fbpx
ಮನೋರಂಜನೆ

ಪ್ರಕಾಶ್ ರೈ ವಿರುದ್ಧ ಧ್ವನಿಯೆತ್ತಿದ್ದ ಒಳ್ಳೆ ಹುಡುಗ ಪ್ರಥಮ್

ಸದಾ ಒಂದಲ್ಲ ಒಂದು ಗಿಮಿಕ್ ಮೂಲಕ ಮುಖ್ಯವಾಹಿನಿಯಲ್ಲಿ ಸುದ್ದಿಯಲ್ಲಿರುವ ಒಳ್ಳೆ ಹುಡುಗ ಪ್ರಥಮ್ ಅದೇ ಮಾಜಿ ಬಿಗ್‍ಬಾಸ್ ವಿನ್ನರ್ ಪ್ರಥಮ್ ನಟ ನಿರ್ದೇಶಕ ನಿರ್ಮಾಪಕ ಪ್ರಕಾಶ್ ರೈ ರವರಿಗೆ ಬಹಿರಂಗ ಸವಾಲೊಂದನ್ನು ಎಸೆದಿದ್ದಾರೆ .

 

 

ಅಸಲಿಗೆ ಪ್ರಥಮ್ ಆ ಹೇಳಿಕೆ ನೀಡಲು ಪ್ರಚೋಧನೆ ನೀಡಿದ ಘಟನೆ ನಡೆದಿದೆ ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಕೋಮು ಗಲಭೆಯಲ್ಲಿ ಕಾಣೆಯಾಗಿದ್ದ ಪರೇಶ್ ಮೇಸ್ತ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಕೊಂಡಿರುವ ಪ್ರಥಮ್, ನಟ ಪ್ರಕಾಶ್ ರೈ ಅವರಿಗೆ ಸವಾಲು ಎಸೆದಿದ್ದಾರೆ.

 

ಅಸಲಿಗೆ ಪ್ರಥಮ್ ಎಸೆದ ಸವಾಲಾದರೂ ಏನು ?

 

 

ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್ ರೈ ರವರಿಗೆ ಬಹಿರಂಗ ಪ್ರಶ್ನೆ….
ಏನ್ರೀ Prakash Raj so called ದೊಡ್ಡ ನಟ?!
ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ “ಈ ದೇಶದಲ್ಲಿ ಏನಾಗ್ತಿದೆ?ಅದು ಇದು ಅಂತ ಬಾಯಿಗೆ ಬಂದಂಗೆ ಎಲ್ಲಾ ಕೇಳಿ ಕೊನೆಯದಾಗಿ #just_asking ಅಂತಿದ್ರಿ….
ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ… ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ so called ದೊಡ್ಡ ನಟ (ಭಯಂಕರ)? ನರಕ ಅಂದ್ರೇನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು…

ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ?
ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವೇನ್ರಿ ಪ್ರಕಾಶ್ ರೈ ನಿಮಗೆ?
ನಾನು ಹಿಂದು-ಮುಸ್ಲಿಂ ಅಂತ ಮಾತಾಡ್ತಿಲ್ಲ…ಮಾನವೀಯತೆ,ಮನುಷ್ಯತ್ವದ ಬಗ್ಗೆ ಮಾತಾಡ್ತಾ ಇದೀನಿ.
ಇದು just asking ಅಲ್ಲ…#purposefully_asking

 

 

ಈ ಸವಾಲು ಎಸೆಯಲು ಕಾರಣವೇನು ?

 

 

ಖ್ಯಾತ ಪತ್ರಕರ್ತ ಲಂಕೇಶ್ ರವರ ಪರಮ ಶಿಷ್ಯ , ನಟ ನಿರ್ದೇಶಕ ಪ್ರಕಾಶ್ ರೈ ರವರು ಇತ್ತೀಚೆಗೆ ನಡೆದ ಪತ್ರಕರ್ತೆ ಗೌರಿ ಲಂಕೇಶ್ರ ಕೊಲೆಯನ್ನು ತೀವ್ರವಾಗಿ ಖಂಡಿಸಿದರು ,
ಕೊಲೆ ನಡೆದು ಇಷ್ಟು ದಿನವಾದರೂ ಕೊಲೆಗಾರರನ್ನು ಕಂಡು ಹಿಡಿದಿಲ್ಲ , ಮೋದಿ ಈ ವಿಚಾರವಾಗಿ ಕಣ್ಣುಮುಚ್ಚಿ ಕುಳಿತಿದ್ದಾರೆ .

ನನಗೆ ಈ ವರೆಗೆ 5 ರಾಷ್ಟ್ರ ಪ್ರಶಸ್ತಿಗಳು ದೊರೆತಿವೆ ಅವೆಲ್ಲವನ್ನು ಇಟ್ಟುಕೊಳ್ಳುವ ಆಸೆ ಇಲ್ಲ , ಮನಸು ಇಲ್ಲ .
ನನಗೆ ಈ ಪ್ರಶಸ್ತಿ ಬೇಡ , ಮತ್ತೆ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಬೇಡಿ , ನಾನೊಬ್ಬ ನಟ ನನಗೆ ನಟನೆ ಮಾಡುವವರು ಯಾರು ಎಂದು ಕಂಡು ಹಿಡಿಯಲು ಸಹ ಬರುತ್ತದೆ ,
ಗೌರಿ ಲಂಕೇಶ್ರ ಕೊಲೆಯನ್ನು ಯಾರು ಮಾಡಿದ್ದಾರೆ ? ಅವರನ್ನು ಇದುವರೆಗೂ ಏಕೆ ಬಂಧಿಸಿಲ್ಲ , ಸಾಮಾಜಿಕ ಜಾಲತಾಣಗಳಲ್ಲಿ ಹತ್ಯೆಯನ್ನು ಸಂಭ್ರಮಿಸಿದವರಲ್ಲಿ ಬಹುಪಾಲು ಮಂದಿ ಪ್ರಧಾನಿ ಮೋದಿಯವರನ್ನು ಅನುಸರಿಸುತ್ತಾರೆ , ಆದರೆ ನಾವು ಕಣ್ಣು ಮುಚ್ಚಿ ಕುಳಿತಿರುವ ಪ್ರಧಾನಿಯನ್ನು ನೋಡುತ್ತಿದ್ದೇವೆ ಎಂದು ವಿಷಾದ ವ್ಯಕಪಡಿಸಿದ್ದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top