fbpx
ದೇವರು

ಅಯ್ಯಪ್ಪ ಸ್ವಾಮಿಯು ಕುಳಿತಿರುವ ಭಂಗಿ ತುಂಬಾ ವಿಭಿನ್ನ, ಮಣಿಕಂಠನ ಮೊಣಕಾಲಿಗೆ ಕಟ್ಟಿರುವ ವಸ್ತ್ರದ ಮಹತ್ವ ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು ?

ಬೇರೆ ದೇವತೆಗಳಿಗೆ ಹೋಲಿಸಿದರೆ ಅಯ್ಯಪ್ಪ ಸ್ವಾಮಿಯು ತುಂಬಾ ವಿಭಿನ್ನ ಹಾಗೆ ಅಯ್ಯಪ್ಪ ಸ್ವಾಮಿಯು ಕುಳಿತಿರುವ ಭಂಗಿ ಕೂಡ ತುಂಬಾ ವಿಭಿನ್ನವಾಗಿದೆ. ಅಯ್ಯಪ್ಪ ಸ್ವಾಮಿಯ ಯೋಗ ಮುದ್ರೆಯಲ್ಲಿ ಕುಳಿತಿರುತ್ತಾನೆ ಚಿನ್ಮುದ್ರ ಧಾರಿಯಾಗಿ ಅವನು ಭಕ್ತರಿಗೆ ಅಭಯ ಹಸ್ತ ನೀಡುತ್ತಿರುತ್ತಾನೆ. ಅಯ್ಯಪ್ಪ ಸ್ವಾಮಿಯ ಮೊಣಕಾಲಿನ ಸುತ್ತ ಒಂದು ಬಂಧನ ವಿರುತ್ತದೆ. ಅದಕ್ಕೆ “ವಸ್ತ್ರ ಬಂಧನ” ಎಂದು ಸಹ ಕರೆಯಲಾಗುತ್ತದೆ.

 

 

ಈ ವಸ್ತ್ರ ಬಂಧನದ ಅಂದರೆ ಏನು ? ಅದು ಯಾಕೆ ಅಯ್ಯಪ್ಪ ಸ್ವಾಮಿಗೆ ಮಾತ್ರ ಬಂತು ? ಯಾವ ಸಂದರ್ಭದಲ್ಲಿ ಯಾರು ಈ ವಸ್ತ್ರ ಬಂಧನವನ್ನು ಅಯ್ಯಪ್ಪ ಸ್ವಾಮಿಗೆ ಕಟ್ಟಿದ್ದು ? ಇವೆಲ್ಲವನ್ನೂ ತಿಳಿದುಕೊಳ್ಳೋಣ ಬನ್ನಿ

ಅಯ್ಯಪ್ಪ ಸ್ವಾಮಿಯು ತನ್ನ ಬಾಲ್ಯದಲ್ಲಿ ಮಣಿಕಂಠ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಗಳಿಸಿದ್ದನು. ಅದೇ ಹೆಸರಿನಿಂದ ಎಲ್ಲರೂ ಕರೆಯುತ್ತಿದ್ದರು. ಮಣಿಕಂಠನ ಹನ್ನೆರಡು ವರ್ಷಗಳ ಕಾಲ ಪಂದಳ ರಾಜ ಎಂಬ ರಾಜನ ಬಳಿ ಬೆಳೆದಿದ್ದನು. ಆಗ ಮಣಿಕಂಠನು ತಾನು ಸಾಮಾನ್ಯ ಮನುಷ್ಯ ಅಲ್ಲ ಬದಲಾಗಿ ಅವನು ಹರಿಹರರ ಪುತ್ರನೆಂದು, ಧರ್ಮವನ್ನು ರಕ್ಷಿಸಲೆಂದೇ ಈ ಭೂಮಿಯ ಮೇಲೆ ಅವತರಿಸಿರುವನು ಎಂದು ತಿಳಿದುಕೊಳ್ಳುತ್ತಾನೆ. ಈ ಸತ್ಯವನ್ನು ಸ್ವತಃ ನಾರದ ಮಹರ್ಷಿಗಳೇ ಬಂದು ಮಣಿಕಂಠನಿಗೆ ಹೇಳುತ್ತಾರೆ.

 

 

ಮಣಿಕಂಠನ ಮಹಿಷಿ ಎಂಬ ರಾಕ್ಷಸಿಯನ್ನು ವಧಿಸಿದ ಮೇಲೆ ಶಬರಿಮಲೆ ಈಗಿರುವ ಸ್ಥಳದಲ್ಲಿ ಯೋಗ ಮುದ್ರೆಯಲ್ಲಿ , ಜ್ಞಾನ ಪೀಠದ ಮೇಲೆ ಕುಳಿತು, ಭಕ್ತರನ್ನು ಆಕರ್ಷಿಸಿ ಆಶೀರ್ವದಿಸುತ್ತಾನೆ.

ಶಬರಿ ಗಿರಿಯ ಬೆಟ್ಟದ ಮೇಲೆ ದೇವಸ್ಥಾನವನ್ನು ಕಟ್ಟಿಸಿ, ಸ್ವಾಮಿಯ ಆಭರಣಗಳನ್ನು ಹೊತ್ತು ತಲೆಯ ಮೇಲೆ ಹೊತ್ತು, ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ಪಂದಳ ರಾಜನು ಬರುವುದನ್ನು ಗುರುತಿಸಿದ್ದನು, ಅಯ್ಯಪ್ಪ ದೇವನು ತಂದೆಯಾದ ಈ ಪಂದಳ ರಾಜನು ಬರುವುದನ್ನು ಗುರುತಿಸಿ ಅಯ್ಯಪ್ಪ ಸ್ವಾಮಿಯು ತನ್ನ ತಂದೆಗೆ ಗೌರವ ಕೊಡಬೇಕೆಂದು ಎದ್ದು ನಿಂತುಕೊಳ್ಳಲು ಪ್ರಯತ್ನಿಸುತ್ತಾನೆ.

 

 

ಆಗ ಅಷ್ಟರಲ್ಲೇ ಪಂದಳ ರಾಜನು ನೀನು ಅಲ್ಲಿಯೇ ಕುಳಿತುಕೋ ನಿಂತು ಕೊಳ್ಳಬೇಡ ಎಂದು ಮಣಿಕಂಠನಿಗೆ ಹೇಳಿ ಪಂದಳ ರಾಜನು ಭುಜದ ಮೇಲಿದ್ದ ರೇಶಿಮೆ ವಸ್ತ್ರವನ್ನು ತೆಗೆದುಕೊಂಡು ಅಯ್ಯಪ್ಪ ಸ್ವಾಮಿಯ ಮೊಣಕಾಲಿಗೆ ಆ ರೇಶಿಮೆ ವಸ್ತ್ರವನ್ನು ಕಟ್ಟುತ್ತಾರೆ.

 

 

ಪಂದಳ ರಾಜನು ಇಲ್ಲಿ ಯಾವ ಭಂಗಿಯಲ್ಲಿ ಮಣಿಕಂಠನನ್ನು ನೋಡಿ ಪರವಶನಾದನೋ ಅದೇ ರೀತಿ ಇನ್ನುಳಿದ ಭಕ್ತರು ಕೂಡ ಇದೇ ರೂಪದಲ್ಲಿ ( ಅಯ್ಯಪ್ಪ ಸ್ವಾಮಿಯನ್ನು) ಮಣಿಕಂಠನನ್ನು ನೋಡಿ ಪುಳಕಿತರಾಗಬೇಕು , ದರ್ಶನ ಭಾಗ್ಯ ಇದೇ ಭಂಗಿಯಲ್ಲಿ ಪಡೆಯಬೇಕೆಂದು ಭಕ್ತರಿಗೆ ಆನಂದವನನ್ನು ಉಂಟುಮಾಡಬೇಕೆಂದು ಅಯ್ಯಪ್ಪನನ್ನು ಪಂದಳ ರಾಜನು ಕೋರಿ ಕೊಳ್ಳುತ್ತಾನೆ. ಅದಕ್ಕೆ ಅಯ್ಯಪ್ಪ ಸ್ವಾಮಿಯ ಒಪ್ಪಿಕೊಂಡನು . ಈ ರೀತಿ ರೇಷ್ಮೆ ವಸ್ತ್ರದಿಂದ ಮಣಿಕಂಠನ ಮೊಣಕಾಲನ್ನು ಕಟ್ಟಿರುವುದನ್ನು “ವಸ್ತ್ರ ಬಂಧನ” ಎಂದು ಕರೆಯಲಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top