fbpx
ಮನೋರಂಜನೆ

ರೈತರಿಗಾಗಿ ತನ್ನ ಐಷಾರಾಮಿ ಕಾರನ್ನು ಮಾರಿದ ಸುದೀಪ್..!

ರೈತರಿಗಾಗಿ ತನ್ನ ಐಷಾರಾಮಿ ಕಾರನ್ನು ಮಾರಿದ ಸುದೀಪ್..!

 

 

.ಸುದೀಪ್ ಒಬ್ಬ ಒಳ್ಳೆಯ ನಟ ಮಾತ್ರವಲ್ಲದೆ ಅಷ್ಟೇ ಒಳ್ಳೆಯ ಮನಸಿನ ವ್ಯಕ್ತಿಕೂಡ ಹೌದು. ದಾನ ಧರ್ಮ ಮಾಡುವುದರಲ್ಲಿ ಸುದೀಪ್ ಎತ್ತಿದ ಕೈ ಚಿತ್ರರಂಗದ ಒಳಗೂ ಹೊರಗೂ ತಮ್ಮ ಕೈನಲ್ಲಾದಷ್ಟು ಸೇವೆಯನ್ನು ಮಾಡಿರುವ ಸುದೀಪ್ ಏನೇ ಸಹಾಯ ಮಾಡಿದರೂ ಇಷ್ಟು ದಿನ ಎಲ್ಲಿಯೂ ಹೇಳಿಕೊಂಳ್ಳುತ್ತಿರಲಿಲ್ಲ ಒಂದು ರೀತಿ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಯಬಾರದು ಎಂತರಲ್ಲಾ ಹಾಗೆ. ಇಂದು ರೈತರಿಗೆ ನೆರವಾಗಲು ತಮ್ಮ ಐಷಾರಾಮಿ ಕಾರನ್ನು ಮಾರುವುದಾಗಿ ಸುದೀಪ್ ತಿಳಿಸಿದ್ದಾರೆ.

 

 

ರೈತರ ತ್ಯಾಗ ಮತ್ತು ಶ್ರಮದ ಕುರಿತಾಗಿ ಜಾಗ್ರತಿ ಮೂಡಿಸುವ ‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ( ಉದ್ದೇಶಿತ ಟ್ರಸ್ಟ್ ) ರೈತಸ್ನೇಹಿ ಯೋಜನೆಯ ಲೋಗೋ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಲೋಗೋ ಬಿಡುಗಡೆ ಮಾಡಲು ವಿಶೇಷ ಅಥಿತಿಯಾಗಿ ಬಂದಿದ್ದ ಕಿಚ್ಚ ಸುದೀಪ್ ಲೋಗೋವನ್ನ ಬಿಡುಗಡೆ ಮಾಡಿದರು.

 

 

 

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಸುದೀಪ್ “ಇಂತಹ ಕಾರ್ಯಕ್ರಮಗಳಿಗೆ ನಾವುಗಳು ಅತಿಥಿಗಳಾಗಿ ಬಂದು ನಾಲ್ಕು ಮಾತಾಡಿ ಹೋಗಿ ಬಿಡುತ್ತೇವೆ ಆದರೆ ರೈತರ ಕಷ್ಟಗಳು ಹಾಗೆ ಇರುತ್ತವೆ. ರೈತರ ಸಮಸ್ಯೆಗಳ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ,ಮಳೆ ಬರುತ್ತಿಲ್ಲ, ಹಾಗಂತ ಪ್ರಕೃತಿಯ ಜೊತೆ ಜಗಳ ಮಾಡೋಕಾಗಲ್ಲ, ರೈತರಿಗೆ ಹೇಗೆ ಸಹಾಯ ಮಾಡಬೇಕೋ ಗೊತ್ತಿಲ್ಲ. ತುಂಬಾ ವರ್ಷ ಚಿತ್ರರಂಗದಲ್ಲಿ ದುಡಿದಿದ್ದೇನೆ. ಆದರೆ, ಕಡಿಮೆ ಸಂಪಾದನೆ ಮಾಡಿದ್ದೇನೆ, ಅದರಲ್ಲಿ ನನಗೆ ತುಂಬಾ ಇಷ್ಟವಾಗಿರೋ BMWಕಾರನ್ನ ಮಾರಾಟ ಮಾಡಿ ಅದರಿಂದ ಬಂದ ಹಣವನ್ನ ‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ಗೆ ಕೊಡುತ್ತೇನೆ” ಎಂದು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top