fbpx
ಮನೋರಂಜನೆ

ವಿರಾಟ್-ಅನುಷ್ಕಾ ಮದುವೆಯಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ನಟಿ..!

ವಿರಾಟ್-ಅನುಷ್ಕಾ ಮದುವೆಯಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ನಟಿ..!

 

 

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿರುವುದು ಈಗ ಎಲ್ಲರಿಗೂ ವಿಷಯ. ಈ ಇಬ್ಬರು ಮದುವೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಆಟಗಾರರು ಸೇರಿ ಅನೇಕ ಸಿನಿ ಶುಭಾಶಯ ಸೋಷಿಯಲ್ ಮೀಡಿಯಾಗಳಲ್ಲಿ ತಿಳಿಸಿದ್ದರು. ಆದರೆ ವಿರಾಟ್ ಮದುವೆಯಾಗಿರುವ ವಿಷಯವ ಗೊತ್ತಾಗುತ್ತಿದ್ದಂತೆಯೇ ಬಾಲಿವುಡ್ ನಟಿ ರಾಖಿ ಸಾವಂತ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

 

 

ತಾನು ವಿರಾಟ್’ರನ್ನು ಪ್ರೀತಿಸುತ್ತಿದ್ದಾಗಿ ಎರಡು ವರ್ಷಗಳ ಹಿಂದೆ ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದ ರಾಖಿ ಸಾವಂತ್ ಈಗ ವಿರಾಟ್ ಅವರು ಅನುಷ್ಕಾ ಜೊತೆ ಮದುವೆಯಾಗಿರುವುದಕ್ಕೆ ನಿರಾಸೆಗೊಂಡಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮಾಡಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

 

 

“ಈಗ ನನ್ನ ಗತಿ ಏನು ವಿರಾಟ್? ಈಗ ನನ್ನ ಗತಿ ಏನು. ನಾನು ವಾಶ್ ರೂಮ್ ನಲ್ಲಿದ್ದಾಗ ನೀನು ಅನುಷ್ಕಾಳ ಜೊತೆ ಮದುವೆಯಾಗಿರುವೆ ಎಂಬ ವಿಷ್ಯ ಗೊತ್ತಾಯಿತು” ಎಂದು ವಿಡಿಯೋದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.. ಇದೂವರೆಗೂ ಅನುಷ್ಕಾ ವಿರಾಟ್ ಮೇಲಿರುವ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ ಆದರೆ ನಾನು ವಿರಾಟ್ ಅನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದೇನೆ ಎಂದು ಎರಡು ವರ್ಷಗಳ ಹಿಂದೆ ಟಿವಿ ಶೋವೊಂದರಲ್ಲಿ ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top