fbpx
ಸಮಾಚಾರ

ಪ್ರೀತಿಸಿದವನ ಜೊತೆ ಸೇರಿ ಗಂಡನನ್ನು ಸಿನಿಮಾ ರೀತಿಯಲ್ಲಿ ಕೊಂದಳು ಸುಂದರಿ !

 

ತೆಲಂಗಾಣದ ಕರ್ನೂಲ್ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದ ಆ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ ಸ್ವಾತಿ ಎಂಬಾಕೆಯ ಪತಿ ಸುಧಾಕರ್ ರೆಡ್ಡಿಯವರನ್ನು ಸ್ವಾತಿ ಹಾಗು ಆಕೆಯ ಪ್ರಿಯಕರ ರಾಜೇಶ್ ಸಿನಿಮಾ ರೀತಿಯಲ್ಲಿ ಮರ್ಡರ್ ಮಾಡಿದ್ದಾರೆ .

 

 

ಅಸಲಿಗೆ ನಡೆದಿದ್ದು ಇಷ್ಟು ಕ್ರಷರ್ ಇಟ್ಟುಕೊಂಡಿದ್ದ ಸುಧಾಕರ್ ರೆಡ್ಡಿ ಯಾವುದೋ ಕೆಲಸದ ಸಲುವಾಗಿ ಹೈದರಾಬಾದ್ ಗೆ ತೆರಳಿದ್ದರು ಈ ವೇಳೆಯಲ್ಲಿ ಮನೆಗೆ ಪ್ರಿಯಕರ ರಾಜೇಶನ್ನು ಕರೆಸಿಕೊಂಡಿದ್ದಾಳೆ ಸ್ವಾತಿ , ಆದರೆ ದಿಡೀರ್ ಎಂದು ಆಕೆಯ ಪತಿ ಸುಧಾಕರ್ ರೆಡ್ಡಿ ಎಂಟ್ರಿ ಕೊಟ್ಟಿದ್ದಾನೆ ಹೀಗೆ ಇಬ್ಬರು ಸಿಕ್ಕಿ ಹಾಕಿಕೊಂಡಮೇಲೆ ಮಾತಿನ ಚಕಮಕಿ ನಡೆದು ಸ್ವಾತಿ ಹಾಗು ರಾಜೇಶ್ ಇಬ್ಬರು ಸೇರಿ ಪತಿಯನ್ನು ಕೊಂದಿದ್ದಾರೆ.

 

 

ಕೊಂದಮೇಲೆ ಯಾರಿಗೂ ಅನುಮಾನ ಬಾರದ ಹಾಗೆ ಆತನ ಶವವನ್ನು ನವಾಬ್ ಪೆಟ್ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ , ನಂತ್ರ ಮನೆಗೆ ಬಂದು ಸುಧಾಕರ್ ರೆಡ್ಡಿಯ ಬಟ್ಟೆಗಳನ್ನು ಸ್ವಾತಿ ಧರಿಸಲು ಕೊಟ್ಟಿದ್ದಾಳೆ , ನಂತ್ರ ಈ ಪ್ರಕರಣವನ್ನು ಮುಚ್ಚಿಹಾಕಲು ಇಬ್ಬರು ಸೇರಿ ಪ್ಲಾನ್ ಮಾಡಿ ಪ್ರಿಯಕರ ರಾಜೇಶ್ ಮುಖಕ್ಕೆ ಸ್ವಾತಿ ಆಸಿಡ್ ಎರಚಿದ್ದಾಳೆ ಇದು ರಾಜೇಶ್ ಸುಧಾಕರ್ ರೆಡ್ಡಿ ಎಂದು ನಂಬಿಸಲು ಮಾಡಿದ ನಾಟಕ .

ನಂತ್ರ ಯಾರೋ ದುಷ್ಕರ್ಮಿಗಳು ತಮ್ಮ ಪತಿ ಸುಧಾಕರ್ ರೆಡ್ಡಿ ಮುಖಕ್ಕೆ ಆಸಿಡ್ ಎರಚಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ , ಸುಧಾಕರ್ ಅಲಿಯಾಸ್ ರಾಜೇಶ್ ನನ್ನು ಹೈದರಾಬಾದಿನ ಡಿಆರ್ ಟಿಓ ಆಸ್ಪತ್ರೆಗೆ ಸೇರಿಸಿದ್ದಾಳೆ , ಮುಖ ಸಂಪೂರ್ಣ ಹಾನಿಯಾದ್ದರಿಂದ ಯಾರು ಗುರುತು ಹಿಡಿಯಬಾರದ ಸ್ಥಿತಿಗೆ ಹೋಗಿದ್ದರಿಂದ ಮೊದಲು ಸುಧಾಕರ್ ರೆಡ್ಡಿ ತಾಯಿಗೆ ಅನುಮಾನ ಬಂದರು ಸಹ ಹುಷಾರಿಲ್ಲದ ಕಾರಣ ಹೀಗೆ ಆಡುತ್ತಿತಬಹುದು ಎಂದುಕೊಂಡಿದ್ದಾರೆ .

 

 

ಆದರೆ ಆಸ್ಪತ್ರೆಯಲ್ಲಿ ಸುಧಾಕರ್ ಅಲಿಯಾಸ್ ರಾಜೇಶ್ ಚಿಕಿತ್ಸೆ ಮುಗಿದ ಮೇಲೆ ಸಹಿ ಹಾಕಲು ಆತನ ಹೆಬ್ಬೆಟ್ಟು ಗುರುತನ್ನು ಆಸ್ಪತ್ರೆಯ ಆಡಳಿತ ಮಂಡಳಿ ತೆಗೆದುಕೊಳ್ಳುತ್ತಾರೆ, ಆದರೆ ಆತನ ಹೆಬ್ಬೆಟ್ಟಿನ ಗುರುತು ಸುಧಾಕರ್ ಅವರ ಹೆಬ್ಬೆಟ್ಟಿನ ಗುರುತು ಹೊಂದಾಣಿಕೆ ಆಗುವುದಿಲ್ಲ ಇದರಿಂದ ಸತ್ಯ ಏನೆಂಬುದು ಹೊರಗೆ ಬರುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top