fbpx
ಸಮಾಚಾರ

ಕಾಂಡೋಮ್ ಜಾಹೀರಾತುಗಳ ಪ್ರಸಾರಕ್ಕೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ

 

ತರೇವಾರಿ ಕಾಂಡೋಮ್ ಜಾಹೀರಾತುಗಳ ಪ್ರಸಾರಕ್ಕೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸುವ ಮೂಲಕ ಕತ್ತರಿ ಹಾಕಲಿದೆ ಈ ಜಾಹಿರಾತುಗಳು ಹದಿಹರೆಯದ ಮಕ್ಕಳ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರಲಿದೆ ಇಂತಹ ಅಸಭ್ಯ ಜಾಹೀರಾತುಗಳ ವಿರುದ್ಧ ಹೊಸ ನೀತಿ ತರಲು ಕೇಂದ್ರ ಮುಂದಾಗಿದೆ .

 

 

 

ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ,ಜೊತೆಗೆ ಪ್ರೈಮ್ ಟೈಮ್‍ನಲ್ಲಿ ಯಾವುದೇ ಕಾಂಡೋಮ್ ಜಾಹೀರಾತು ಪ್ರಸಾರ ಮಾಡುವಂತಿಲ್ಲ .

 

 

1994ರ ಕೋಡ್ ಆಫ್ ದಿ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ನೀತಿ ಅನುಸಾರ ಹದಿಹರೆಯದ ಮಕ್ಕಳ ಮನಸ್ಸಿನ ಮೇಲೆ ಭಾರಿ ಪರಿಣಾಮ, ಸುರಕ್ಷತೆಗೆ ಅಪಾಯ ಮತ್ತು ಅನಾರೋಗ್ಯಕರವಾದ ಅಭ್ಯಾಸಗಳನ್ನು ರೂಢಿಸುತ್ತದೆ ಎನ್ನುವ ಕಾರಣದಿಂದ ಈ ನೀತಿ ಸಂಹಿತೆಯನ್ನು ತರಲು ಕೇಂದ್ರ ಮುಂದಾಗಿದೆ .

 

 

ಕೇಂದ್ರ ಸಚಿವಾಲಯಕ್ಕೆ ಅನೇಕ ಪೋಷಕರು ದೂರು ದಾಖಲಿಸಿದ್ದು ಇಂತಹ ಜಾಹಿರಾತುಗಳು ಮಾರಕ ಎಂದು ಜಾಹಿರಾತುಗಳಿಗೆ ಕತ್ತರಿ ಹಾಕಲಿದೆ , ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ ಕೆಲವು ತಿಂಗಳ ಹಿಂದಷ್ಟೇ ಸಚಿವಾಲಕ್ಕೆ ಪತ್ರ ಬರೆದಿತ್ತು ಆದ್ದರಿಂದ ಈ ಹೊಸ ಸಂಹಿತೆ ಜಾರಿಗೆ ತಂದಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top