fbpx
ಮನೋರಂಜನೆ

ಕನ್ನಡದ ಪ್ರತಿಷ್ಠಿತ ಲಹರಿ ಸಂಸ್ಥೆಯ ಮುಡಿಗೆ ಯೂಟ್ಯೂಬ್ ಗೋಲ್ಡ್ ಬಟನ್ ಪ್ರಶಸ್ತಿ.

ಕನ್ನಡದ ಪ್ರತಿಷ್ಠಿತ ಲಹರಿ ಸಂಸ್ಥೆಯ ಮುಡಿಗೆ ಯೂಟ್ಯೂಬ್ ಗೋಲ್ಡ್ ಬಟನ್ ಪ್ರಶಸ್ತಿ..!

 

 

 

 

ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಹಾಡುಗಳ ಮಾಲೀಕತ್ವವನ್ನು ಹೊಂದಿರುವ ಲಹರಿ ಸಂಸ್ಥೆ . ಇತ್ತೀಚಿನ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ಚಿತ್ರಗಳ ಆಡಿಯೋ ರೈಟ್ಸ್ ಅನ್ನು ದೊಡ್ಡ ಮೊತ್ತಕ್ಕೆ ಖರೀದಿಸುವ ಸಾಹಸಕ್ಕೆ ಹಾಕಿ ಯಶಸ್ಸನ್ನು ಕಂಡಿತ್ತು. ಕನ್ನಡ ಚಿತ್ರರಂಗದ ಪ್ರತಿಷ್ಠಿತ ಆಡಿಯೋ ಸಂಸ್ಥೆಗಳಲ್ಲೊಂದಾದ ಲಹರಿ ಆಡಿಯೋಗೆ ಈ ವರ್ಷದ ಯೂಟ್ಯೂಬ್ ಗೋಲ್ಡ್ ಬಟನ್ ಪ್ರಶಸ್ತಿ ದೊರೆತಿದೆ.

 

 

ಸಾಮಾನ್ಯವಾಗಿ ಈ ಪ್ರಶಸ್ತಿಯನ್ನು ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್(ಹತ್ತು ಲಕ್ಷ) subscribers ಇರುವ ಸಂಸ್ಥೆಗಳಿಗೆ ಈ ಯೂಟ್ಯೂಬ್ ಗೋಲ್ಡ್ ಬಟನ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇತ್ತೀಚೆಗೆ ಲಹರಿ ಸಂಸ್ಥೆಯು 10 ಲಕ್ಷ subscribers ಅನ್ನು ದಾಟಿದೆ. ಈ ಕಾರಣಕ್ಕೆ ಲಹರಿ ಸಂಸ್ಥೆಗೆ ಗೋಲ್ಡ್‌ ಬಟನ್‌ ಪ್ರಶಸ್ತಿಯನ್ನು ಕೊಡಲಾಗಿದೆ.

 

 

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಸೇರಿದಂಗೆ ಸುಗಮ ಸಂಗೀತ, ಭಜನೆ, ಇನ್ನಿತರ ಗಾಯನಗಳು ಸೇರಿದಂತೆ 1.75 ಲಕ್ಷಕ್ಕೂ ಹೆಚ್ಚು ಹಾಡುಗಳು ಲಹರಿ ಸಂಸ್ಥೆಯ ಹತ್ತಿರವಿದ್ದು, ಈ ಎಲ್ಲಾ ಹಾಡುಗಳು ಯೂಟ್ಯೂಬ್‌ನ ಅಫೀಶಿಯಲ್ ಲಹರಿ ಚಾನಲ್‌ನಲ್ಲಿ ಲಭ್ಯವಿದೆ. 36 ವರ್ಷಗಳಿಂದ ಹಲವಾರು ಆಡಿಯೋ ಬಿಡುಗಡೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಲಹರಿ ಸಂಸ್ಥೆ ಆಗಿನ ಕಾಲದ ರೀಲ್ ಕ್ಯಾಸೆಟ್ ನಿಂದ ಹಿಡಿದು ಇಂದಿನ ಯೂಟ್ಯೂಬ್ ಚಾನೆಲ್ ನಲ್ಲೂ ತನ್ನದೇ ಆದ ಛಾಪನ್ನ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top