fbpx
ದೇವರು

ಮದುವೆ ಆಗದೆ ನೊಂದಿದ್ದರೆ , ಡೈವೋರ್ಸ್ ಇನ್ನಿತರ ಸಾಂಸಾರಿಕ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ ನಿಮ್ಮ ಹಾಗು ನಿಮ್ಮ ಸಂಗಾತಿಯ ಬಾಂಧವ್ಯ ಗಟ್ಟಿಯಾಗುತ್ತೆ

ವಿವಾಹ ವಿಚ್ಛೇದನಗಳ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯ ಇಲ್ಲಿದೆ.

 

ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಅಗತ್ಯವಾದದ್ದು, ಆದರೆ ಕೆಲವು ವಿವಾಹಗಳು, ಸಣ್ಣಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಂಡು ಪವಿತ್ರವಾದ ಬಂಧನ ಎಂದು ಕರೆಯುವ ಮದುವೆಯ ಮೂರು ಗಂಟನ್ನು ಕೇವಲ ಒಂದು ಸಹಿಯ ಮೂಲಕ  ಮುರಿದುಹಾಕಿ ಕೈತೊಳೆದುಕೊಳ್ಳುವರು.  ಗಂಡು ಹೆಣ್ಣು ಎಂದಾಗ ಸಮಾನವಾದ ಮನಸ್ಥಿತಿಯಿಂದ ಜೀವನ ಸಾಗಿಸಿದರೆ ಮಾತ್ರ ಬಾಂಧವ್ಯ ವೃದ್ಧಿಯಾಗುತ್ತದೆ. ಇಲ್ಲವಾದರೆ ಸಂಬಂಧ ನಶಿಸುತ್ತದೆ. ಅದೇನೇ ಇರಲಿ ಜೀವನ ಎಂಬುದು ದೊಡ್ಡದು. ಆ ಜೀವನವೂ ನಿತ್ಯವೂ ಸುಖ, ಶಾಂತಿ, ನೆಮ್ಮದಿಯಿಂದ ಇರಬೇಕು. ಜೀವನದಲ್ಲಿ ಮನುಷ್ಯನಾದವನಿಗೆ ಮತ್ತೇನೂ ಅಗತ್ಯವಿಲ್ಲ.

 

 

ಇಲ್ಲಿ ಹೇಳಿರುವ ದೇವಾಲಯವು ಅತ್ಯಂತ ಮಹಿಮಾನ್ವಿತ ದೇವಾಲಯವಾಗಿದೆ. ಈ ದೇವಾಲಯದಲ್ಲಿ ದೇವತೆಗಳ ದರ್ಶನ ಭಾಗ್ಯ ಪಡೆದರೆ ಸಕಲ ಸಮಸ್ಯೆಗಳು ತೊಲಗಿ ವಿವಾಹದಲ್ಲಿ ಆಗುತ್ತಿರುವ ವಿಚ್ಛೇದನದಂತಹ ಸಮಸ್ಯೆಗಳು ದೂರವಾಗಿ ಗಂಡ ಹೆಂಡತಿ ಸುಖವಾಗಿ ಸಂಸಾರ ಮಾಡುತ್ತಾರೆ.ಹಾಗಾದರೆ ಆ ದೇವಾಲಯ ಯಾವುದು  ?  ಅದು ಎಲ್ಲಿದೆ ? ಆ ದೇವಾಲಯದ ಸ್ಥಳ ಪುರಾಣವೇನು ?  ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ…..

ಬಾಂಧವ್ಯ ವೃದ್ಧಿಗೆ ಸೂಕ್ತವಾದ ಹಾಗೂ ಶಕ್ತಿವಂತ ದೇವಾಲಯ ಎಂದರೆ ಅದು ತಿರುಮಾನನ್ ಚೇರಿ ದೇವಾಲಯವಾಗಿದೆ. ಈ ದೇವಾಲಯಕ್ಕೆ ಹಲವಾರು ಸ್ಥಳಗಳಿಂದ ಬಂದು ದೇವತೆಗಳ ಆಶೀರ್ವಾದವನ್ನು ಪಡೆಯಲು ಜನರು  ಬಯಸುತ್ತಾರೆ. ಈ ದೇವಾಲಯ ನಾಗಪಟ್ಟಣಂ ಎಂಬ ಜಿಲ್ಲೆಯಲ್ಲಿದ್ದು, ಕಾವೇರಿ ನದಿಯ ದಂಡೆಯ ಮೇಲೆ ಈ ದೇವಾಲಯವೂ ಸ್ಥಾಪಿತವಾಗಿದೆ. ಇಲ್ಲಿ  ಮಹಾಶಿವನು ನೆಲೆಸಿದ್ದಾನೆ, ಮಹಾಶಿವನ ಜೊತೆಗೆ ಪಾರ್ವತಿ ದೇವಿಯ ವಿವಾಹ ಕೂಡ  ಇಲ್ಲೇ ನಡೆದಿದೆ ಎಂದು ನಂಬಲಾಗಿದೆ. ಹಾಗಾಗಿಯೇ ಅವರೇ ಇಲ್ಲಿ ಉತ್ತಮವಾದ ಬಾಂಧವ್ಯ ವೃದ್ಧಿಗೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

 

 

ವಿವಾಹದ ಸಂಬಂಧದಿಂದ ಬೇಸತ್ತು  ವಿವಾಹ ವಿಚ್ಛೇದನ ಪಡೆಯಬೇಕು ಎಂದುಕೊಂಡಿರುವವರು ಈ ದೇವಾಲಯಕ್ಕೆ ಬಂದರೆ ಅವರ ಸಂಬಂಧ ಉತ್ತಮವಾಗಿ ಮಾರ್ಪಾಟಾಗಿ ಸುಖ ಸಂಸಾರವನ್ನು ನಡೆಸುತ್ತಾರೆ ಎಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಬಂದವರ  ಹಲವಾರು ಸಂಸಾರಗಳಿಗೆ ಪತಿ ಪತ್ನಿಯರಿಗೆ ಒಳ್ಳೆಯದಾಗಿದೆ. ಏಕೆಂದರೆ ಶಿವ ಪಾರ್ವತಿಯು  ಸಹ ಇಲ್ಲಿಯೇ ವಿವಾಹವಾಗಿರುವುದರಿಂದ ಅವರ ಬಾಂಧವ್ಯ ಎಲ್ಲ ದೇವತೆಗಳಿಗಿಂತಲೂ  ಉತ್ತಮವಾದದ್ದು ಎಂದು ಹೇಳಬಹುದಾಗಿದೆ .

 

 

ಪ್ರೀತಿ, ಪ್ರೇಮ ಎಂದರೆ ಮೊದಲಿಗೆ ನೆನಪಾಗುವುದು ಶಿವ ಪಾರ್ವತಿ ಹಾಗೂ ಶ್ರೀಕೃಷ್ಣ. ಈ ದೇವಾಲಯಕ್ಕೆ ಭೇಟಿ ನೀಡುವ ಹಲವಾರು ಭಕ್ತರು ವಿಶೇಷವಾದ ಪೂಜೆಗಳನ್ನು ಮಾಡಿಸುತ್ತಾರೆ. ಇದರಿಂದಾಗಿ ತಮಗೆ ಉತ್ತಮವಾದ ವಧು ಅಥವಾ ವರ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ವಿವಾಹವಾದ ನಂತರ ವಧು ವರರು ಈ ದೇವಾಲಯಕ್ಕೆ ಭೇಟಿ ನೀಡಿ ಕಾಣಿಕೆಯನ್ನು ಅರ್ಪಿಸಿ ನಮಿಸುತ್ತಾರೆ.

ಈ ದೇವಾಲಯವು ಅತ್ಯಂತ ವಿಶಿಷ್ಟವಾದ ದೇವಾಲಯಗಳಲ್ಲಿ ಒಂದಾಗಿದ್ದು, ಈ ಶ್ರೀ ಕ್ಷೇತ್ರವನ್ನು ತಿರುವಿನಚೇರಿ ಉಧ್ವಗನಾಥ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ. ಈ ದೇವಾಲಯದ ಸಮೀಪ ಹಲವಾರು ಸುಂದರವಾದ ದೇವಾಲಯಗಳು ಸಹ ಇವೆ. ಈ ಶಕ್ತಿಯುತವಾದ ದೇವಾಲಯವೂ ಬೆಳಗ್ಗೆ  7:30 ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ತೆರೆದಿರುತ್ತದೆ. ನಂತರ ಮಧ್ಯಾಹ್ನ ಮೂರು ಮೂವತ್ತರಿಂದ ರಾತ್ರಿ ಎಂಟು ಗಂಟೆಯವರೆಗೆ ತೆರೆದಿರುತ್ತದೆ .

 

 

ತಿರುಮನ್ ಚೇರಿಯು  , ಕುತಲಮ್ ಮೈಲಾಡು ತೊರೈ ತಾಲ್ಲೂಕಿನ ನಾಗಿ ಎಂಬ ಜಿಲ್ಲೆಯಲ್ಲಿದೆ. ಇದು ಕುಂಭಕೋಣಂ ಮತ್ತು ಮೈಲಾಡು ತುರೈಗೆ  ಸಮೀಪದಲ್ಲಿದೆ. ರೈಲು ಮಾರ್ಗದ ಮೂಲಕ ಈ ದೇವಾಲಯಕ್ಕೆ ತೆರಳಲು ಸಮೀಪವಿರುವ ರೈಲ್ವೇ ನಿಲ್ದಾಣವೆಂದರೆ ಅದೇ ಕುಂಭಕೋಣಂ ಮತ್ತು ಮೈಲಾಡು ತೊರೈ ಆಗಿದೆ. ರಸ್ತೆ ಮಾರ್ಗದ ಮೂಲಕ ಹೇಗೆ ತೆರಳುವುದೆಂದರೆ ಚೆನ್ನೈನಿಂದ ಪಾಂಡಿಚೇರಿ, ಕಡಲೂರು, ಚಿದಂಬರಂ ಮೈಲಾಡು ತೊರೈ,ಕಟ್ಟಲಾಮ್ ತಿರುವನ್ ಚೇರಿ ಈ ಮಾರ್ಗದ ಮೂಲಕ ಸುಲಭವಾಗಿ ಈ ದೇವಾಲಯಕ್ಕೆ ತೆರಳಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top