fbpx
ದೇವರು

ದಿನಕ್ಕೆ ಒಂದು ಸಲ ಮಾತ್ರ ದರ್ಶನ ಕೊಟ್ಟು ನಂತರ ಮಾಯವಾಗೋ ಕಾರ್ತಿಕೆಯನಿಂದಲೇ ಪೂಜೆ ಮಾಡಲ್ಪಟ್ಟ ಪಾಪ ಪರಿಹಾರಮಾಡೋ ಮಹಾದೇವನ ಪುಣ್ಯ ಕ್ಷೇತ್ರ

 

ದಿನಕ್ಕೆ ಒಂದು ಸಲ ಮಾತ್ರ ದರ್ಶನ ಕೊಟ್ಟು ನಂತರ ಮಾಯವಾಗೋ ದೇವಾಲಯ – ಸ್ಟ್ಯಾಮ್ಬೇಶ್ವರ

ಮಹಾದೇವ ದೇವಾಲಯ :

 

 

ಪ್ರತಿದಿನ 2 ಬಾರಿ ಸಮುದ್ರದಲ್ಲಿ ಪೂರ್ತಿಯಾಗಿ ಮುಳುಗಿ ಜಲಭಿಷೇಕ ಮಾಡಿಸಿಕೊಳ್ಳುವುದು ಈ ದೇವಾಲಯ.ನೀವು ಈ ದೇವಾಲಯದ ಬಗ್ಗೆ ತಿಳಿದುಕೊಂಡಿಲ್ಲ ಅಂದ್ರೆ ಬನ್ನಿ ಅದರ ವಿಶಿಷ್ಟತೆಗಳ ಬಗ್ಗೆ ತಿಳಿದುಕೊಳ್ಳೋಣ ಅದರ ಬಗ್ಗೆ ಗೊತ್ತಾದ ಮೇಲೆ ತಪ್ಪದೆ ಈ ದೇವಾಲಯಕ್ಕೆ ಒಂದು ಸಲ ಆದ್ರೂ ಹೋಗ್ಬೇಕು ಅನ್ಸುತ್ತೆ.

ನೀವು ನಂಬದೆ ಹೋಗಬಹುದು ಆದರೆ ಈ ದೇವರ ಸಮುದ್ರಗಳ ಅಲೆಗಳಲ್ಲಿ ಮಾಯವಾಗಿ ಹೋಗುವುದು ನಂತರ ಸ್ವಲ್ಪ ಸಮಯದ ಆದ್ಮೇಲೆ ಹೊರಬರುವುದು.ಶಿವನ ಈ ರೂಪವನ್ನು ಸ್ಟ್ಯಾಮ್ಬೇಶ್ವರ ಮಹಾದೇವ ದೇವಾಲಯ ಎಂದು ಕರೆಯುತ್ತಾರೆ.

 

 

ಈ ದೇವಾಲಯ ಗುಜರಾತನ ಕವಿ ಕಂಬೊಯ್ ಎಂಬ ಊರಿನಲ್ಲಿದೆ.

 

ಈ ದೇವಾಲಯದಲ್ಲಿ ಇರುವ ಶಿವ ಲಿಂಗ ದಿನಕ್ಕೆ ಒಂದು ಬಾರಿ ಮಾತ್ರ ದರ್ಶನ ನೀಡುತ್ತದೆ ಉಳಿದ ಸಮಯ ಸಮುದ್ರದ ನೀರಿನಲ್ಲಿ ಮುಳುಗಿರುತ್ತದೆ.
ಸಮುದ್ರ ತೀರದಲ್ಲಿ ಇರುವ ಈ ದೇವಾಲಯಕ್ಕೆ ಪ್ರತಿದಿನ ಎರಡು ಬಾರಿ ಅಲೆ ಬರುತ್ತದೆ ,ಈ ಬಲವಾದ ಅಲೆಗಳ ಕಾರಣದಿಂದ ಸಮುದ್ರದ ನೀರು ದೇವಾಲಯದ ಒಳಗೆ ನುಗ್ಗುತ್ತದೆ.ಈ ರೀತಿ ಸಮುದ್ರದ ನೀರು ಪ್ರತಿ ದಿನ ಎರಡು ಬಾರಿ ಶಿವಲಿಂಗಕ್ಕೆ ಜಲ ಅಭಿಷೇಕ ಮಾಡುತ್ತದೆ.ಆಗ ಶಿವಲಿಂಗ ಪೂರ್ತಿಯಾಗಿ ಮುಳುಗಿರುತ್ತದೆ ಆ ಸಮಯದಲ್ಲಿ ಶಿವಲಿಂಗ ದರ್ಶನಕ್ಕೆ ಯಾರಿಗೂ ಅನುಮತಿ ಇಲ್ಲ .

 

 

ಈ ದೇವಾಲಯದ ವಿಶೇಷ್ಟತೆ ಬಗ್ಗೆ ಶಿವ ಪುರಾಣದ ಏಕಾದಶ ಅಧ್ಯಯನದಲ್ಲಿ ಹೇಳಿದ್ದಾರೆ ಆದ್ದರಿಂದ ದೇವಾಲಯ ಎಷ್ಟು ಪುರಾತನವಾದದ್ದು ಎಂದು ಗೊತ್ತಾಗುವುದು.ಸ್ಕಂದ ಪುರಾಣದಲ್ಲಿ ಈ ದೇವಾಲಯದ ನಿರ್ಮಾಣದ ಬಗ್ಗೆ ವಿವರಿಸಿದ್ದಾರೆ.

 

ಈ ದೇವಾಲಯಕ್ಕೂ ಪೌರಾಣಿಕ ಕಥೆಗಳಿಗೂ ಇರುವ ಸಂಬಂಧ:

 

ತರಕಾಸ ಎಂಬ ರಾಕ್ಷಸ ತನ್ನ ಕಠೋರ ತಪಸ್ಸಿನೆಂದ ಶಿವನ ಪ್ರೀತಿಗೆ ಪಾತ್ರನಾಗುತ್ತಾನೆ,ತಪಸ್ಸಿಗೆ ಮೆಚ್ಚಿದ ಶಿವ ತರಕಾಸನಿಗೆ ಏನು ಬೇಕು ಎಂದು ಕೇಳಿದಾಗ ತನ್ನ ಅಮರನಗುವಂತೆ ವರ ನೀಡುವಂತೆ ಕೇಳುತ್ತಾನೆ ,ಶಿವ ಅದಕ್ಕೆ ಇದು ಸೃಷ್ಠಿಗೆ ವಿರುದ್ದ ಬೇರೆ ವರ ಕೇಳು ಎಂದು ಹೇಳಿದಾಗ ತರಕಾಸ ತನ್ನಗೆ ಸಾವು ಬಂದರೆ ಅದು ಶಿವನ ಪುತ್ರನಿಂದಲೇ ಬರಬೇಕು ಅಂತ ವರ ಕೇಳುತ್ತಾನೆ.

 

 

ವರ ಪಡೆದ ಮೇಲೆ ತರಕಾಸುರ ತನ್ನ ಕೊಬ್ಬಿನಿಂದ 3 ಲೋಕಗಳಲ್ಲೂ ಮುನಿಗಳು ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದನು ಇದರಿಂದ ಮುನಿಗಳು ಮತ್ತು ದೇವತೆಗಳು ಶಿವನ ಬಳಿ ಮೊರೆಹೋಗುತ್ತಾರೆ ,ಈ ಕಾರಣದಿಂದ ಕಾರ್ತಿಕೆಯನ ಜನನವಾಗುತ್ತದೆ , ಕಾರ್ತಿಕೆಯ ತರಕಾಸುರನನ್ನ ಕೊಲ್ಲುತ್ತಾನೆ,ನಂತರ ಕಾರ್ತಿಕೆಯನಿಗೆ ತರಕಾಸುರ ತನ್ನ ತಂದೆ ಶಿವನ ಪರಮ ಭಕ್ತ ಎಂದು ತಿಳಿದು ತನ್ನ ಪಾಪ ಮಾಡಿದೆ ಎಂದು ತುಂಬಾ ಪಶ್ಚತ್ತಾಪಪಡುತ್ತ ಇರುವಾಗ ವಿಷ್ಣು ದೇವ ಬಂದು ಒಂದು ಉಪಾಯ ಹೇಳುತ್ತಾನೆ ಒಂದು ಪ್ರದೇಶದಲ್ಲಿ ಶಿವನ ಲಿಂಗ ಸ್ಥಾಪಿಸಿ ದಿನ ನಿನ್ನ ತಂದೆಯಾದ ಶಿವನನ್ನ ಕ್ಷಮಿಸು ಎಂದು ಪ್ರಾರ್ಥನೆ ಮಾಡುವಂತೆ ಹೇಳುತ್ತಾರೆ .ಆ ದಿನ ವಿಷ್ಣು ದೇವ ಹೇಳಿದ ಆ ಪ್ರದೇಶವೇ ಈಗಿನ ಸ್ಟ್ಯಾಮ್ಬೇಶ್ವರ ಮಹಾದೇವ ದೇವಾಲಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top