fbpx
ಕಿರುತೆರೆ

ಉದಯ ಸಿಂಗರ್ ಷೋನಲ್ಲಿ ತನ್ನ ಪತಿಯನ್ನು ನೆನೆದು ಭಾವುಕರಾದ ಎಲ್.ಎನ್.ಶಾಸ್ತ್ರಿ ಪತ್ನಿ.

ಉದಯ ಸಿಂಗರ್ ಷೋನಲ್ಲಿ ತನ್ನ ಪತಿಯನ್ನು ನೆನೆದು ಭಾವುಕರಾದ ಎಲ್.ಎನ್.ಶಾಸ್ತ್ರಿ ಪತ್ನಿ.

 

 

ಉದಯ ಚಾನೆಲ್’ನಲ್ಲಿ ಮೂಡಿಬರುತ್ತಿರುವ ಉದಯ ಸಿಂಗರ್ ಜೂನಿಯರ್ಸ್‍ನಲ್ಲಿ ಸ್ಪರ್ಧಿಗಳಿಗೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ದಿವಂಗತ ಎಲ್.ಎನ್ ಶಾಸ್ತ್ರಿಯವರ ಪತ್ನಿ ತಮ್ಮ ಪತಿಯನ್ನು ನೆನೆದು ಕಣ್ಣೀರಿಟ್ಟಿರುವ ಘಟನೆ ನಡೆದಿದೆ.

 

 

ಕಾರ್ಯಕ್ರಮದಲ್ಲಿ ರಕ್ಷಿತ್ ಭಟ್ ಎಂಬ ಸ್ಪರ್ಧಿಯು ಎಲ್.ಎನ್ .ಶಾಸ್ತ್ರಿ ಯವರು ಹಾಡಿದ್ದ ಲವ್ ಇನ್ ಮಂಡ್ಯ ಚಿತ್ರದ “ಲೋ ಮಾವ ನಿನ್ ಬಾಯ್ಗ್ ಇಟ್ಟಾಕ” ಹಾಡನ್ನು ಹಾಡುತ್ತಾನೆ. ಈ ನಡುವೆ ವೇದಿಕೆಯ ಬಳಿ ಬಂದ ಸುಮಾ ಶಾಸ್ತ್ರಿ ಹಾಡಿನ ಕೊನೆಯಲ್ಲಿ ಬರುವ ನಿಂತು ಹೋಯಿತೆ ಜೀವಗಾನ ಎಂಬ ಸಾಲನ್ನು ಕೇಳುತ್ತಿದ್ದಂತೆಯೇ ಭಾವುಕರಾದರು.

ಕ್ಯಾನ್ಸರ್ ಕೊನೆಯ ಸ್ಟೇಜ್’ನಲ್ಲಿ ಇದ್ದಾಗ ಆಗಾಗ ಈ ಹಾಡನ್ನು ಹಾಡುತ್ತಿದ್ದರು,, ಈ ಹಾಡನ್ನು ಹಾಡಬೇಡಿ ಅಂತ ಎಷ್ಟು ಬಾರಿ ಹೇಳಿದರೂ “ಇಲ್ಲ ನಂದೇ ಹಾಡು” ಎಂದು ಹಾಡುತ್ತಿದ್ದರು ಹಾಗೆ ಅದೇ ಅವರ ಕೊನೆಯ ಹಾಡು ಆಗಿಹೊಯಿತು ಎಂದು ಸುಮಾ ಭಾವುಕರಾಗುತ್ತಿದ್ದಂತೆ ಎಲ್ಲರ ಕಣ್ಣಾಲೆಗಳು ಒದ್ದೆಯಾಗಿದ್ದವು. ಈ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

 

ಹಲವು ತಿಂಗಳಿನಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಗಾಯಕ ಎನ್.ಎಲ್. ಶಾಸ್ತ್ರಿಯವರು ಕೆಲವು ತಿಂಗಳುಗಳ ಹಿಂದೆಯಷ್ಟೇ ಇಹಲೋಕ ತ್ಯಜಿಸಿದ್ದರು. ತಮ್ಮ ವಿಶಿಷ್ಟ ಕಂಠದಿಂದಲೇ ಕನ್ನಡಿಗರ ಸಂಗೀತ ಪ್ರಿಯರಲ್ಲಿ ಮನೆ ಮಾಡಿದ್ದ ಎಲ್.ಎನ್.ಶಾಸ್ತ್ರಿಯವರು ತಮ್ಮ ಸುಶ್ರಾವ್ಯ ಗೀತೆಗಳಿಂದಲ್ಲದೇ ಸಂಗೀತ ನಿರ್ದೇಶನದಿಂದಲೂ ತಮ್ಮದೇ ವರ್ಚಸ್ಸನ್ನು ರೂಪಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top