fbpx
ಆರೋಗ್ಯ

ಕಾಮಾಲೆ ರೋಗ ಬಂದು ಬಳಲಿದ್ರೆ ಅಥವಾ ಸೂಚನೆ ಇದ್ರೆ 5 ಆಹಾರ ಮಿಸ್ ಮಾಡ್ದೆ ತಿಂದು ಪರಿಹಾರ ಮಾಡ್ಕೊಂಡು ಹಾಯಾಗಿರಿ

ರಕ್ತದಲ್ಲಿ ಬಿಲಿರುಬಿನ್ ಎಂಬ ಅಂಶ ಹೆಚ್ಚಾಗಿ ಬಿಡುಗಡೆ ಯಾಗುವುದರಿಂದ ಯಕೃತ್ತು(ಲಿವರ್ )ಸಮಸ್ಯೆಯಾಗಿ ಚರ್ಮ ಮತ್ತು ಮೂತ್ರ ಹಳದಿ ಬಣ್ಣಕ್ಕೆ ತಿರುಗಿಕೊಳ್ಳುತ್ತದೆ.
ಈ ಕಾಮಾಲೆರೋಗ ಅಂತ ದೊಡ್ಡ ಕಾಯಿಲೆಯಲ್ಲ ಆದರೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅಪಾಯ ಖಂಡಿತ.

 

ಕಾಮಾಲೆರೋಗ ದಿಂದ ಹೊರಬರಲು ನಾವು ಮನೆಮದ್ದನ್ನು ಹೇಳ್ತಿರಿ ಉಪಯೋಗಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

 

೧.ನಿಂಬೆ ಹಣ್ಣು :

 

 

ನಿಂಬೆ ಹಣ್ಣಿನಲ್ಲಿ ಇರುವ ಗುಣ ಲಿವರ್ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.ನಿಂಬೆ ಹಣ್ಣು ಮೂತ್ರ ವಿಸರ್ಜನೆಯನ್ನು ಹೆಚ್ಚಿಸಿ ಬಿಲಿರುಬಿನ್ ಮತ್ತು ಇತರ ದೇಹಕ್ಕೆ ಬೇಡವಾದ ವಸ್ತುಗಳನ್ನು ಹೊರಹಾಕುತ್ತದೆ.
ಅರ್ಧ ನಿಂಬೆ ಹಣ್ಣಿಗೆ ಒಂದು ಲೋಟ ನೀರು ಬೆರೆಸಿ ದಿನಕ್ಕೆ 3 ರಿಂದ 4 ಸಲ ಕುಡಿಯಬೇಕು .ಇಲ್ಲವಾದರೆ 1 1 /2 ಲೋಟ ನೀರಿಗೆ 1 1 /2 ನಿಂಬೆ ಹಣ್ಣು ಸ್ವಲ್ಪ ಉಪ್ಪು ಸೇರಿಸಿ ದಿನಕ್ಕೆ 3 ಬಾರಿ ಕುಡಿಯಬೇಕು.

೨.ಕಬ್ಬು:

 

 

ಕಾಮಾಲೆಗೆ ಇನ್ನೊಂದು ರಾಮಬಾಣ ಕಬ್ಬು,ಕಾಮಾಲೆ ರೋಗ ಬಂದಾಗ ಗ್ಲುಕೋಸ್ ನಮ್ಮ ದೇಹದಲ್ಲಿ ಧಿಡೀರ್ ಕಡಿಮೆಯಾಗುತ್ತದೆ.ಆ ಸಮಯದಲ್ಲಿ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಲು ಕಬ್ಬು ತುಂಬಾ ಸಹಾಯಕಾರಿ.

1 ಲೋಟ ಕಬ್ಬಿನ ರಸಕ್ಕೆ ಅರ್ಧ ಚಮಚ ನಿಂಬೆರಸ ಹಾಕಿಕೊಂಡು ದಿನಕ್ಕೆ 2 ರಿಂದ 3 ಬಾರಿ ಕುಡಿಯಬೇಕು ಅಥವಾ 1 ಲೋಟ ಕಬ್ಬಿನ ರಸಕ್ಕೆ 1 ಚಮಚ ತುಳಸಿ ಎಲೆಗಳ ಪೇಸ್ಟ್ ಹಾಕಿ ಮಿಶ್ರಣ ಮಾಡಿಕೊಂಡು ದಿನ 2 ರಿಂದ 3 ಬಾರಿ ಕುಡಿಯಬೇಕು.

೩.ಟೊಮೊಟೊ :

 

ಟೊಮೊಟೊ ಅಲ್ಲಿ ಲಿಕೋಪೆನೆ ಎಂಬ ಅಂಶವಿರುವುದರಿಂದ ಅದು ಕಾಮಾಲೆ ರೋಗದಿಂದ ಬೇಗ ಹೊರ ಬರಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಇರುವ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ .

5 ಟೊಮೊಟೊಗಳನ್ನು 2 ಲೋಟ ನೀರಿನಲ್ಲಿ ಚೆನ್ನಾಗಿ 10 ರಿಂದ 15 ನಿಮಿಷ ಬೇಯಿಸಿಕೊಂಡು ಅದನ್ನು ರಸದ ಹಾಗೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿಕೊಂಡು ದಿನ ಬೆಳಗ್ಗೆ ಒಂದು ಸಲ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು .

೪.ಕ್ಯಾರಟ್:

 

ಕಾಮಾಲೆಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದು ಕ್ಯಾರಟ್.ಕ್ಯಾರಟ್ನಲ್ಲಿ ಬೀಟಾ ಕೆರೋಟಿನ್ ಅಧಿಕವಾಗಿದೆ .ದಿನಕ್ಕೆ ಒಂದು ಸಲ ಕ್ಯಾರಟ್ ರಸ ಕುಡಿಯುವುದರಿಂದ ಲೀವರ್ ನ ಯಾವುದೇ ಸಮಸ್ಯೆ ಮಾಯವಾಗುತ್ತದೆ.

೫.ಅರಿಶಿನ:

 

 

ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶ ಅಧಿಕವಾಗಿದೆ ಅದು ಲೀವರ್ ಸಮಸ್ಯೆಯನ್ನು ವಾಸಿಮಾಡುತ್ತದೆ ಮತ್ತು ದೇಹವನ್ನು ಶುಚಿಯಾಗಿ ಇಡುತ್ತದೆ.
ಅರ್ಧ ಚಮಚ ಅರಿಶಿನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರಿಸಿ ಕುಡಿಯಬೇಕು ಅಥವಾ ಅರ್ಧ ಚಮಚ ಅರಿಶಿನ ಒಂದು ಲೋಟ ಬೆಚ್ಚಗಿನ ನೀರು ಅದಕ್ಕೆ ಸ್ವಲ್ಪ ಮೆಣಸಿನ ಪುಡಿ ಮತ್ತು ಜೇನಿನ ತುಪ್ಪ ಹಾಕಿ ದಿನ ಒಂದು ಸಲ ಕುಡಿಯಬೇಕು.

ಈ ಮೇಲಿನ ಮನೆಮದ್ದನ್ನು ಉಪಯೋಗಿಸಿಕೊಂಡು ಕಾಮಾಲೆರೋಗದಿಂದ ಮುಕ್ತಿ ಹೊಂದಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top