fbpx
ಮನೋರಂಜನೆ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ.

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ 9 ವಾರಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಮನೆಗೆ ಪ್ರವೇಶ ಪಡೆದಿದ್ದ 18 ಜನರ ಪೈಕಿ ಈಗಾಗಲೇ 8 ಜನ ಎಲಿಮಿನೇಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಬಂದಿರೋ ಹಾಟ್ ನ್ಯೂಸ್ ಏನಂದರೆ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.


 

ಕಳೆದ ವಾರ ವೈಷ್ಣವಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು ಆದರೆ ಅನಾರೋಗ್ಯದ ಕಾರಣದ ಹಿನ್ನಲೆ ಕೇವಲ ನಾಲ್ಕೇ ದಿನಗಳಿಗೆ ತಮ್ಮ ಬಿಗ್ ಬಾಸ್ ಪಯಣವನ್ನು ಮುಗಿಸಿದ್ದರು. ಹಾಗಾಗಿ ಸಂಯುಕ್ತ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಗೆ ಬಂದಿದ್ದಾರೆ ಮಾಡಿದ್ದಾರೆ…
 


ಕಿರಿಕ್’ಪಾರ್ಟಿ ಕಾಲೇಜ್ ಕುಮಾರ್ ಚಿತ್ರಗಳಲ್ಲಿ ನಾಯಕಿಯಾಗಿರುವ ಸಂಯುಕ್ತ 60 ದಿನಗಳ ನಂತರ ಬಿಗ್ ಬಾಸ್ ಮನೆಗೆ ಬಂದಿರುವುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದು. ಈಗಾಗಲೇ ಮನೆಯ ಲೆಕ್ಕಾಚಾರ ಮತ್ತು ಸ್ಪರ್ಧಿಗಳ ವರ್ತನೆಯ ಬಗ್ಗೆ ಹೊರಗಿನಿಂದ ತಿಳಿದುಕೊಂಡಿರುವ ಸಂಯುಕ್ತ ಬಿಗ್ ಬಾಸ್ ಮನೆಯಲ್ಲಿ ಅವರ ಜೊತೆ ಹೇಗೆ ವರ್ತಿಸಲಿದ್ದಾರೆ ಕಾದುನೋಡಬೇಕು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top