fbpx
ದೇವರು

ದುರ್ಗಾ ದೇವಿಯ ಈ ಮಂತ್ರವನ್ನು ಏಳು ಬಾರಿ ಪಠಿಸಿದರೆ ಕಷ್ಟಗಳು ದೂರವಾಗುತ್ತದೆ, ಸಾಲದ ಸುಳಿಯಿಂದ ಹೊರಬಹುದು

ಈ ಮಂತ್ರವನ್ನು ಏಳು ಬಾರಿ ಪಠಿಸಿದರೆ ನಿಮ್ಮ ಕಷ್ಟಗಳು ದೂರವಾಗಿ ಅದೃಷ್ಟ ನಿಮ್ಮದಾಗುತ್ತೆ.

 

ಸಮಸ್ಯೆಗಳು ಮನುಷ್ಯನಿಗೆ ಅಲ್ಲದೇ ಮರಗಳಿಗೆ ಬರುವುದಿಲ್ಲ. ಇನ್ನೂ ಸಮಸ್ಯೆಗಳು ಹೇಳಿ ಕೇಳಿ, ಸಮಯ ನೋಡಿ ಬರುವುದಿಲ್ಲ. ಅವು ನಮ್ಮ ಸ್ಥಿತಿಗಳನ್ನು, ಗ್ರಹ ಗತಿಗಳನ್ನು ಕೆಲಸಗಳನ್ನೂ ಆಧರಿಸಿ ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಬಂದೇ ಬರುತ್ತವೆ.

 

 

ಇನ್ನೂ ಯಾವುದರ ಪರಿವೇ ಇಲ್ಲದೆ ಸಮಸ್ಯೆಗಳು ಸಾಕಷ್ಟು ಇರುತ್ತವೆ .ಅವುಗಳನ್ನು ನಾವು ಅನುಭವಿಸಲೇಬೇಕಾಗುತ್ತದೆ. ಇಂತಹ ಸಮಸ್ತ ಸಮಸ್ಯೆಗಳನ್ನು ಪರಿಹರಿಸಿ ನೆಮ್ಮದಿಯ ಜೀವನವನ್ನು ನಿಮ್ಮದಾಗಿಸಿ ಕೊಳ್ಳಬೇಕು ಎಂದಿದ್ದರೆ…. ಹಾಗಾದರೆ ಈ ಮಂತ್ರವನ್ನು ಏಳು ಬಾರಿ ಪಠಿಸಿದರೆ ಸಾಕು ನಿಮ್ಮ ಅದೃಷ್ಟ ಹಾಗೂ ಜಾತಕ ಬದಲಾಗುತ್ತದೆ…..

ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ, ಹೋದಲ್ಲೆಲ್ಲಾ ಜಯ ನಿಮ್ಮದಾಗುತ್ತದೆ. ಸಾಸಿವೆ ಕಾಳಿನಷ್ಟು ಪರಿಹಾರದಿಂದ ಸಮಸ್ಯೆಯನ್ನು ಬಗೆಹರಿಸುವುದು ಒಮ್ಮೊಮ್ಮೆ ಜೀವನದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳು ಅನಾಹುತಗಳು ಜರುಗುತ್ತಲೇ ಇರುತ್ತವೆ. ಸಂಭವಿಸುತ್ತಲೇ ಇರುತ್ತವೆ. ಅಂತಹ ಸಮಸ್ಯೆಗಳು ಎದುರಾದಾಗ ಮಾನಸಿಕವಾಗಿ, ಆರ್ಥಿಕವಾಗಿ, ಶಾರೀರಿಕವಾಗಿ ಅಷ್ಟೆ ಅಲ್ಲದೇ ಸಾಮಾಜಿಕವಾಗಿ ಕೂಡ ಹೀಗೆ ಪ್ರತಿಯೊಂದು ದೃಷ್ಟಿ ಕೋನದಿಂದಲೂ ಮನುಷ್ಯ ಬೆಂದು ಬಳಲಿ ಬರಡಾಗಿ ಹೋಗುವುದು ಸಹಜ.

 

 

ಅಂತಹ ಸಂದರ್ಭಗಳಲ್ಲಿ ಮಾನಸಿಕವಾಗಿ ಚೇತರಿಸಿಕೊಳ್ಳಲು, ಆರ್ಥಿಕವಾಗಿ ಸದೃಢವಾಗಿರಲು ಶಾರೀರಿಕವಾಗಿ ಆರೋಗ್ಯವನ್ನು ಹೊಂದಲು, ಈ ಮಂತ್ರವನ್ನು ನೀವು ತಪ್ಪದೆ ಜಪಿಸಿ ಈ ಮಂತ್ರವನ್ನು ಏಳು ಬಾರಿ ಜಪಿಸಿದ ನಂತರ ದುರ್ಗಾ ದೇವಿಯನ್ನು ಶ್ರದ್ಧೆ ಭಕ್ತಿಯಿಂದ ಮನಸ್ಸಿನಲ್ಲಿ ಏಕಾಗ್ರತೆಯಿಂದ ಪ್ರಾರ್ಥನೆ ಮಾಡಿಕೊಳ್ಳಿ, ಬೇಡಿಕೊಳ್ಳಿ.
ದುರ್ಗಾದೇವಿಯು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವಳು ಅಷ್ಟೇ ಅಲ್ಲದೆ ದುರ್ಗಮವಾದ ಸಮಸ್ಯೆಗಳಿಗೆ ಒಂದು ಗತಿಯನ್ನು ಕಾಣಿಸುವವಳು ದುರ್ಗಾ ದೇವಿ. ದುರ್ಗೆ ದುರ್ಗತಿ ನಾಶಿನಿ ಎಂದು ಸಹ ಹೇಳಿದ್ದಾರೆ.

 

 

ಜನಗಳು ಆ ದೇವಿಗೆ ಮೊರೆ ಹೋದಲ್ಲಿ ಆಕೆಯ ಶಕ್ತಿಗಳನ್ನು ನಮಗೆ ಕರುಣಿಸಿ ನಮ್ಮನ್ನು ಶಕ್ತಿವಂತರನ್ನಾಗಿ ಮಾಡಿ, ಬುದ್ಧಿವಂತರನ್ನಾಗಿ ಮಾಡುತ್ತಾಳೆ. ಆರೋಗ್ಯವಂತರನ್ನಾಗಿ ಮಾಡಿ ಪ್ರವಚನದಿಂದ ಕಾಪಾಡಿ ಸನ್ಮಾರ್ಗವನ್ನು ತೋರಿ ಸಮಸ್ಯೆಗಳಿಗೆ ಪರಿಹಾರ ಮತ್ತು ನಿವಾರಣೆಯನ್ನು ಒದಗಿಸುತ್ತಾಳೆ.

ದುರ್ಗಾ ದೇವಿಯ ಜಗನ್ಮಾತೆಯ ಮಹತ್ವವಾದ ಮಂತ್ರ ಹೀಗಿದೆ..

 

“ ದುಂ ದುರ್ಗಾಯೇ ನಮಃ”

 

 

ಇದನ್ನು ಕನಿಷ್ಠವಾಗಿ ಏಳು ಬಾರಿ ಜಪಿಸಿದರೆ ಸಾಕು . ಇನ್ನೂ ಗರಿಷ್ಠವಾಗಿ ಎಷ್ಟು ಬಾರಿ ಜಪಿಸಿದರೂ ಅದಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಸಮಸ್ಯೆಗಳ ಸುಳಿಯಿಂದ ಹೊರಬರಬೇಕು ಎಂದರೆ ಈ ಮಂತ್ರವನ್ನು ಜಪಿಸಿ ನೋಡಿ. ಈ ಮಂತ್ರದಲ್ಲಿರುವ ಶಕ್ತಿ ಎಷ್ಟು ಎಂದು ನಿಮಗೆ ತಪ್ಪದೇ ತಿಳಿಯುತ್ತದೆ.

“ದುಂ ದುರ್ಗಾಯೇ ನಮಃ”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top