಕೆಲಸದ ಒತ್ತಡದಿಂದಾಗಿ  ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೆ ಇರುವುದರಿಂದ ಮನೆಯಲ್ಲಿ ಖುಷಿ ಕಡಿಮೆಯಾದಂತೆ ನಿಮಗೆ ಭಾಸವಾಗುವುದು. ಮೊದಲ ಎರಡು ತಿಂಗಳು ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿಲ್ಲ ದಿರಬಹುದು.

ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳಿಗೆ ಕಾಣುವುದು.ದೀರ್ಘ  ಪ್ರಯಾಣ ಅನುಕೂಲಕರವಾಗಿರುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ಒದಗಿಸುತ್ತದೆ. ಅಕ್ಟೋಬರ್ ಉತ್ತರಾರ್ಧದ ನಂತರ ಗಳಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಕಠಿಣ ಪರಿಶ್ರಮದ ಅಗತ್ಯವಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.  ವೈವಾಹಿಕ ಜೀವನದಲ್ಲಿ ನೀವು ಹೆಚ್ಚು ಬದ್ಧತೆ ಪ್ರದರ್ಶಿಸ ಬೇಕಾಗಬಹುದು. ನಿಧಾನವಾಗಿ ಇತರರ ಹೃದಯವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದಿಂದ ಆಗಾಗ್ಗೆ ಮನಸ್ಸು ದೂರವಾಗುವ ಸಾಧ್ಯತೆ ಇರುತ್ತದೆ. ಒಟ್ಟಾರೆಯಾಗಿ ನಿಮ್ಮಲ್ಲಿ ಉತ್ತಮ ಹಾಗೂ ಪ್ರಗತಿಯ ವರ್ಷ ಇದಾಗಿದೆ .

 

ವೃಷಭ (Vrushabha)

 

ಅತಿರೇಕದಿಂದ ವರ್ಷ ಆರಂಭವಾಗುವ ಸಾಧ್ಯತೆ ಇದ್ದು. ಇದು ನಿಮ್ಮ ಮೇಲೆ ಅಡ್ಡ ಪರಿಣಾಮ ಬೀರಬಹುದು. ಹೀಗಾಗಿ ನೀವು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ನಿಧಾನವಾಗಿ ನೀವು ಆತ್ಮವಿಶ್ವಾಸವನ್ನು ಗಳಿಸುತ್ತೀರಿ.ಏನನ್ನಾದರೂ ಸಾಧಿಸಲು ಬಯಸುತ್ತೀರಿ. ಯಶಸ್ಸನ್ನು ಸಾಧಿಸಲು ನೀವು ವರ್ಷಪೂರ್ತಿ ಕಠಿಣ ಪರಿಶ್ರಮ ವಹಿಸಬೇಕು. ಕೆಲಸದಲ್ಲಿ ಕೆಲವು ನಿರಾಸೆಗಳು ಇರಬಹುದು. ಅಕ್ಟೋಬರ್ ನಂತರ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನ ಬೆಳಗುತ್ತದೆ.  ಕೆಲವು ಸಣ್ಣ ಪ್ರವಾಸಗಳು ಉತ್ತಮ ಫಲಿತಾಂಶ ನೀಡುತ್ತವೆ. ನೀವು ತೀರ್ಥಯಾತ್ರೆಗೆ ತೆರಳಬಹುದು. ಮಕ್ಕಳು ಉತ್ತಮವಾಗಿ ಕಾಲ ಕಳೆಯುತ್ತಾರೆ.

ನೀವು ವಿವಾದಗಳು ಮತ್ತು ಸಂಘರ್ಷಗಳಿಂದ ದೂರವಿರಬೇಕು. ಇದರಿಂದ ನಿಮಗೆ ಆರ್ಥಿಕ ನಷ್ಟವಾಗುತ್ತದೆ. ಮೊದಲ ಎರಡು ತಿಂಗಳಲ್ಲಿ ಯಾವುದೇ ವಿವಾದಗಳಿಂದ ದೂರವಿರಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಆದರೂ ನೀವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸಬೇಕಾಗಿದೆ. ಆರೋಗ್ಯದ  ಸಮಸ್ಯೆಯ ಸಾಧ್ಯತೆ ಇದೆ. ನೀವು ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆಹಾರದ ಮೇಲೆ ನಿಗಾ ಇರಲಿ. ನಿಮ್ಮ ಬಾಳ ಸಂಗಾತಿಗೆ ಮತ್ತು ಧಾರ್ಮಿಕ ಕಾರ್ಯಗಳಿಗೆ ವೆಚ್ಚ ಮಾಡಬಹುದು. ಒಟ್ಟಾರೆಯಾಗಿ ಸರಾಸರಿಯಾಗಿ ಈ ವರ್ಷದಲ್ಲಿ ನೀವು ಹಲವು ಹೊಸ ಸಂಗತಿಗಳನ್ನು ಕಲಿಯುತ್ತೀರಿ.ನೀವು ಉತ್ತಮ ವೈವಾಹಿಕ ಮತ್ತು ಹಣಕಾಸಿನ ಸ್ಥಿತಿಯನ್ನು ಹೊಂದಿರುತ್ತೀರಿ.

 

ಮಿಥುನ (Mithuna)

 

 

ಈ ವರ್ಷ  ಉತ್ತಮವಾದ ಶಕ್ತಿ ನಿಮ್ಮನ್ನು ವರ್ಷಪೂರ್ತಿ ಆವರಿಸಲಿದೆ. ಆದರೂ ಮೊದಲ ತಿಂಗಳಲ್ಲಿ ನಿಮ್ಮ ಮಾತುಗಳ ಮೇಲೆ ಗಮನವಿರಲಿ. ನಿಮ್ಮ ಕೆಲಸವನ್ನು ವಿಸ್ತರಿಸುವುದಕ್ಕೆ ನೀವು ಮನೆಯಿಂದ ಹೊರಗೆ ಹೋಗಬಹುದು. ಅಲ್ಲಿ ಉತ್ತಮವಾಗಿ ಗಳಿಸಬಹುದು. ಆದರೆ ಇದು ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರರಿಂದ ದೂರವಿಡಬಹುದು. ಹೀಗಾಗಿ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನದ ಅಗತ್ಯವಿದೆ. ಮಿಥುನ ರಾಶಿಯ ಮಕ್ಕಳು ಬಹಳ ತುಂಟರಾಗಿರುತ್ತಾರೆ. ಆದರೆ ಅವರು ಹೊಸ ಸಂಗತಿಗಳನ್ನು ತಿಳಿಯಲು ಆಸಕ್ತರಾಗಿರುತ್ತಾರೆ. ಅವರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ.

ಅವಿವಾಹಿತರಿಗೆ ಡಿಸೆಂಬರ್ ಮಧ್ಯದವರೆಗೆ ನಿಮ್ಮ ಇಷ್ಟದ ಸಂಗಾತಿಯೊಂದಿಗೆ ವಿವಾಹವಾಗುತ್ತದೆ. ವರ್ಷದ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ವೆಚ್ಚ ಹೆಚ್ಚಾಗಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಮತ್ತು ಗಾಳಿ ಸಂಬಂಧಿತ ರೋಗಗಳು ಗಂಟುನೋವು, ಇತ್ಯಾದಿ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬಹುದು. ಈ ವರ್ಷದಲ್ಲಿ ವ್ಯಾಪಾರ ಹೆಚ್ಚು ಲಾಭ ತಂದುಕೊಡುತ್ತದೆ.  ಇಂದಿನ ಕಠಿಣ ಪರಿಶ್ರಮವೂ ನಿಮ್ಮ ವೃತ್ತಿ ಜೀವನದ ಯಶಸ್ಸಿಗೆ ಅಡಿಪಾಯವಾಗುತ್ತದೆ. ಒಟ್ಟಾರೆಯಾಗಿ ನೀವು ಬೆಳೆಯಲು ಮತ್ತು ಯಶಸ್ಸು ಸಾಧಿಸಲು ಹಲವು ಅವಕಾಶಗಳನ್ನು ಈ ವರ್ಷ ಒದಗಿಸುತ್ತಿದೆ.

 

ಕರ್ಕ (Karka)

 

 

ಈ ವರ್ಷ  ನಿಮ್ಮ ಸುತ್ತ ಇನ್ನಷ್ಟು ಹುಮ್ಮಸ್ಸು ಕಂಡು ಬರಲಿದೆ ಮತ್ತು ನೀವು ಇತರರನ್ನು ಮುನ್ನಡೆಸುತ್ತೀರಿ. ನಿಮ್ಮ ಆತ್ಮೀಯರಲ್ಲಿ ಕೆಲವರು ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರಬಹುದು ಮತ್ತು ಇದು ನಿಮ್ಮ ಸಂಬಂಧ ಹಳಸಲು ಕಾರಣವಾಗಿರಬಹುದು. ಆಗಾಗ್ಗೆ ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ ಕೌಟುಂಬಿಕ ಜೀವನ ಸೌಹಾರ್ದಯುತವಾಗಿರುತ್ತದೆ. ನೀವು ಗೌರವವನ್ನು ಗಳಿಸಬಹುದು. ವೃತ್ತಿ ಜೀವನವೂ ವೃದ್ಧಿಸಬಹುದು. ನಿಮ್ಮ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಬಹುದು. ಯಾವುದೇ ದೀರ್ಘಕಾಲಿನ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ. ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇರಲಿ ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿ ಕಡಿಮೆಯಾಗುವ ಭಾವನೆ ನಿಮಗೆ ಉಂಟಾಗಬಹುದು.

ನಿಮ್ಮ ವೈವಾಹಿಕ ಜೀವನವನ್ನು ಸುಸ್ಥಿತಿಯಲ್ಲಿಡಲು ವಾಗ್ವಾದಗಳಿಂದ ದೂರವಿರಬೇಕು. ವೆಚ್ಚ ಹೆಚ್ಚಾಗಬಹುದು ಹಾಗೆ  ಗಳಿಕೆಯು ಸಹ ಇರುತ್ತದೆ. ಆದರೆ ನಿಮ್ಮ ಹಣಕಾಸಿನಲ್ಲಿ ಅತಿಯಾದ ವೆಚ್ಚವೂ ಅಸಮತೋಲನವನ್ನು ಸೃಷ್ಟಿಸುವುದರಿಂದ ಜಾಣ್ಮೆಯಿಂದ ಅದನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ ಮತ್ತು ಮಕ್ಕಳ ಬದ್ಧತೆ ಮೆರೆಯುತ್ತಾರೆ. ವರ್ಷವಿಡೀ ನೀವು ಜೀವನದಲ್ಲಿ  ಹಣವನ್ನು ವೆಚ್ಚ ಮಾಡುವುದರಿಂದಾಗಿ  ನಿವು ಐಷಾರಾಮಿ ಜೀವನವನ್ನು ನಡೆಸುತ್ತೀರಿ. ಇದಕ್ಕಾಗಿ ನೀವು ಕಠಿಣ ಪರಿಶ್ರಮ ವಹಿಸಬೇಕು. ಒಟ್ಟಾರೆಯಾಗಿ ಈ ವರ್ಷವೂ ಕೆಲವು ಸವಾಲುಗಳೊಂದಿಗೆ ಉತ್ತಮವಾಗಿರುತ್ತದೆ.

 

ಸಿಂಹ (Simha)

 

ನೀವು ಧಾರ್ಮಿಕ ವಿಚಾರಗಳಿಂದ ಗಳಿಕೆ ಮಾಡುತ್ತೀರಿ ಮತ್ತು ತೀರ್ಥಯಾತ್ರೆಗೆ ತೆರಳಬಹುದು. ಸೋದರನ ಆರೋಗ್ಯ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಹದಗೆಡಬಹುದು. ಆದರೆ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಪ್ರೇಮದ ಜೀವನವೂ ಸಮ್ಮಿಶ್ರ ಹಂತಗಳನ್ನು ಎದುರಿಸಬಹುದು. ಒಂದೆಡೆ ಕೆಲವು ತಪ್ಪು ಗ್ರಹಿಕೆಗಳನ್ನು ನೀವು ಗಳಿಸಬಹುದು ಇನ್ನೊಂದೆಡೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮೆಚ್ಚುಗೆ ಗಳಿಸಬಹುದು. ನಿಮ್ಮ ಕ್ರಮಗಳು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ ಆದರೂ ನೀವು ಆಲಸ್ಯವನ್ನು ದೂರವಿಡಬೇಕು. ವೈವಾಹಿಕ ಜೀವನದಲ್ಲಿ ಖುಷಿ ಹೆಚ್ಚಾಗಬಹುದು.

ನಿಮ್ಮ ಜೀವನ ಮುಂದೆ ಸಾಗಿ ಸನ್ನಿವೇಶಗಳು ನಿಮ್ಮ ಪರವಾಗಿರುತ್ತದೆ ಮತ್ತು ಹಣಕಾಸಿನ ವಿಚಾರದಲ್ಲಿ ನೀವು ಉತ್ತಮವಾಗಿರುವುದನ್ನು ಕಂಡುಕೊಳ್ಳಲಿದ್ದೀರಿ .ಮಕ್ಕಳು ಹೆಚ್ಚು ಶ್ರಮವಹಿಸಬೇಕು ನೀವು ಸದಾ ಅವರ ಕಾಳಜಿ ವಹಿಸಬೇಕು. ಹಾಗೆಯೆ ಅವರನ್ನು ನೀವು ಪ್ರೋತ್ಸಾಹಿಸಬೇಕು. ವಿದೇಶ ಪ್ರವಾಸದ ಅವಕಾಶಗಳು ಬರುವ ಸಾಧ್ಯತೆ ಇದೆ .ಜನವರಿ, ಫೆಬ್ರವರಿ ಅವಧಿಯಲ್ಲಿ ಗರ್ಭಿಣಿಯರು ಹೆಚ್ಚಿನ ಕಾಳಜಿ ವಹಿಸಬೇಕು.  ಅಕ್ಟೋಬರ್ ಮಧ್ಯದಲ್ಲಿ ಕೌಟುಂಬಿಕ ಹಾಗೂ ವೃತ್ತಿಪರ ಜೀವನವೂ ಧನಾತ್ಮಕ ಬದಲಾವಣೆಗಳನ್ನು ಕಾಣುತ್ತದೆ. ಸಾರ್ವಜನಿಕವಾಗಿಯೂ ನಿಮ್ಮ ಗೌರವ ಹೆಚ್ಚುತ್ತದೆ.

ಕನ್ಯಾರಾಶಿ (Kanya)

 

ಈ ವರ್ಷವೂ ಅತ್ಯಂತ ಅಧಿಕ  ಸಾಧನೆ ಮಾಡುವ ವರ್ಷವಾಗಿದೆ.ಹಲವು ಉತ್ತಮ ಅವಕಾಶಗಳು ನಿಮಗೆ ಉತ್ತಮ ಹಣಕಾಸು ಮತ್ತು ಫಲಿತಾಂಶವನ್ನು ನೀಡುತ್ತವೆ. ನಿಮ್ಮ ಸಾಮಾಜಿಕ ವಲಯವೂ ಸಕ್ರಿಯವಾಗಿರುತ್ತದೆ. ಮತ್ತು ನಿಮ್ಮ ಸಾಮಾಜಿಕ ಸ್ಥಿತಿಗತಿಯೂ ಸುಧಾರಿಸುತ್ತದೆ. ಸ್ನೇಹಿತರು ಮತ್ತು ಪ್ರೀತಿ ಪಾತ್ರರ ಜೊತೆ ಉತ್ತಮ ಸಮಯ ಕಳೆಯುತ್ತೀರಿ. ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸುವುದಲ್ಲಿ ಕೊರತೆ ಎದುರಿಸಬಹುದು. ಹೀಗಾಗಿ ಕಠಿಣ ಪರಿಶ್ರಮ ಅವರ ಯಶಸ್ಸಿಗೆ ಮುಖ್ಯವಾಗಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ಸ್ವಲ್ಪಮಟ್ಟಿನ ಕಿರಿಕಿರಿಯನ್ನು ಅವರು ಅನುಭವಿಸಬಹುದು. ಆದ್ದರಿಂದ ಮಕ್ಕಳು ಕಾಳಜಿ ವಹಿಸಬೇಕು. ನೀವು ಉತ್ತಮ ವೃತ್ತಿಪರ ಜೀವನವನ್ನು ಅನುಭವಿಸುತ್ತೀರಿ.

ನಿಮ್ಮ ಪ್ರಯತ್ನಗಳು ಯಶಸ್ಸು ಸಾಧಿಸುತ್ತವೆ.ಯಾವುದೇ ದೀರ್ಘಾವಧಿ ನಿರೀಕ್ಷೆಗಳು ಪೂರ್ಣಗೊಳ್ಳುತ್ತವೆ. ವರ್ಷಪೂರ್ತಿ ಆದಾಯದ ಒಳ ಹರಿವು ಉತ್ತಮವಾಗಿರುತ್ತದೆ. ಜನವರಿಯಲ್ಲಿ ಕೆಲವು ಅನಿರೀಕ್ಷಿತ ಗಳಿಕೆ ಆಗಮಿಸುವ ಸಾಧ್ಯತೆ ಇದೆ. ಅಕ್ಟೋಬರ್ ನಂತರ ಇದು ಇನ್ನೂ ಹೆಚ್ಚಾಗುತ್ತದೆ. ನಿಮ್ಮ ಬಾಳ ಸಂಗಾತಿಯಿಂದ ನೀವು ಗಳಿಕೆ ಮಾಡಬಹುದು ಆದರೆ ಅವರು ಅಕ್ಟೋಬರ್ ತಿಂಗಳಿನವರೆಗೆ ಕಡಿಮೆ ಉತ್ಸಾಹವನ್ನು ಹೊಂದಿರುತ್ತಾರೆ ಅಥವಾ ಯಾವುದಾದರೂ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು. ಆದರೂ ಅವರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕೆಲವು ಕಚೇರಿಯ ಕಾರಣಗಳಿಂದ ಅಥವಾ ಕೆಲಸದ ಕಾರಣಗಳಿಂದ ನೀವು ಕುಟುಂಬದಿಂದ ದೂರ ಹೋಗಬೇಕಾಗಬಹುದು. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯಬಹುದು. ಹೊಸ ಸೇರ್ಪಡೆಯ ಸಾಧ್ಯತೆಯೂ ಇರಬಹುದು. ಒಟ್ಟಾರೆಯಾಗಿ ಈ ವರ್ಷವು ನಿಮಗೆ ಎಲ್ಲ ದೃಷ್ಟಿಯಿಂದಲೂ ಅನುಕೂಲಕರವಾಗಲಿದೆ. ಕೌಟುಂಬಿಕ ಜೀವನದಲ್ಲಿ ಶಾಂತಿಯನ್ನು ಕಾಪಾಡಿಕೊಂಡು ವಾಗ್ವಾದಗಳನ್ನು ದೂರವಿರಬೇಕು .

ತುಲಾ (Tula)

 

ಈ ವರ್ಷದ ಆರಂಭವು ಉತ್ಸಾಹದಿಂದ ಕೂಡಿರುತ್ತದೆ. ಆದರೆ ಅತಿರೇಕವೂ ಸಹ ಇರುತ್ತದೆ ಕೌಟುಂಬಿಕವಾಗಿ ಹಾಗೂ ವೈವಾಹಿಕ ಸಂಗತಿಗಳಲ್ಲಿ ಇದನ್ನು ನಿಯಂತ್ರಿಸಬೇಕಾಗಿದೆ. ಜನವರಿಯಿಂದ ಮಾರ್ಚ್ ನವರೆಗೆ ನಿಮ್ಮ ಆರೋಗ್ಯ ಕ್ಷೀಣಿಸಬಹುದು. ಮಾತನ್ನು ಹೊರ ಹಾಕುವ ಮೊದಲು ಯೋಚಿಸಿ ನಿಮ್ಮ ಮಾತು  ಇತರರ ಭಾವನೆಗಳನ್ನು ಘಾಸಿಗೊಳಿಸಬಹುದು. ಕೆಲಸದ ಸ್ಥಳವು ಉತ್ತಮವಾಗಿರುತ್ತದೆ. ಇಲ್ಲಿ ನಿಮ್ಮ ಕಲ್ಪನೆಗಳು ಆಕಾರ ಪಡೆಯುತ್ತವೆ ಕೆಲವು  ಸಂಗತಿಗಳು ನಿಮ್ಮ ಪರವಾಗಿರುತ್ತದೆ. ಆಲಸ್ಯವನ್ನು ನಿವಾರಿಸಿಕೊಳ್ಳಬೇಕು. ಸಹೋದ್ಯೋಗಿಗಳು ನಿರ್ಲಿಪ್ತವಾಗಲಿದ್ದಾರೆ. ಹೀಗಾಗಿ ನಿಮ್ಮ ಸಾಮರ್ಥ್ಯದ ಮೇಲೆಯೇ ನೀವು ಅವಲಂಬಿತರಾಗಿರಬೇಕು. ಜನವರಿಯಿಂದ ಮಾರ್ಚ್ ವರೆಗೆ ನಿಮ್ಮ ಗಳಿಕೆಯಲ್ಲಿ ಏರಿಕೆಯ ಸಾಧ್ಯತೆಯೂ ಇದೆ. ಅದರ ನಂತರ ನಿಮ್ಮ ಪ್ರಯತ್ನಗಳು ಹೊಸ ಸಾಧ್ಯತೆಗಳನ್ನು ಕಾಣಬಹುದು.

ಕೌಟುಂಬಿಕ ಜೀವನದಿಂದ ನೀವು ಹೊರಗೆ ಆಟ್ಟಿದಂತೆ ಭಾಸವಾಗುವುದರಿಂದ ಬದ್ಧತೆ ಮತ್ತು ಖುಷಿ ಕಡಿಮೆಯಾಗಬಹುದು. ನಿಮ್ಮ ಕೌಟುಂಬಿಕ ಜೀವನಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡಲು ಸಾಧ್ಯವಾಗದೇ ಇರಬಹುದು. ಈ ಬಗ್ಗೆ ನೀವು ಗಮನ ಹರಿಸಬೇಕು.  ದೂರದ ಪ್ರಯಾಣಗಳು ಮತ್ತು ಕೆಲವು ದೀರ್ಘಾವಧಿ ಅಥವಾ ವಿದೇಶ ಪ್ರಯಾಣವನ್ನು ನೀವು ಕಾಣಬಹುದಾಗಿದೆ. ಮಕ್ಕಳು ಕಠಿಣ ಪರಿಶ್ರಮ ವಹಿಸುತ್ತಾರೆ ಮತ್ತು ಅವರ ಕಠಿಣ ಪರಿಶ್ರಮದ ಫಲ ಅನುಭವಿಸುತ್ತಾರೆ. ಮಾರ್ಚ್ ತಿಂಗಳಿನ ನಂತರ ವೈವಾಹಿಕ ಜೀವನದಲ್ಲಿ ಪ್ರಗತಿ ಕಾಣುವುದು. ಒಟ್ಟಾರೆಯಾಗಿ ನಿಮಗೆ ಪ್ರಗತಿಯ ವರ್ಷ ಇದಾಗಿರುತ್ತದೆ. ಆದಾಯವನ್ನು ಹೆಚ್ಚಿಸುವಲ್ಲಿ ನೀವು ಗಮನ ಹರಿಸಬೇಕು.

ವೃಶ್ಚಿಕ (Vrushchika)

 

ಈ ವರ್ಷವೂ ಕೆಲವು ಸವಾಲುಗಳನ್ನು ಹೊತ್ತು ತರಲಿದೆ. ಅವುಗಳನ್ನು ಎದುರಿಸಲು ನೀವು ಸಿದ್ಧವಿದ್ದರೆ ಸಾಧನೆ ನಿಮ್ಮ ಕಡೆಗಿರುತ್ತದೆ. ಜನವರಿಯಿಂದ ಮಾರ್ಚ್ ತಿಂಗಳಿನವರೆಗೆ ನಿಮ್ಮ ಆರೋಗ್ಯ ಕ್ಷೀಣಿಸಬಹುದು. ಅದರ ನಂತರದಲ್ಲಿ ನೀವು ಇಂತಹ ಸಮಸ್ಯೆಗಳಿಂದ ಹೊರ ಬರುತ್ತೀರಿ ಮತ್ತು ಸಾಮರ್ಥ್ಯ ಗಳಿಸುತ್ತೀರಿ. ನಿಮ್ಮ ವಿರೋಧಿಗಳ ಮೇಲೆ ನೀವು ಯಶಸ್ಸು ಸಾಧಿಸುತ್ತೀರಿ. ಹಣಕಾಸಿನ ವಿಚಾರದಲ್ಲಿ ಅದರಲ್ಲೂ ವಿಶೇಷವಾಗಿ ಅಕ್ಟೋಬರ್ ತಿಂಗಳಲ್ಲಿ  ಹಣಕಾಸಿನ ಮೇಲೆ ಪರಿಣಾಮ ಬೀರುವ  ಮತ್ತು ಹೆಚ್ಚುವರಿ ವೆಚ್ಚವನ್ನು ಹೊಂದಿರುತ್ತೀರಿ.

ಅಕ್ಟೋಬರ್ ನಂತರ ಉತ್ತಮ ಫಲಿತಾಂಶವನ್ನು ಹೆಚ್ಚಾಗಿ ಕಾಣುತ್ತೀರಿ. ಹೂಡಿಕೆ ಮಾಡುವ ಮೊದಲು ನೀವು ಪರಿಶೀಲನೆ ಮಾಡಬೇಕಾಗುತ್ತದೆ. ಉತ್ತಮ ಆದಾಯವನ್ನು ಗಳಿಸಲು ನೀವು ಹೆಚ್ಚು ಪರಿಶ್ರಮ ಮಾಡಬೇಕಾಗಿರುವ ವರ್ಷ ಇದಾಗಿದೆ.  ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದವರಿಗೆ ಈ ವರ್ಷ ಸೂಕ್ತವಾಗಿದೆ. ಮಕ್ಕಳು ಜೀವನವನ್ನು ತಮ್ಮ ತುಂಟತನದಿಂದ ಕಳೆಯುತ್ತಾರೆ. ವರ್ಷದ ಬಹುತೇಕ ಸಮಯದಲ್ಲಿ ಕೌಟುಂಬಿಕ ಜೀವನದಲ್ಲಿ ಸೌಹಾರ್ದತೆ ಇರುವುದು. ವೈವಾಹಿಕ ಜೀವನವೂ ಉತ್ತಮ ಫಲಿತಾಂಶ ಕಾಣುವುದು. ಬಾಳ ಸಂಗಾತಿಯು ನಿಮಗೆ ಪ್ರೋತ್ಸಾಹವಾಗಿರುತ್ತಾರೆ. ಕೆಲಸದ ಸ್ಥಳವು ಸವಾಲಿನದ್ದಾಗಿರುತ್ತದೆ ಮತ್ತು ಪ್ರಗತಿಯದ್ದಾಗಿರುತ್ತದೆ ಒಟ್ಟಾರೆಯಾಗಿ ಮಿಶ್ರಿತ ಫಲಿತಾಂಶಗಳು ಕಂಡುಬರುತ್ತವೆ .

 

ಧನು ರಾಶಿ (Dhanu)

 

ಜೀವನದಲ್ಲಿ ಮುಂದೆ ಸಾಗಲು ನಿಮಗೆ ಹಲವು ಅವಕಾಶಗಳನ್ನು ಈ ವರ್ಷ ಒದಗಿಸುತ್ತಿದೆ. ಈ ವರ್ಷ ಪರಿಪೂರ್ಣವಾಗಲು ನಿಮ್ಮ ಬದ್ಧತೆ ಸಾಕಷ್ಟಿರಬೇಕು. ಆದಾಯದ ಒಳಹರಿವು ಮಾರ್ಚ್ ತಿಂಗಳಿನವರೆಗೆ ಹೆಚ್ಚುತ್ತದೆ ನಂತರ ಮೇ ತಿಂಗಳಿನವರೆಗೆ ನಿಮ್ಮ ವೆಚ್ಚ ಹೆಚ್ಚಾಗುತ್ತದೆ. ಆದರೆ ನಂತರದಲ್ಲಿ ವರ್ಷಪೂರ್ತಿ ನೀವು ಉತ್ತಮ ದಿಕ್ಕಿನಲ್ಲಿ ಸಾಗುವಿರಿ. ಹೀಗಾಗಿ ಹಣಕಾಸು ನಿಮ್ಮ ಚಿಂತೆಗೆ ಕಾರಣವಾಗುವುದಿಲ್ಲ. ನಿಮ್ಮ ಗಳಿಕೆಯ ದಾರಿಗಳನ್ನು ಹೆಚ್ಚಿಸುವುದರತ್ತ ಗಮನ ಹರಿಸಬೇಕು. ಒಂದಕ್ಕಿಂತ ಹೆಚ್ಚು ಮೂಲಗಳಿಂದ ನೀವು ಹಣವನ್ನು ಗಳಿಸಬಹುದಾಗಿದೆ. ಶನಿಯು ಕಠಿಣ ಪರಿಶ್ರಮಕ್ಕೆ ನಿಮ್ಮನ್ನು ತಯಾರು ಮಾಡುತ್ತಾನೆ. ಆದರೆ ಅತಿಯಾಗಿ ಕೆಲಸ ಮಾಡಿದಲ್ಲಿ ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮಾರ್ಚ್ ತಿಂಗಳಿನಿಂದ  ಮೇ ತಿಂಗಳಿನವರೆಗೆ ಸ್ವಲ್ಪ ಮಂಕಾದಂತೆ ಇರುತ್ತದೆ. ಅಕ್ಟೋಬರ್ ತಿಂಗಳಿನ ನಂತರ ಕೆಲವು ಆರೋಗ್ಯ ಸಮಸ್ಯೆ ಕಂಡು ಬರುವುದು. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಮಕ್ಕಳು ಶ್ರಮ ಜೀವಿಯಾಗಿರುತ್ತಾರೆ, ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡುತ್ತಾರೆ. ಆಗಾಗ್ಗೆ ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ ಕೌಟುಂಬಿಕ ಜೀವನ ಸೌಹಾರ್ದಯುತವಾಗಿ ಹಾಗೂ ಉತ್ತಮವಾಗಿರುತ್ತದೆ .ಆದರೂ ಕೌಟುಂಬಿಕ ಜೀವನದಿಂದ ನೀವು ದೂರ ಇರುವಂತೆ ಭಾಸವಾಗುತ್ತದೆ. ಅಪ್ಪಿತಪ್ಪಿಯೂ ಕೆಟ್ಟ ಮಾತುಗಳನ್ನು, ಶಬ್ದಗಳನ್ನು ಹೊರ ಹಾಕಬೇಡಿ. ವೈವಾಹಿಕ ಜೀವನವು ಉತ್ತಮ ಫಲಿತಾಂಶ ನೀಡುತ್ತದೆ. ಆದರೆ ಬಾಳ ಸಂಗಾತಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಪ್ರೇಮ ಜೀವನವು ಸಶಕ್ತವಾಗುತ್ತದೆ. ಶತ್ರುಗಳ ವಿರುದ್ಧ ನಿಮಗೆ ಮೇಲುಗೈ ಆಗುತ್ತದೆ. ಒಟ್ಟಾರೆಯಾಗಿ ನಿಮಗೆ ಉತ್ತಮ ವರ್ಷ ಇದಾಗಿರುತ್ತದೆ. ಆರೋಗ್ಯದ ಕಡೆಗೆ ಗಮನವಿರಲಿ.

 

ಮಕರ (Makara)

 

ಒಂದೆಡೆ ನಿಮ್ಮ ವೆಚ್ಚ ಹೆಚ್ಚಾಗುತ್ತದೆ ಮತ್ತು ನಿಮ್ಮ ಹಣಕಾಸು ಕುಸಿದಿದೆ ಎಂಬ ಭಾವನೆಯನ್ನು ಸಹ ನೀವು ಅನುಭವಿಸುತ್ತೀರಿ. ಇನ್ನೊಂದೆಡೆ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಆದರೆ ನೀವು ಕೆಲವು ಬಾಹ್ಯ ಸಂಪರ್ಕವನ್ನು ಹೊಂದುತ್ತೀರಿ ಮತ್ತು ಅವುಗಳ ಮೂಲಕ ನಿಮ್ಮ ಆದಾಯ ಸಹ ಹೆಚ್ಚುವುದು. ಆಧ್ಯಾತ್ಮಿಕ ಅಂಶಗಳಲ್ಲಿ ಬೆಳವಣಿಗೆ ಕಂಡುಕೊಳ್ಳುತ್ತೀರಿ. ಕೆಲವು ಕಾಲ ನೀವು ವೈವಾಹಿಕ ಜಗತ್ತಿನಿಂದ ಸಂಪರ್ಕ ಕಡಿದುಕೊಂಡಂತೆ ಭಾಸವಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರ ಪಡೆಯುತ್ತೀರಿ. ಆದರೆ ದೂರವಿರಿ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಗೌರವವು ಕೆಲಸದ ಸ್ಥಳದಲ್ಲಿ ಹೆಚ್ಚುವುದು. ನೀವು ಹೊಸ ಉದ್ದಿಮೆಗಳನ್ನು ಪಡೆಯಬಹುದು. ವಿದ್ಯಾರ್ಥಿಗಳು ಶಿಕ್ಷಣದತ್ತ ಹಾಗೂ ಹೊಸ ಸಂಗತಿಗಳನ್ನು ಕಲಿಯುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ.

ಮಾರ್ಚ್ ಮತ್ತು ಮೇ ತಿಂಗಳಿನಲ್ಲಿ ಅವರು ತಮ್ಮ ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ನಿರ್ವಹಿಸುತ್ತಾರೆ. ಕೌಟುಂಬಿಕವಾಗಿ ಜೀವನ ಉತ್ತಮವಾಗಿರುತ್ತದೆ ಮತ್ತು ಒತ್ತಾಗಿ ಇರುವುದರಿಂದ ಇದು  ಹೆಚ್ಚು ಸಾಮರ್ಥ್ಯವನ್ನು ನೀಡುತ್ತದೆ. ವೈವಾಹಿಕ ಜೀವನದಲ್ಲಿ ತಪ್ಪು ಗ್ರಹಿಕೆಗಳು ಕಂಡು ಬರಬಹುದು. ಇದನ್ನು ನೀವು ನಿವಾರಿಸಿಕೊಳ್ಳಬೇಕು. ಅಕ್ಟೋಬರ್ ನಂತರ ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ.ನೀವು ವೈಯಕ್ತಿಕ ಜೀವನವನ್ನು ಖುಷಿಯಿಂದ  ಕಳೆಯುತ್ತೀರಿ. ಜೀವನದಲ್ಲಿ ಮುಂದೆ ಸಾಗಲು ಮತ್ತು ನಿಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಲು ಉತ್ತಮ ವರ್ಷವಾಗಿದೆ.

 

ಕುಂಭರಾಶಿ (Kumbha)

 

ಈ ವರ್ಷದ ಅವಧಿಯಲ್ಲಿ ನಿಮ್ಮ ನಿರ್ಧಾರಗಳು ಅಡಿಪಾಯ ಹಾಕುತ್ತವೆ. ನಿಮ್ಮ ಮೂಲ ಗಮನವು ಶ್ರೀಮಂತಿಕೆಯನ್ನು ಹೆಚ್ಚಿಸುವುದಾಗಿರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದಿಂದ ನೀವು ಈ ವರ್ಷವನ್ನು ಗಳಿಕೆಯ ವರ್ಷವನ್ನಾಗಿಸಿದ್ದೀರಿ ಮತ್ತು ಹಣಕಾಸಿನ ಸ್ಥಿತಿಯೂ ಸಹ ಸುಧಾರಿಸುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆ ಇದೆ. ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.ನಿಮ್ಮ ಆರೋಗ್ಯದ ಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಯಾವುದೇ ಈ ಹಿಂದಿನ ಅನಾರೋಗ್ಯದಿಂದ ದೂರವಿರುತ್ತೀರಿ. ಹಿರಿಯರು  ನಿಮ್ಮನ್ನು ಮೆಚ್ಚುತ್ತಾರೆ. ನೀವು ಪುಣ್ಯದ ಕೆಲಸಗಳಲ್ಲಿ ತೊಡಗುತ್ತೀರಿ.

ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಬಾಂಧವ್ಯದ ಭಾವ ಮೂಡುತ್ತದೆ. ಆದರೂ ಮೊದಲ ಎರಡು ತಿಂಗಳು ಸ್ವಲ್ಪ ಸವಾಲಿನದ್ದಾಗಿರುತ್ತದೆ. ನಿಮ್ಮ ಬಾಳ ಸಂಗಾತಿಯಲ್ಲಿ ಕೆಲವು ಅನಾರೋಗ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿರುವವರು  ಹೆಚ್ಚು ಗಮನವನ್ನು ಕೇಂದ್ರೀಕರಿಸಬೇಕಾಗಿದೆ ಮತ್ತು ಪರಸ್ಪರರು ಉತ್ತಮವಾಗಿ ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಬೇಕು ಮತ್ತು ಮಕ್ಕಳು ಸ್ವಲ್ಪ ಕಿರಿಕಿರಿಯನ್ನು ಅನುಭವಿಸುತ್ತಾರೆ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿ ಅವರನ್ನು ಉತ್ತಮಗೊಳಿಸುತ್ತದೆ . ಒಟ್ಟಾರೆಯಾಗಿ ನಿಮಗೆ ಧನಾತ್ಮಕ ಹಾಗೂ ಪ್ರಗತಿಯ ವರ್ಷ ಇದಾಗಿದೆ.

 

ಮೀನರಾಶಿ (Meena)

 

ಮೀನ ರಾಶಿಯವರಿಗೆ ವರ್ಷಪೂರ್ತಿ ತಮ್ಮ ಆರೋಗ್ಯದ  ಬಗ್ಗೆ ಕಾಳಜಿಯನ್ನು ಸೂಕ್ಷ್ಮ ವ್ಯಕ್ತಿಗಳು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಅಕ್ಟೋಬರ್ ವರೆಗೆ ಹೆಚ್ಚು ಕಾಳಜಿ ವಹಿಸಲೇಬೇಕು. ಅದರ ನಂತರ ಜೀವನವನ್ನು ಉತ್ತಮವಾಗಿ ಕಳೆಯುತ್ತೀರಿ. ಅತಿಯಾದ ಒತ್ತಡ ಮತ್ತು ಅತಿಯಾದ ಕೆಲಸ ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಪ್ರಯತ್ನ ಹಾಕಬೇಕು. ಇದರಲ್ಲಿ ನಂಬಿಕೆ ಇಡಬೇಕು. ಹಿರಿಯರ ಬೇಡಿಕೆ ಸಹ ಇರುತ್ತದೆ. ಹೀಗಾಗಿ ಒಂದೇ ಬಾರಿಗೆ ನೀವು ಈ ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಜನವರಿ ತಿಂಗಳಿನಲ್ಲಿ ಸ್ವಲ್ಪ ಸವಾಲಿನ ವಿಷಯವಾಗಿದೆ . ಹೀಗಾಗಿ ಯಾವುದೇ ದೊಡ್ಡ ಮಟ್ಟದ ಹಣದ ವಹಿವಾಟನ್ನು ಫೆಬ್ರವರಿ ತಿಂಗಳಿಗೆ ಮುಂದೂಡಿ. ಅದರ ನಂತರ ನಿಮ್ಮ ಆದಾಯವು ಉತ್ತಮ ಹರಿವನ್ನು ಕಾಣುತ್ತದೆ. ನಿಮ್ಮ  ಈಡೇರದ ಪ್ರಯಾಣ ಈ ಅವಧಿಯಲ್ಲಿ ಮೆರೆಯಬಹುದಾಗಿದೆ.

ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಬಾಳ ಸಂಗಾತಿಯೂ ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತದೆ. ವೃತ್ತಿಪರ ಅಂಶಗಳಿಂದ ನಿಮ್ಮ ಪ್ರಸ್ತುತ ನಿವಾಸವನ್ನು ನೀವು ಬದಲಿಸಬಹುದು. ಮಕ್ಕಳು ತುಂಟತನ ಮಾಡುತ್ತಾರೆ . ಅವರನ್ನು ನೀವು ಉತ್ತಮ ದಿಕ್ಕಿಗೆ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಡ್ಡ ದಾರಿಯನ್ನು ಕಂಡುಕೊಳ್ಳುತ್ತಾರೆ. ಮಾನಸಿಕವಾಗಿ ಅಸ್ಥಿರವಾಗುತ್ತಾರೆ.ಅಕ್ಟೋಬರ್  ತಿಂಗಳಿನ ನಂತರ ನೀವು ಜೀವನದಲ್ಲಿ ಹೆಚ್ಚಿನ ಧನಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳುತ್ತೀರಿ. ಒಟ್ಟಾರೆಯಾಗಿ ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕಡೆಗೆ ನೀವು ಮೊದಲ ಆದ್ಯತೆ ನೀಡಬೇಕು. ಜೀವನದ ವಿವಿಧ ಹಂತದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top