fbpx
ಭವಿಷ್ಯ

ಡಿಸೆಂಬರ್ 24 ನೇ ತಾರೀಕಿನ ನಂತರ ಶುಕ್ರ ದೆಸೆ ಈ ನಾಲ್ಕು ರಾಶಿಯವರಿಗೆ ಇನ್ನು ಮೂರು ವರ್ಷ ಇದ್ದು ಯಾವುದೇ ದೋಷ ಇದ್ದರು ಅದೃಷ್ಟ ನಿಮ್ಮ ಜೊತೆಯಲ್ಲಿರುವುದು

ಶುಕ್ರ ದೆಸೆ ಬಗ್ಗೆ ನಿಮಗೆಷ್ಟು ಗೊತ್ತು ?

 

ಡಿಸೆಂಬರ್ ತಿಂಗಳು ಬಂತು ಎಂದರೆ ಇನ್ನೇನು ಈ ವರ್ಷ ಮುಗಿಯಿತು. ಹೊಸ ವರ್ಷ ಪ್ರಾರಂಭವಾಗುವುದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ವರ್ಷ ಮುಗಿಯುವ ಕೊನೆಯ ತಿಂಗಳು ಡಿಸೆಂಬರ್ ತಿಂಗಳಿನಲ್ಲೇ ಶುಕ್ರ ದೆಸೆಯೂ ಸಹ ಆರಂಭವಾಗುತ್ತದೆ ಮತ್ತು ಈ ಶುಭ ಗಳಿಗೆಯಲ್ಲಿ ಶುಕ್ರ ಗ್ರಹದ ಶುಭಮಾಸ ಪ್ರಾರಂಭವಾಗುವುದು. ಅದು ಹೇಗೆ ? ಏನೆಲ್ಲಾ ಒಳಿತಾಗುತ್ತದೆ ? ಎಂದು ತಿಳಿಯೋಣ ಬನ್ನಿ ….

 

 

ಶುಕ್ರಗ್ರಹವನ್ನು ನೀವು ಆಕಾಶದಲ್ಲಿ ನೋಡಿದಾಗ ರಾತ್ರಿಯ ಸಮಯ ಮತ್ತು ಬೆಳಗಿನ ಜಾವ ಚಂದ್ರನ ಪಕ್ಕದಲ್ಲಿ ಪ್ರಕಾಶಮಾನವಾಗಿ ಬೇರೆ ನಕ್ಷತ್ರಗಳಿಗಿಂತ ದೊಡ್ಡದಾಗಿ ಕಾಣುವುದು ಹಾಗೆ ಹೊಳೆಯುತ್ತಿರುತ್ತದೆ . ಅದು ಸಾಮಾನ್ಯವಾಗಿ ಚಂದ್ರನ ಪಕ್ಕದಲ್ಲಿಯೇ ಇರುತ್ತದೆ.ಶುಕ್ರಗ್ರಹಕ್ಕೆ ಸ್ವಯಂ ತಾನೇ ಪ್ರಕಾಶಮಾನವಾಗಿ ಬೆಳಗುವ ಶಕ್ತಿ ಇಲ್ಲ .

ಶುಕ್ರದೆಸೆ ಬರಬೇಕು ಎಂದು ಜನಗಳು ಅವರ ಜೀವನದಲ್ಲಿ ಬಯಸುತ್ತಿರುತ್ತಾರೆ. ಶುಕ್ರ ಎಂದರೆ ಹಣ, ಆಸ್ತಿ,ಐಶ್ವರ್ಯ ಮತ್ತು ಸಂಪತ್ತಿನ ಗ್ರಹ ಎಂದು ಸಹ ಭಾವಿಸುತ್ತಾರೆ. ಈ ಶುಕ್ರಗ್ರಹವನ್ನು ಅಂತರಗ್ರಹ ಎಂದು ಸಹ ಕರೆಯಲಾಗುತ್ತದೆ. ಶುಕ್ರದೆಸೆ ಎಂದರೆ ಎಲ್ಲ ರೀತಿಯಲ್ಲಿ ಶುಭವಾಗುವುದು. ಇದು ಜನರ ಭಾವನೆಯಾಗಿದೆ. ಈ ಶುಕ್ರದೆಸೆಯು 6,11 ಮತ್ತು 28 ವರ್ಷಗಳಿಗೊಮ್ಮೆ ಬರುತ್ತದೆ. ಖಗೋಳ ಶಾಸ್ತ್ರಜ್ಞರ ಸಿದ್ಧಾಂತದ ಪ್ರಕಾರ ಪರಾಮರ್ಶಿಸಿ ನೋಡಿದಾಗ ಶುಕ್ರ ಗ್ರಹದ ಪ್ರಭಾವ ಡಿಸೆಂಬರ್ ತಿಂಗಳಿನಲ್ಲೇ ಅಧಿಕವಾಗಿರುತ್ತದೆ.

 

ರಾಶಿಗಳ ಮೇಲೆ ಶುಕ್ರ ಗ್ರಹದ ಪ್ರಭಾವ.

 

 

ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನೋವೈಜ್ಞಾನಿಕ ಶಾಸ್ತ್ರ, ಮತ್ತು ರಾಶಿಗಳ ಪ್ರಕಾರ ಪರಾಮರ್ಶಿಸಿ ನೋಡಿದಾಗ ಮೇಷ, ಮಿಥುನ ,ಸಿಂಹ, ಕನ್ಯಾ, ತುಲಾ, ಮಕರ ಮತ್ತು ಮೀನ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ 2017 ನೇ ಸಾಲಿನ ಕೊನೆಯ ತಿಂಗಳಾದ ಡಿಸೆಂಬರ್ ತಿಂಗಳಿನ 24 ನೇ ತಾರೀಕಿನಂದು ಆರಂಭವಾಗಿ ಮುಂದಿನ ಮೂರು ವರ್ಷಗಳ ಕಾಲ ಶುಭ ಯೋಗಗಳು ಮರುಕಳಿಸುತ್ತಿರುತ್ತವೆ.

ಮುಖ್ಯವಾಗಿ ಮೇಷ, ಸಿಂಹ , ಕನ್ಯಾ ಮತ್ತು ಮಕರ ರಾಶಿಯವರಲ್ಲಿ ಶನಿ, ಕುಜ ಮತ್ತು ರಾಹು ಮತ್ತು ಕಾಳ ಸರ್ಪ ಯೋಗಗಳು ಇದ್ದರೂ ಸಹ ಎಂತಹ ದೋಷಗಳಿದ್ದರೂ ಅವೆಲ್ಲವನ್ನೂ ಮೀರಿ ಶುಕ್ರದೆಸೆ ನಿಮಗೆ ಒಳಿತನ್ನು ಮಾಡಲಿದೆ. ಯಾವುದೇ ರಾಶಿಯಲ್ಲಿ ಶುಕ್ರ ದೆಸೆಯಿಂದಲೇ ಚಂದ್ರ ದೆಸೆಯ ಆರಂಭವಾದರೆ ಗುರು ಅಧಿಪತಿಯ ಗ್ರಹವಾಗಿ ಮನೆಯಲ್ಲಿ ಶಾಂತಿಯ ವಾತಾವರಣ ಇಲ್ಲದ ದಂಪತಿಗಳಿಗೆ ಶಾಂತಿ, ಸುಖ , ಸಮೃದ್ಧಿ, ಈ ಶುಕ್ರನಿಂದ ದೊರೆಯುವುದು. ಮಿತ್ರರು ಸಹ ಒಂದಾಗುವರು.

 

 

ಹೊಸ ಮನೆ ಖರೀದಿ, ಹೊಸ ಮನೆಯ ನಿರ್ಮಾಣ, ಹಣದ ಲೇವಾದೇವಿ ಮತ್ತು ಬಂಡವಾಳ ಹೂಡಿಕೆಯಲ್ಲಿ ಪ್ರಗತಿ ಕಾಣುವುದು. ವಿದೇಶದಲ್ಲಿ ನೆಲೆಸುವ ಯೋಗ ಪ್ರಾಪ್ತಿಯಾಗುವುದು, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಮತ್ತು ಪ್ರವಾಸ, ಕಂಕಣಭಾಗ್ಯ ಕೂಡಿಬರುವುದು. ಸಾಲದ ಬಾಧೆಗಳಿಂದ ಮುಕ್ತಿ ದೊರೆಯುವುದು. ಆರೋಗ್ಯ ಉತ್ತಮವಾಗುವುದು. ಚರಾಸ್ತಿ ದ್ವಿಗುಣವಾಗುವುದು. ದೇವತಾ ಕಾರ್ಯಗಳು ನಡೆಯುವವು, ಸಂಶೋಧನೆ ಮತ್ತು ಬರಹಗಾರರಲ್ಲಿ ಹೊಸ ಉಲ್ಲಾಸ, ಉತ್ಸಾಹ ತುಂಬುವುದು. ವಾಹನ ಖರೀದಿಯ ಯೋಗಗಳು ಇವೆಲ್ಲವೂ ಈ ಶುಕ್ರ ಗ್ರಹದ ಪ್ರಭಾವದಿಂದಾಗಿಯೇ ಒದಗಿ ಬರಲಿದೆ. ಕನ್ಯಾ ಮತ್ತು ಸಿಂಹ ರಾಶಿಯವರಿಗೆ ಶುಕ್ರ ದೆಸೆಯು ಸದಾಕಾಲ ಇರುವುದು.

 

ಉದ್ದಿಮೆಗಳ ಮೇಲೆ ಶುಕ್ರನ ಪ್ರಭಾವ.

 

ಶುಕ್ರ ದೆಸೆಯ ಪ್ರಮುಖವಾಗಿ ಬೆಳ್ಳಿ, ಬಂಗಾರ ಮತ್ತು ರತ್ನ ವ್ಯಾಪಾರಿಗಳಿಗೆ ರೇಷ್ಮೆ ಉದ್ದಿಮೆಗಳಿಗೆ ಮತ್ತು ವಿದ್ಯಾ ಸಂಸ್ಥೆಗಳ ಮೇಲೆ ಅಧಿಕವಾಗಿ ಪ್ರಭಾವ ಬೀರಲಿದೆ .ಡಿಸೆಂಬರ್ 24 ನೇ ತಾರೀಕಿನ ನಂತರ ಈ ಉದ್ದಿಮೆಗಳ ಮೇಲೆ ಶುಕ್ರನ ಅಧಿಕ ಪ್ರಭಾವದ ಕಾರಣ ವಹಿವಾಟು ದ್ವಿಗುಣಗೊಂಡು ನಿರೀಕ್ಷೆಗೂ ಮೀರಿದ ಲಾಭ ದೊರೆಯುತ್ತದೆ.ಮೂರು ವರ್ಷದಲ್ಲಿ ಚರಾಸ್ಥಿ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. ಬಂಡವಾಳ ಹೂಡಿಕೆ ಮತ್ತು ಆಮದುಗಳಿಗೆ ಸಕಾಲ, ಒಳ್ಳೆಯ ಕಾಲ ಇದು.
ರಾಶಿ ನಕ್ಷತ್ರಗಳ ಪ್ರಭಾವ .

 

 

ನವೆಂಬರ್ 23 ರಂದು ಧನಸ್ಸು ರಾಶಿಯನ್ನು ಪ್ರವೇಶಿಸುವ ಮಾಡಿರುವ ಸೂರ್ಯ ಜನವರಿ ಇಪ್ಪತ್ತನೇ ತಾರೀಕಿನವರೆಗೆ ಮಕರ ರಾಶಿಯಲ್ಲಿ ಸ್ಥಿತನಿರುತ್ತಾನೆ. ಈ ಕಾರಣದಿಂದ ಧನಸ್ಸು ಮತ್ತು ಮಕರ ರಾಶಿಯವರು ತಲೆಸುತ್ತು, ಸಂಧಿವಾತ ಮತ್ತು ಚರ್ಮವ್ಯಾದಿಗಳಿಂತಹ ಕಾಯಿಲೆಗಳಿಂದ ಮುಕ್ತರಾಗಲಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top