fbpx
ಕಿರುತೆರೆ

ಕನ್ನಡದ ಬಿಗ್ ಬಾಸ್ ತೆಲುಗು ಚಿತ್ರರಂಗಕ್ಕೆ ವೇದಿಕೆಯಾಗ್ತಿದ್ಯಾ..!

ಕನ್ನಡದ ಬಿಗ್ ಬಾಸ್ ತೆಲುಗು ಚಿತ್ರರಂಗಕ್ಕೆ ವೇದಿಕೆಯಾಗ್ತಿದ್ಯಾ..!

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ 9 ವಾರಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಮನೆಗೆ ಪ್ರವೇಶ ಪಡೆದಿದ್ದ 18 ಜನರ ಪೈಕಿ ಈಗಾಗಲೇ 8 ಜನ ಎಲಿಮಿನೇಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಬಂದಿರೋ ಹಾಟ್ ನ್ಯೂಸ್ ಏನಂದರೆ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

 

 

ಕನ್ನಡದ ಕಿರಿಕ್’ಪಾರ್ಟಿ,ಕಾಲೇಜ್ ಕುಮಾರ್ ಚಿತ್ರಗಳಲ್ಲಿ ನಾಯಕಿಯಾಗಿರುವ ಸಂಯುಕ್ತ ಬಿಗ್ ಬಾಸ್ ಮನೆಗೆ ಎಂಟ್ರಿ ಮಾಡುತ್ತಿರುವುದು ಅವರ ಮುಂದಿನ ತೆಲುಗು ಚಿತ್ರಗಳ ಪ್ರಚಾರಕ್ಕಾ? ಹೌದು ಹೀಗೊಂದು ಸುದ್ದಿ ಎಲ್ಲರನ್ನು ಕಾಡುತ್ತಿದೆ ಏಕೆಂದರೆ ಸದ್ಯ ಸಂಯುಕ್ತ ಕೈಲಿ ಯಾವುದೇ ಕನ್ನಡ ಚಿತ್ರವಿಲ್ಲ ಆದರೆ ಒಂದೆರಡು ತೆಲುಗು ತಮಿಳು ಚಿತ್ರಗಳಿವೆ.. ಶೂಟಿಂಗ್ ಹಂತದಲ್ಲಿರುವ ಆ ಚಿತ್ರಗಳಿಗೆ ಪ್ರಚಾರ ಕೊಡೋದಕ್ಕಾಗಿ ಕನ್ನಡದ ಬಿಗ್ ಬಾಸ್ ವೇದಿಕೆಯನ್ನು ಸಂಯುಕ್ತಳಿಗೆ ಕಲ್ಪಿಸಿಕೊಡಲಾಗುತ್ತಿದೆಯಾ ಎನ್ನುವುದು ಎಲ್ಲರ ಪ್ರಶ್ನೆ.

 

 

ಅದೇನೇ ಇರಲಿ 60 ದಿನಗಳ ನಂತರ ಬಿಗ್ ಬಾಸ್ ಮನೆಗೆ ಬಂದಿರುವುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದು. ಈಗಾಗಲೇ ಮನೆಯ ಲೆಕ್ಕಾಚಾರ ಮತ್ತು ಸ್ಪರ್ಧಿಗಳ ವರ್ತನೆಯ ಬಗ್ಗೆ ಹೊರಗಿನಿಂದ ತಿಳಿದುಕೊಂಡಿರುವ ಸಂಯುಕ್ತ ಬಿಗ್ ಬಾಸ್ ಮನೆಯಲ್ಲಿ ಅವರ ಜೊತೆ ಹೇಗೆ ವರ್ತಿಸಲಿದ್ದಾರೆ ಕಾದುನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top