fbpx
ದೇವರು

ಡಿಸೆಂಬರ್ 13 ನೇ ತಾರೀಖು ಈ ವರ್ಷದ ಕೊನೆಯ ಏಕಾದಶಿಯೇ ಮಾರ್ಗಶಿರ ಮಾಸದ ಸಫಲ ಏಕಾದಶಿ ಈ ರಾತ್ರಿ ಈ ಕೆಲಸಗಳು ಮಾಡಿದರೆ ಪುಣ್ಯ ಲಭಿಸುತ್ತದೆ

ನಾಳೆ ಡಿಸೆಂಬರ್ 13 ನೇ ತಾರೀಖು ಬುಧುವಾರ , ಮಾರ್ಗಶಿರ ಮಾಸದ, ಕೃಷ್ಣ ಪಕ್ಷದ ಚಿತ್ರಾ ನಕ್ಷತ್ರದಲ್ಲಿ ಬರುವ ಏಕಾದಶಿಯನ್ನು ಸಫಲ ಏಕಾದಶಿ ಎಂದು ಆಚರಿಸಲಾಗುವುದು.

ಸಫಲ ಎನ್ನುವ ಹೆಸರಿನಲ್ಲಿಯೇ ತಿಳಿಯುತ್ತದೆ ಸಫಲ ಏಕಾದಶಿ ಎಂದರೆ ಎಲ್ಲಾ ಕೆಲಸಗಳಲ್ಲೂ ಯಶಸ್ಸನ್ನು ಗಳಿಸಿ ಸಫಲರಾಗುತ್ತಾರೆ. ಭಗವಂತನಾದ ಶ್ರೀಕೃಷ್ಣನು ಇದರ ಮಹಿಮೆಯನ್ನು ವಿವರಿಸಿದ್ದಾನೆ. ಈ ವ್ರತವು ಮನೋ ಅನುಕೂಲವನ್ನು ಆಂದರೆ ಮನಸ್ಸಿನಲ್ಲಿರುವ ಆಸೆಯನ್ನು ಈಡೇರಿಸುತ್ತದೆ. ಈ ವ್ರತದ ಪರಿಣಾಮದಿಂದ ಮನುಷ್ಯನಿಗೆ ಉತ್ತಮ ಫಲವು ಪ್ರಾಪ್ತಿಯಾಗುತ್ತದೆ . ಕೊನೆಯಲ್ಲಿ ವಿಷ್ಣು ಲೋಕವೂ ಸಹ ಪ್ರಾಪ್ತಿಯಾಗುತ್ತದೆ. ಇದು ಅತ್ಯಂತ ಮಂಗಳಮಯ ಮತ್ತು ಪುಣ್ಯವಾದ ವ್ರತವಾಗಿದೆ.

 

 

ಪದ್ಮ ಪುರಾಣದಲ್ಲಿ ಪೌಲುಶ ಮಾಸದ ಕೃಷ್ಣ ಪಕ್ಷದ ಈ ಸಫಲ ಏಕಾದಶಿಯಲ್ಲಿ ಯುಧಿಷ್ಠಿರನು ಶ್ರೀಕೃಷ್ಣನನ್ನು ಕೇಳುತ್ತಾನೆ , ದೊಡ್ಡ ದೊಡ್ಡ ಯಜ್ಞ ಯಾಗಾದಿಗಳಿಂದ ನಾನು ಸಂತುಷ್ಟನಾಗುವುದಿಲ್ಲ. ಆದರೆ ಈ ಒಂದು ಸಫಲ ಏಕಾದಶಿಯ ವ್ರತವನ್ನು ಮಾಡಿದರೆ ಅದರ ಅನುಷ್ಠಾನದಿಂದ ಶ್ರೀಕೃಷ್ಣನಾದ ನಾನು ಸಂತುಷ್ಟನಾಗುತ್ತಾನೆ.

ಏಕಾದಶಿಯ ವ್ರತವನ್ನು ಪ್ರತಿಯೊಬ್ಬ ಮನುಷ್ಯರು ಪ್ರತ್ಯೇಕವಾಗಿ ಮಾಡಬೇಕು. ಈ ಕೃಷ್ಣ ಪಕ್ಷದಲ್ಲಿ ಸಫಲ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ. ಭಗವಂತನಾದ ಶ್ರೀ ನಾರಾಯಣನಿಗೆ ವಿಧಿ ಪೂರ್ವಕವಾಗಿ ಪೂಜೆ ಮಾಡಬೇಕು. ಈ ಏಕಾದಶಿಯು ಪರಮ ಪಾವನವಾದದ್ದು. ಅತ್ಯಂತ ಕಲ್ಯಾಣಕಾರಿಯಾಗಿದೆ. ಎಲ್ಲಾ ವ್ರತಗಳಿಗಿಂತಲೂ ಸರ್ವಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಈ ಸಫಲ ಏಕಾದಶಿಯ ನಂತರ ಧನುರ್ ಮಾಸವೂ ಬರುವುದು ನಂತರ ಅಧಿಕ ಮಾಸ ಕೂಡಾ ಪ್ರಾರಂಭವಾಗುವುದು.
ಶ್ರೀಹರಿ ಶ್ರೀವಿಷ್ಣು ಭಗವಂತನ ಪೂಜೆಯನ್ನು ಹೇಗೆ ಮಾಡಬೇಕೆಂದರೆಎಲ್ಲದ್ದಕ್ಕಿಂತ ಮೊದಲು ಈ ಸಫಲ ಏಕಾದಶಿಯ ದಿನ

“ ಓಂ ವಿಷ್ಣುವೇ ನಮಃ”
“ ಓಂ ನಮೋ ಭಗವತೇ ವಾಸುದೇವಾಯ ನಮಃ”

ಎಂಬ ಮಂತ್ರಗಳನ್ನು ಶ್ರದ್ಧೆ ಭಕ್ತಿಯಿಂದ ಈ ಎರಡು ಮಂತ್ರಗಳನ್ನು 108 ಬಾರಿ ಜಪಿಸಬೇಕು.

 

 

ವಿಷ್ಣುವಿನ ವಿಭಿನ್ನ ಹೆಸರನ್ನು ಹೇಳುತ್ತಾ ಧೂಪ, ದೀಪ ,ಆರತಿಯನ್ನು ಮಾಡಬೇಕು. ರಾತ್ರಿಯ ಸಮಯದಲ್ಲಿ ವಿಷ್ಣುವಿನ ಹೆಸರು ಕೀರ್ತನೆ ಭಜನೆಗಳನ್ನು ಮಾಡಬಹುದು.
ಏಕಾದಶಿಯ ದಿನ ರಾತ್ರಿ ಜಾಗರಣೆ ಮಾಡುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುವುದು. ಅದು ನೀವು ಸಾವಿರ ವರ್ಷಗಳು ತಪಸ್ಸು ಮಾಡಿದರೂ ಫಲ ಪ್ರಾಪ್ತಿಯಾಗುವುದಿಲ್ಲ ಅಂತಹ ಫಲವು ಈ ಸಫಲ ಏಕಾದಶಿಯ ವ್ರತವನ್ನು ಆಚರಿಸಿದರೆ ಪ್ರಾಪ್ತಿಯಾಗುವುದು.

ಈ ಏಕಾದಶಿಯ ದಿನ ಭೋಗ, ವಿಲಾಸಿ ಜೀವನ ಇನ್ನೂ ಇತ್ಯಾದಿಗಳನ್ನು ತ್ಯಾಗ ಮಾಡಬೇಕು. ಏಕಾದಶಿಯ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಿ, ಮಡಿ ವಸ್ತ್ರವನ್ನು ಧರಿಸಿ, ವಿಷ್ಣು ದೇವನ ಹಣೆಗೆ ಗೋಪಿ ಚಂದನ ಅಥವಾ ತಿಲಕವನ್ನು ಹಚ್ಚಿ, ಕಮಲ, ಗಂಗಾಜಲ, ಪಂಚಾಮೃತ, ತೆಂಗಿನಕಾಯಿಯನ್ನು ಮತ್ತು ಎಲೆ ಅಡಿಕೆ ಎರಡು ಲವಂಗವನ್ನು ಅರ್ಪಿಸಬೇಕು.

 

 

ಸಾತ್ವಿಕ ಆಹಾರವನ್ನು ರಾತ್ರಿ ಒಂದು ಬಾರಿ ಸೇವಿಸಬಹುದು .ಅನ್ನವನ್ನು ಏಕಾದಶಿಯ ದಿನ ಸೇವಿಸಬಾರದು.
ಸಫಲ ಏಕಾದಶಿಯ ದಿನ ವಿಷ್ಣು ಭಗವಂತನಿಗೆ ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಸಿಹಿಯಾದ ಎಳ್ಳಿನ ಉಂಡೆಯನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸಬೇಕು.
ಶ್ರೀ ಲಕ್ಷ್ಮೀ ನಾರಾಯಣ ಪೂಜೆ ಸಂಪೂರ್ಣವಾದ ನಂತರ ರಾತ್ರಿ ಫಲಹಾರ ಸೇವನೆ ಮಾಡಿ ದ್ವಾದಶಿಯ ದಿನ ಯಾವುದಾದರೂ ಬಡವರಿಗೆ ದಾನ ಧರ್ಮಗಳನ್ನು ದಕ್ಷಿಣೆ ಸಮೇತವಾಗಿ ಮಾಡಿ ವ್ರತವನ್ನು ಪೂರ್ಣಗೊಳಿಸಬೇಕು.

 

 

ಸಫಲ ಏಕಾದಶಿಯನ್ನು ಆಚರಣೆ ಮಾಡುವುದರಿಂದ ಅತ್ಯಂತ ಒಳ್ಳೆಯ ಫಲವೂ ಪ್ರಾಪ್ತಿಯಾಗುವುದು. ಶ್ರೇಷ್ಠ ಯಜ್ಞ ಯಾಗಾದಿಗಳನ್ನು ಮಾಡಿದಷ್ಟೇ ಪುಣ್ಯವೂ ಲಭಿಸುವುದು. ಯಾರು ಈ ಏಕಾದಶಿಯನ್ನು ಭಕ್ತಿ, ಶ್ರದ್ಧೆಯಿಂದ ಮಾಡುತ್ತಾರೋ ಅವರು ಈ ಏಕಾದಶಿಯ ಉತ್ತಮ ಫಲವನ್ನು ಪಡೆದುಕೊಳ್ಳುವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top