fbpx
ಭವಿಷ್ಯ

ವಾರ ಭವಿಷ್ಯ ಡಿಸೆಂಬರ್ 12 ರಿಂದ 17 ನೇ ತಾರೀಖಿನವರೆಗೆ.

 ಡಿಸೆಂಬರ್ 12 ರಿಂದ 17 ನೇ ತಾರೀಖಿನವರೆಗೆ ವಾರ ಭವಿಷ್ಯ

 

ಮೇಷ (Mesha)

 

ನಿಮ್ಮ ಮನಸ್ಸಿನ ಆಸೆಗಳೆಲ್ಲವೂ ಈಡೇರುವವು. ನಿಮ್ಮ ಅದೃಷ್ಟವು ಈಗ ನಿಮ್ಮ ಜೊತೆಗೆ ಇರಲಿದೆ. ಯಾವ ಕೆಲಸಗಳು  ಬಹು ದಿನಗಳಿಂದ  ಅಡೆತಡೆಗಳಿಂದ ನಿಂತು ಹೋಗಿದ್ದವೋ ಅವೆಲ್ಲವೂ ಈಗ ಸಲೀಸಾಗಿ ನೆರವೇರಿ  ಪೂರ್ಣವಾಗುವುದು ಜೊತೆಗೆ ಧನಲಾಭವೂ ಸಹ ಆಗುವುದು. ಈ ವಾರ ಹೊಸ ಪ್ರೇಮ ಸಂಬಂಧಗಳು ಶುರುವಾಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಓದುವುದರಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಆಗುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಚಿಂತೆ ಮಾಡಿ ಭಯ ಪಡುವ ಅವಶ್ಯವಿಲ್ಲ.

 

ವೃಷಭ (Vrushabha)

ಈ ಸಮಯದಲ್ಲಿ ನಿಮಗೆ ಹಣವನ್ನು ಸಂಪಾದಿಸಲು ಹೊಸ ಅವಕಾಶಗಳು ದೊರಕಲಿವೆ. ನೀವು ಯೋಚಿಸಿರುವ ಎಲ್ಲ ಕೆಲಸಗಳು ಪೂರ್ತಿಯಾಗುತ್ತವೆ. ನಿಮಗೆ ಬರಬೇಕಾಗಿರುವ ಹಣವೂ ಸಹ ಈಗ ಮರಳಿ ನಿಮಗೆ ಕೈಸೇರುವುದು. ಹೊಸ ಮನೆ, ಹೊಸ ವಾಹನ ಅಥವಾ ಹೊಸ ಫ್ಲ್ಯಾಟ್ ಕೂಡ ದೊರೆಯುವ ಸಂಭವವಿದೆ. ಬೇರೆ ದಿನಗಳಿಗೆ ಹೋಲಿಸಿದರೆ ಈ ವಾರ ನಿಮ್ಮ ಖರ್ಚು ಸಹ ಹೆಚ್ಚಾಗುವುದು. ಷೇರು ಮತ್ತು ವ್ಯಾಪಾರ, ವಹಿವಾಟಿನಲ್ಲಿ ಹಣವನ್ನು ಹಾಕುವುದರಿಂದ ನಿಮಗೆ ನಷ್ಟವಾಗುವುದು. ನಿಮ್ಮ ಪ್ರೇಮ ಜೀವನದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಸ್ವಲ್ಪ ಸಮಾಧಾನದಿಂದ ಇರುವುದು ಉತ್ತಮ.

 

ಮಿಥುನ (Mithuna)

ನೀವು ಮಾಡಿದ ಒಳ್ಳೆಯ ಕರ್ಮಗಳ ಫಲ  ಈ ವಾರ ನಿಮಗೆ ದೊರೆಯುವುದು.ನಿಮಗೆ ಹೆಚ್ಚಿನ ಧನ ಲಾಭವಾಗುವುದು. ಷೇರು ಮಾರುಕಟ್ಟೆಯಲ್ಲಿ ಮತ್ತು ಲಾಟರಿಯಲ್ಲಿ ಬಂಡವಾಳ ಹೂಡುವುದರಿಂದ ಹೆಚ್ಚಿನ ರೀತಿಯಲ್ಲಿ ಧನ ಲಾಭವಾಗುವುದು. ಸ್ನೇಹಿತರ ಸಹಾಯದಿಂದಲೂ ಕೂಡ ಕಾರ್ಯಕ್ಷೇತ್ರದಲ್ಲಿ ಉಂಟಾಗುತ್ತಿದ್ದ ಅಡಚಣೆಗಳು ಈಗ ದೂರವಾಗುವ  ಯೋಗವಿದೆ. ಸಂಗಾತಿಯ ಜೊತೆ ಆರಾಮಾಗಿ ಹೊರಗೆ ಸುತ್ತುವ ಮತ್ತು ಸಂತೋಷದಿಂದ ಜೀವನದಲ್ಲಿ ಕಾಲ ಕಳೆಯುವ ಯೋಗವೂ ಈಗ ಕೂಡಿ ಬಂದಿದೆ.

 

ಕರ್ಕ (Karka)

ಈ ವಾರ ನಿಮಗೆ ಹಣದ ಕೊರತೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು. ಸಲೀಸಾಗಿ ಸಾಗುತ್ತಿರುವ ಅನೇಕ ಕಾರ್ಯಗಳಲ್ಲಿ ಅಡೆತಡೆ ಎದುರಾಗುವ ಸಂಭವವಿದೆ. ಇದರಿಂದ ಕಷ್ಟಗಳು ಸಹ ಹೆಚ್ಚಾಗುವುದು ಮತ್ತು ಮಾನಸಿಕ ಒತ್ತಡ ಕೂಡ ಹೆಚ್ಚಾಗುವುದು. ಸಣ್ಣಪುಟ್ಟ ವಿಷಯಗಳಿಗೆ ಜನಗಳ ಜೊತೆಗೆ ವೈಮನಸ್ಯ ಮತ್ತು ಜಗಳ,ಬೇಸರ ಮತ್ತು ಮಾತಿನ ಚಕಮಕಿ  ಉಂಟಾಗುವುದು. ಯಾವುದೋ ಮುಖ್ಯವಾದ ವ್ಯಕ್ತಿಯಿಂದ ನಿಮಗೆ ದ್ರೋಹ ಉಂಟಾಗುವ ಸಂಭವವಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾರ ಮೇಲೆಯೂ ಸಹ ನಂಬಿಕೆಯನ್ನು ಇಡಬೇಡಿ. ಇಲ್ಲವಾದಲ್ಲಿ ನಿಮಗೆ ಆರ್ಥಿಕವಾಗಿ ನಷ್ಟ ಉಂಟಾಗುವುದು .

 

ಸಿಂಹ (Simha)

ಈ ವಾರ ನಿಮಗೆ ಅಪಾರವಾದ ಹಣ, ಗೌರವ ಸಮ್ಮಾನಗಳು ದೊರೆಯುವವು ಮತ್ತು ಯಶಸ್ಸು ಪ್ರಾಪ್ತಿಯಾಗುವುದು.ಅದೃಷ್ಟವೂ ಸಹ ನಿಮ್ಮ ಜೊತೆಯಾಗುವುದು.ಯಾವ ಕೆಲಸ ಬಹುದಿನಗಳಿಂದ ನಿಂತು ಹೊಗಿತ್ತೋ ಅದು ಈಗ ಪೂರ್ಣವಾಗುವುದು.ವಿದೇಶಿ ಯಾತ್ರೆಯ ಪ್ರಭಲ ಯೋಗವಿದೆ.ಸಮಾಜದಲ್ಲಿ ಗೌರವ ಮತ್ತು ಸಮ್ಮಾನಗಳು ಹೆಚ್ಚಾಗುವುದು.ಹೊಸ ಜನರ ಅಗಮನವು ನಿಮ್ಮ ಜೀವನದಲ್ಲಿ ಆಗುವುದು.ಪ್ರೀತಿಯ ವಿಷಯದಲ್ಲಿ ಈ ವಾರ ಮುಖ್ಯವಾದ ವಾರವಾಗಿದೆ.ಯಾವುದಾದರೂ  ವ್ಯಕ್ತಿಗೆ ನಿಮ್ಮ ಪ್ರೀತಿಯನ್ನು ತಿಳಿಸಬೇಕು ಎಂದು ಇದ್ದರೆ ಈ ವಾರ ಒಳ್ಳೆಯ ಸಮಯ ಕೂಡಿ ಬಂದಿದೆ.

 

ಕನ್ಯಾರಾಶಿ (Kanya)

ಈ ವಾರ  ನೀವು ತುಂಬಾ ಸಮಾಧಾನದಿಂದ ಇರಬೇಕಾಗುವುದು. ಯಾವುದೇ ರೀತಿಯ ವಾದ ವಿವಾದಗಳ ಮಧ್ಯದಲ್ಲಿ ಸಿಲುಕಬೇಡಿ. ವ್ಯರ್ಥವಾದ ಜಗಳದಿಂದ ದೂರವಿರಿ. ಈ ವಾರ ನಿಮ್ಮ ಓಡಾಟವೂ ಹೆಚ್ಚಾಗುವುದು. ನಿಮ್ಮ ಕಷ್ಟಕ್ಕೆ ಪೂರ್ಣ ರೀತಿಯ ಫಲ ಸಿಗುವುದಿಲ್ಲ. ಲಾಟರಿ ಮತ್ತು ಶೇರು, ವ್ಯವಹಾರ, ವಹಿವಾಟಿನಲ್ಲಿ ಹಣವನ್ನು ಹೂಡಬೇಡಿ. ಯಾರಿಗೂ ಹಣವನ್ನು ಕೊಡಬೇಡಿ ಯಾಕೆಂದರೆ ಅವರು ನಿಮಗೆ ಆ ಹಣವನ್ನು ವಾಪಸ್ಸು  ನಿಮಗೆ ಮರಳಿ ಸಿಗುವುದಿಲ್ಲ. ಮನೆಯಲ್ಲಿ ಕೂಡ ಅಶಾಂತಿ ಮತ್ತು ಕಷ್ಟದ ಸಮಯ ಎದುರಾಗುವುದು .

 

ತುಲಾ (Tula)

ಈ ದಿನಗಳು ನಿಮಗೆ ಆಕಸ್ಮಿಕವಾಗಿ ಧನ ಲಾಭವಾಗುವ ಪ್ರಬಲ ಯೋಗವನ್ನು ಉಂಟು ಮಾಡಲಿದೆ. ನೀವು ವ್ಯವಹಾರವನ್ನು ಹೆಚ್ಚಿಸಬಹುದು. ನೌಕರಿ ಮತ್ತು ವ್ಯಾಪಾರ ಮಾಡುವವರಿಗೆ ಅದೃಷ್ಟವು ನಿಮ್ಮ ಜೊತೆಗೆ ಇರುವುದು. ಅವಿವಾಹಿತರಿಗೆ ಇಷ್ಟು ದಿನಗಳು ಅನೇಕ ಕಷ್ಟಗಳು ಎದುರಾಗುತ್ತಿದ್ದವು. ಆದರೆ ಇವರಿಗೆ ಈಗ ವಿವಾಹಕ್ಕೆ  ಸಂಬಂಧಗಳು  ಕೂಡಿ ಬರುತ್ತವೆ. ನಿಮ್ಮ ಪ್ರೇಮ ಜೀವನದಲ್ಲಿಯೂ ಸಹ ದೊಡ್ಡದಾಗಿ ಹೊಸ ಬದಲಾವಣೆ ಕಂಡು ಬರುವುದು. ವಿದ್ಯಾರ್ಥಿಗಳಿಗೆ ಈ ವಾರ ಓದುವುದರಲ್ಲಿ ಮನಸ್ಸು ತೊಡಗುವುದು.

 

ವೃಶ್ಚಿಕ (Vrushchika)

ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಮುಖ್ಯವಾಗಿ ಕಾಳಜಿ ಮತ್ತು ಎಚ್ಚರ ವಹಿಸುವುದು ಉತ್ತಮ. ನಿಮ್ಮ ಮಾತಿನಲ್ಲಿ ಹಿಡಿತವಿರಲಿ,ನಿಮ್ಮ ಮಾತನ್ನು  ನಿಯಂತ್ರಣದಲ್ಲಿಟ್ಟು ಕೊಳ್ಳಿ. ಇಲ್ಲವಾದಲ್ಲಿ ನೀವು ಅನಗತ್ಯ ವಾದ ವಿವಾದಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಹಣಕ್ಕೆ ಸಂಬಂಧಪಟ್ಟಂತೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಪರಿವಾರದಲ್ಲಿ ಅಶಾಂತಿಯ ವಾತಾವರಣ ನೆಲೆಸುವುದು. ಪೂರ್ತಿ ದಿನದ ಒತ್ತಡದಿಂದ ಕೋಪೋದ್ರಿಕ್ತರಾಗಿ ಆ ಕೋಪವನ್ನು ನೀವು ನಿಮ್ಮ ಸಂಗಾತಿಯ ಮೇಲೆ ತೋರಿಸಿ ಕೊಳ್ಳುವಿರಿ. ಈ ಕಾರಣದಿಂದ ನಿಮ್ಮ ದುಃಖ ಮತ್ತಷ್ಟು ಹೆಚ್ಚಾಗುವುದು. ಸ್ವಲ್ಪ ಸಮಾಧಾನದಿಂದ ಇರುವುದು ಉತ್ತಮ.

 

ಧನು ರಾಶಿ (Dhanu)

ಈ ವಾರ ನೀವು ಚಿಂತಿಸಿರುವ ಎಲ್ಲ ಕಾರ್ಯಗಳು ಪೂರ್ಣವಾಗುವವು. ಕೆಲಸ ಹುಡುಕುತ್ತಿರುವವರಿಗೆ ಕೆಲಸ ಸಿಗುವುದು. ಬಹು ದಿನಗಳಿಂದ ಉಂಟಾಗಿದ್ದ ಕಷ್ಟಗಳು ದಿನ ಕಳೆದಂತೆ ನಿವಾರಣೆಯಾಗುತ್ತವೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗುವುದು, ಧನಲಾಭವಾಗುವುದು. ಕೆಲಸದ ನಿಮಿತ್ತ ಯಾವುದಾದರೂ ಮಹತ್ವದ ನಿರ್ಧಾರವನ್ನು ಕೈಗೊಳ್ಳುವಿರಿ. ಜೀವನದಲ್ಲಿ ಹೊಸ ಬದಲಾವಣೆ ಉಂಟಾಗುವುದು. ಕೆಲವು ಮುಖ್ಯವಾದ ವಿಷಯಗಳಲ್ಲಿ ನಿಮಗೆ ಅದೃಷ್ಟವೂ ಸಂಪೂರ್ಣವಾಗಿ ಜೊತೆ ನಿಲ್ಲುವುದು. ಪ್ರೇಮ ಜೀವನದಲ್ಲಿ ರೋಮಾಂಚನ ಹೆಚ್ಚಾಗುವುದು.

 

ಮಕರ (Makara)

ಈ ವಾರ ನಿಮಗೆ ಅಧಿಕವಾಗಿ ಹೊಸತನವನ್ನು  ತಂದುಕೊಡುವುದು. ನೌಕರಿಯಲ್ಲಿರುವವರಿಗೆ ಬಡ್ತಿ ಸಿಗುವುದು. ವ್ಯಾಪಾರ ಮಾಡುತ್ತಿರುವವರಿಗೆ ಈ ಸಮಯ ಧನಲಾಭವಾಗುವ ಪ್ರಬಲ ಯೋಗವಿದೆ. ಲಾಟರಿ ಮತ್ತು ಶೇರು ವ್ಯವಹಾರಗಳಲ್ಲಿ ನಿಮಗೆ ಅಧಿಕವಾಗಿ ಧನ ಲಾಭವಾಗುವ ಸಾಧ್ಯತೆ ಇದೆ. ಈ ವಾರ ಬಹುದಿನಗಳಿಂದ ಆಗದೇ ಇದ್ದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವವು. ಹೊಸ ವ್ಯಕ್ತಿಗಳ ಆಗಮನ ನಿಮ್ಮ ಜೀವನದಲ್ಲಿ ಆಗುವುದು. ಈ ವಾರ ಹೊಸ ಆಸ್ತಿ ಅಥವಾ ಹೊಸ ವಾಹನ ಖರೀದಿ ಮಾಡುವಿರಿ. ವಿದ್ಯಾರ್ಥಿಗಳಿಗೂ ಕೂಡ ಈ ವಾರ ತುಂಬಾ ಚೆನ್ನಾಗಿದೆ. ನಿಮ್ಮ ಬಾಳ ಸಂಗಾತಿಯ ಜೊತೆಗೆ ಅಧಿಕವಾಗಿ ಸುತ್ತಾಡು ವಿರಿ.

 

ಕುಂಭರಾಶಿ (Kumbha)

ಈ ವಾರ ನಿಮಗೆ ಧನವೂ ವೃದ್ಧಿಯಾಗುವುದರ ಜೊತೆಗೆ ಸುಖ, ಸಮೃದ್ಧಿಯು  ಜೀವನದಲ್ಲಿ ಪ್ರಾಪ್ತಿಯಾಗುವುದು.  ನಿಮಗೆ ಹೊಸ ಯಶಸ್ಸು ದೊರೆಯುವುದು. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನೀವು ನಿಮ್ಮ ಹಣವನ್ನು ಬಂಡವಾಳ ಹೂಡಿಕೆಯಲ್ಲಿಯೂ ಹೂಡಬೇಕು ಎಂದು ಯೋಚಿಸುತ್ತಿದ್ದರೆ ಅದಕ್ಕೂ ಕೂಡ ಈ ವಾರ ಬಹಳ ಚೆನ್ನಾಗಿದೆ. ಮನೆಯೊಳಗೆ ಸುಖ, ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ರಿಯಲ್ ಎಸ್ಟೇಟ್ ಕೆಲಸ ಮಾಡುವವರಿಗೆ ಹೆಚ್ಚಿನ ಹಣದಿಂದ ಲಾಭವಾಗುವುದು. ಬಾಳ ಸಂಗಾತಿಯ ಜೊತೆ ಮಾತಿನ ಚಕಮಕಿ ಉಂಟಾಗಬಹುದು ಆದ್ದರಿಂದ ಸಮಾಧಾನವಾಗಿರಿ.

 

ಮೀನರಾಶಿ (Meena)

ಈ ವಾರ ನಿಮಗೆ ಅಧಿಕವಾಗಿ ಜೀವನದಲ್ಲಿ ಏರಿಳಿತಗಳು ಕಂಡು ಬರುವವು. ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲವು ಕಷ್ಟಗಳನ್ನು  ಸಹ ಎದುರಿಸಬೇಕಾಗುವುದು. ಹಣವೂ ಸಹ ಅಧಿಕವಾಗಿ  ಬೇರೆ ದಿನಗಳಿಗಿಂತ ತುಸು ಹೆಚ್ಚಾಗಿಯೇ ಖರ್ಚು ಹೆಚ್ಚಾಗುವುದು. ಇದರ ಜೊತೆಗೆ ನಿಮ್ಮ ಹಣದ ಒಳ ಹರಿವು ಸಹ ಹೆಚ್ಚಾಗುವುದು. ಯಾರದ್ದೋ  ಮಾತನ್ನು ಕಿವಿಗೆ ಹಾಕಿಕೊಂಡು ಯಾವುದೇ ಅನಗತ್ಯ ನಿರ್ಧಾರ ತೆಗೆದುಕೊಳ್ಳಬೇಡಿ. ಇದರಿಂದ ನಿಮಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುವುದು. ಅವಿವಾಹಿತರಿಗೆ ಈ ವಾರ ವಿವಾಹ ಯೋಗವೂ ಕೂಡಿ ಬರಲಿದೆ. ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಹೊಟ್ಟೆಗೆ ಸಂಬಂಧಪಟ್ಟಂತೆ ಕೆಲವು ಕಾಯಿಲೆಗಳು ಮತ್ತು ಸೊಂಟ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top