fbpx
ಮನೋರಂಜನೆ

ಮೊದಲ ದಿನವೇ ಸ್ಪರ್ಧಿಗಳ ಜೊತೆ ದುರಹಂಕಾರದಿಂದ ವರ್ತಿಸಿದ ಗಾಂಚಲಿ ಹುಡುಗಿ ಸಂಯುಕ್ತ.

ಮೊದಲ ದಿನವೇ ಸ್ಪರ್ಧಿಗಳ ಜೊತೆ ದುರಹಂಕಾರದಿಂದ ವರ್ತಿಸಿದ ಗಾಂಚಲಿ ಹುಡುಗಿ ಸಂಯುಕ್ತ.

 

 

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ 9 ವಾರಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಮನೆಗೆ ಪ್ರವೇಶ ಪಡೆದಿದ್ದ 18 ಜನರ ಪೈಕಿ ಈಗಾಗಲೇ 8 ಜನ ಎಲಿಮಿನೇಟ್ ಆಗಿದ್ದಾರೆ. ಸದ್ಯ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ಅಥಿತಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ವಾಸ್ತವವಾಗಿ ಲಾಸ್ಯ ಅವರು ಮಾತ್ರ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದು ಆದರೆ ಮನೆಯ ಉಳಿದ ಎಲ್ಲಾ ಸ್ಪರ್ಧಿಗಳಿಗೆ ಬಂದಿರುವ ಇಬ್ಬರೂ ಕೊಡ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹೇಳಿಕೊಂಡಿದ್ದಾರೆ

 

 

 

 

ಮಾಡಿರೋ ಒಂದೇ ಚಿತ್ರಕ್ಕೆ ಇಡೀ ಊರಿಗೆ ಆಗಿ ಮುಗುವಷ್ಟು ಸೊಕ್ಕನ್ನು ಮೈಗೂಡಿಸಿಕೊಂಡು ಕನ್ನಡದ ದುರಹಂಕಾರಿ ನಟಿ ಎಂದು ಕುಖ್ಯಾತಿ ಪಡೆದಿರುವ ಸಂಯುಕ್ತ ಬಿಗ್ ಬಾಸ್ ಗೆ ಬಂದ ಮೊದಲ ದಿನವೇ ಸ್ಪರ್ಧಿಗಳ ಎದುರು ಗಾಂಚಲಿ ತೋರಿಸಿದ್ದಾಳೆ.. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ಘಳಿಗೆಯಿಂದಲೇ ಮನೆಯವರ ಪಿತ್ತ ನೆತ್ತಿಗೇರಿಸುತ್ತಿರುವ ಸಂಯುಕ್ತ ಮೊದಲಿಗೆ ಜಯ ಶ್ರೀನಿವಾಸನ್‌ ಅವರ ಸಂಖ್ಯಾಶಾಸ್ತ್ರದ ಬಗ್ಗೆ ಕೊಂಕಿನ ಮಾತನಾಡಿ ಅವರ ಕೋಪಕ್ಕೆ ಕಾರಣರಾದರು. ಸಂಖ್ಯಾಶಾಸ್ತ್ರವೆಲ್ಲಾ ಬರಿ ಸುಳ್ಳು, ನಿವೇದಿತಾ ತನ್ನ ಮುಗ್ದತೆಯನ್ನು ಬಂಡವಾಳವಾಗಿಟ್ಟುಕೊಂಡು ಉಳಿದ ಎಲ್ಲಾ ಸ್ಪರ್ಧಿಗಳಿಗೆ ಚಳ್ಳೆ ಹಣ್ಣನ್ನು ತಿನ್ನಿಸುತ್ತಿದ್ದಾಳೆ, ಚಂದನ್ ಕುತಂತ್ರಿ ತುಂಬಾ ಪ್ಲಾನ್ ಮಾಡಿ ಗೇಮ್ ಆಡುತ್ತಿದ್ದಾನೆ” ಎಂದು ತನ್ನ ದುರಹಂಕಾರದಿಂದ ವರ್ತಿಸಿದಳು.

 

 

ಸಂಯುಕ್ತಾರ ನೇರ ಮಾತುಗಳಿಂದ ಜಗನ್,ನಿವೇದಿತಾ,ಚಂದನ್ ಮತ್ತು ಜೆಕೆಯವರ ಕಾಲೆಳೆದರು.ನಂತರ ಸಮೀರ್ ಆಚಾರ್ಯ ಅವರ ಕೆಲಸದ ಬಗ್ಗೆಯೂ ಕೊಂಕು ಮಾತನಾಡಿದರು. ಮನೆಯೊಳಗೆ ಸಂಯುಕ್ತಾ ಹೆಗ್ಡೆ ಮತ್ತು ಲಾಸ್ಯ ಬರುತ್ತಿದ್ದಂತೆ ಕೆಲವು ಸದಸ್ಯರಲ್ಲಿ ಬೇಸರವಾದಂತಿದೆ ಇಡೀ ಮನೆಯವರು ಸಂಯುಕ್ತಳ ಕಿರಿಕ್’ಗೆ ಭಯ ಪಡುತ್ತಿದ್ದಾರೆ. ನಿಧಾನಕ್ಕೆ ಅಸಮಧಾನ ತಲೆ ಎತ್ತುತ್ತಿದೆ, ಮುಂದಿನ ದಿನಗಳಲ್ಲಿ ಲಾಸ್ಯಳ ಧೈರ್ಯ ಹೀಗೆ ಇರುತ್ತದೆಯೇ ಎಂದು ಕಾದುನೋಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top