fbpx
ಸಮಾಚಾರ

ಡೆತ್ ನೋಟ್ ಬರೆದಿಟ್ಟು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಪ್ರೇಮಿಗಳು.

ಡೆತ್ ನೋಟ್ ಬರೆದಿಟ್ಟು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಪ್ರೇಮಿಗಳು.

 

 

ತಾವು ಸಾಯುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಒಂದೇ ಮರಕ್ಕೆ ನೇಣು ಹಾಕಿಕೊಂಡು ಅಪ್ರಾಪ್ತ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

 

 

ತಾಲ್ಲೂಕಿನ ನಗರಗೆರೆ ಹೋಬಳಿ ನಕ್ಕಲಹಳ್ಳಿ ಗ್ರಾ.ಪಂ. ವ್ಯಾಪ್ತಿಯ “ಪೆದ್ದನಹಳ್ಳಿ” ಗ್ರಾಮದ ವಾಸಿಗಳಾದ ಗಿರೀಶ (18 ವರ್ಷ) ಗೌರಿಬಿದನೂರು ನ್ಯಾಷನಲ್ ಕಾಲೇಜ್ ನಲ್ಲಿ ಪಿಯುಸಿ ವ್ಯಾಸಂಗ ಮಾಡುತಿದ್ದ ಯುವಕ ಹಾಗೂ ಇದೇ ಗ್ರಾಮದ ವಾಸಿ ಗೌರಿಬಿದನೂರು ಮುನ್ಸಿಪಲ್ ಶಾಲೆಯಲ್ಲಿ SSLC ವ್ಯಾಸಂಗ ಮಾಡುತಿದ್ದ ‘ಗಾನವಿ’ ಸುಮಾರು 16 ವರ್ಷ ವಯಸ್ಸಿನ ಯುವತಿ ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದರು,

 

 

ಇವರ ಪ್ರೀತಿಗೆ ಮನೆಯವರು ಒಪ್ಪದೇ ಇದ್ದಾಗ 3 ದಿನಗಳ ಹಿಂದೆ ಮನೆ ಬಿಟ್ಟು ಹೋದವರು, ಇಂದು ಬೆಳಗಿನ ಜಾವದಲ್ಲಿ ಪೆದ್ದನಹಳ್ಳಿ ಗ್ರಾಮದ ಹತ್ತಿರ ಆದಿನಾರಾಯಣಪ್ಪ ಎಂಬುವರ ಮಾವಿನ ತೋಟದಲ್ಲಿ ಇಬ್ಬರು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥತಿಯಲ್ಲಿ ಕಂಡುಬಂದಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.

 

 

ಮರದ ಕೆಳಗೆ ಒಂದು ಡೆತ್‌ನೋಟ್ ಪತ್ತೆಯಾಗಿದ್ದು, ಆ ಡೆತ್‌ನೋಟ್‌ನಲ್ಲಿ ತಮ್ಮ ಕೊನೆಯ ಆಸೆಯನ್ನು ಬರೆದುಕೊಂಡಿದ್ದಾರೆ ನಮ್ಮ “ನಮ್ಮಿಬ್ಬರನ್ನು ಒಂದೇ ಗುಂಡಿಗೆ ಹಾಕಿ, ನಮ್ಮ ದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಬೇಡಿ, ಇದೆ ನಮ್ಮ ಕೊನೆ ಆಸೆ, ಐ ಆಮ್‌ ಸಾರಿ” ಎಂದು ಆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾಗಿದ್ದ ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡಿದ್ದು ದುಃಖಕರವಾದ ಸಂಗತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top