fbpx
ಭವಿಷ್ಯ

ಡಿಸೆಂಬರ್ 13 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೧೩ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೩೬
ಸೂರ್ಯಾಸ್ತ : ೧೭:೫೧
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಕೃಷ್ಣ ಪಕ್ಷ
ತಿಥಿ : ಏಕಾದಶೀ
ನಕ್ಷತ್ರ : ಚೈತ್ರ
ಯೋಗ : ಶೋಭಾನ
ಪ್ರಥಮ ಕರಣ : ಬವ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ಅಮೃತಕಾಲ : ೧೪:೦೮ – ೧೫:೫೧
ರಾಹು ಕಾಲ: ೧೨:೧೩ – ೧೩:೩೮
ಗುಳಿಕ ಕಾಲ: ೧೦:೪೯ – ೧೨:೧೩
ಯಮಗಂಡ: ೦೮:೦೦ – ೦೯:೨೫

 

ಮೇಷ (Mesha)

ದಿನ ಕೆಲಸ ಬಾಹುಳ್ಯದಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸಲು ಆಗುವುದಿಲ್ಲ. ಇದೇ ಕಾರಣಕ್ಕೆ ಸಂಜೆಯ ವೇಳೆಗೆ ಅಲ್ಪ ಆಲಸ್ಯ ಕಾಡುವ ಸಂಭವವಿದೆ. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮೊದಲು ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.

 

ವೃಷಭ (Vrushabha)

ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಮೊಬೈಲ್‌, ಟಿ.ವಿ. ಮುಂತಾದ ಸಂವಹನ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಆಂಜನೇಯ ಮಂತ್ರ ಪಠಿಸಿರಿ. ಮತ್ತು ದೀನದಲಿತರಿಗೆ ಆಹಾರ ನೀಡಿರಿ.

 

ಮಿಥುನ (Mithuna)

ಸಜ್ಜನರ ಸಂಗವು ಹೆಜ್ಜೇನು ಸವಿದಂತೆ ಎನ್ನುವಂತೆ ಈ ದಿನ ಹರ್ಷಿತ, ಉಲ್ಲಾಸ ಸಮಯ ಕಳೆಯುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆಯಿದೆ. ದೇಹದಲ್ಲಿ ಉತ್ತಮ ಆರೋಗ್ಯ. ಧನಾತ್ಮಕ ಚಿಂತನೆಯಿಂದ ಮನಸ್ಸು ಪ್ರಫುಲ್ಲಿತವಾಗುವುದು. ಹಿರಿಯರ ಆರೋಗ್ಯದ ಕಡೆ ಗಮನ ನೀಡಿರಿ.

 

ಕರ್ಕ (Karka)

ನಿಮ್ಮ ಕಾರ್ಯ ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ತೋರುವುದು. ನೂತನ ವಸ್ತ್ರ ಖರೀದಿ ಮಾಡುವಿರಿ. ಮನೋಧೈರ್ಯದಿಂದ ನೂತನ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ ಮತ್ತು ಯಶಸ್ಸನ್ನು ಹೊಂದುವಿರಿ. ಸ್ಥಿರಾಸ್ಥಿ ಖರೀದಿಯ ಬಗ್ಗೆ ಮರು ಚಿಂತನೆ ಮಾಡುವಿರಿ.

 

ಸಿಂಹ (Simha)

ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಅಂತೆಯೇ ನೀವು ಮುಂದೆ ಮಾಡಬೇಕೆನ್ನುವ ಕ್ರೀಯಾಶೀಲ ಕೆಲಸಗಳಿಗೆ ಸ್ನೇಹಿತರ ನೆರವು ಪಡೆಯುವಿರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಂದಿಗೆ ನಿಷ್ಠುರ ಮಾತುಕತೆ ಮಾಡದಿರುವುದು ಕ್ಷೇಮಕರ.

 

ಕನ್ಯಾರಾಶಿ (Kanya)

ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುವುದು. ಈ ದಿನ ಶುಭವಾರ್ತೆ ಕೇಳುವಿರಿ. ಮಕ್ಕಳೊಡನೆ ನಕ್ಕು ನಲಿಯುವಿರಿ. ಆರ್ಥಿಕ ಸ್ಥಿತಿ ಉತ್ತಮವಿದ್ದು ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವಿರಿ.

 

ತುಲಾ (Tula)

ಕೆಲಸಗಳ ಬದಲಾವಣೆಯೇ ವಿಶ್ರಾಂತಿ ಎನ್ನುವಂತೆ ಮಾಡುವ ಕೆಲಸದಲ್ಲಿ ಏಕತಾನತೆಯಿಂದ ಹೊರಬರಲು ಬೇರೊಂದು ಕೆಲಸವನ್ನು ಆರಂಭ ಮಾಡುವಿರಿ. ಮನೆಯ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡಬೇಕಾಗುವುದು. ಆರೋಗ್ಯದ ಕಡೆ ಗಮನ ನೀಡಿರಿ.

 

ವೃಶ್ಚಿಕ (Vrushchika)

ನಿಮ್ಮ ಯೋಜನೆಗಳು ಮುಂದಕ್ಕೆ ಹೋಗಲಿವೆ. ಆದಾಗ್ಯೂ ಈ ದಿನ ಕೆಲವು ವಿಷಯದಲ್ಲಿ ಯಶಸ್ಸು ಪಡೆಯುವಿರಿ. ಮಧ್ಯಾಹ್ನದ ನಂತರ ಕಾರ್ಯಗಳು ಸಿದ್ಧಿಸುವುದು. ಸ್ನೇಹಿತರಿಗೆ ಹಣದ ಸಹಾಯ ಮಾಡಬೇಕಾಗಿ ಬರುವುದು. ಉಷ್ಣ ಸಂಬಂಧಿ ವ್ಯಾಧಿಗೆ ಸೂಕ್ತ ಔಷಧ ಸೇವಿಸಿರಿ.

 

ಧನು ರಾಶಿ (Dhanu)

ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಬೇಡ. ರಾಜಕೀಯ ನಾಯಕರುಗಳಿಗೆ ಟೀಕೆಗಳು ತಪ್ಪುವುದಿಲ್ಲ. ವ್ಯಾಪಾರಸ್ಥರಿಗೆ ಉತ್ತಮ ಕಾಲ. ಶಿಸ್ತುಬದ್ಧ ಜೀವನದಿಂದ ಶಿವನು ತಲೆಬಾಗುತ್ತಾನೆ. ಹಾಗಾಗಿ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿರಿ.

 

ಮಕರ (Makara)

ಕೌಟುಂಬಿಕ ಜೀವನದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪತಿ-ಪತ್ನಿಯರಲ್ಲಿ ವಿರಸ ತೋರುವುದು. ಮನಸ್ಸಿನ ಸೌಖ್ಯಕ್ಕೆ ಧಕ್ಕೆ ಬರಲಿದೆ. ವಾದ-ವಿವಾದಗಳಿಂದ ದೂರ ಉಳಿಯುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ಕುಂಭರಾಶಿ (Kumbha)

ಸಕಲ ಅನರ್ಥಗಳಿಗೆ ಕೋಪ ಮೊದಲ ಬೇರು. ಜೀವನದಲ್ಲಿ ಸಣ್ಣಪುಟ್ಟ ಘಟನೆಗಳು ನಮ್ಮ ಆತ್ಮೀಯರಿಂದ ಆದಾಗ ಬೇಸರ ಮೂಡುವುದು ಸಹಜ. ಅಂತೆಯೇ ಈ ದಿನ ನಿಮ್ಮ ಕೋಪ-ತಾಪಗಳಿಂದ ದೂರವಿರುವುದು ಒಳ್ಳೆಯದು.

 

ಮೀನರಾಶಿ (Meena)

ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಬೇಡ. ಒಳ್ಳೆಯ ದಿನಗಳು ಕಾದಿವೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top