fbpx
ಮನೋರಂಜನೆ

ಟ್ರೊಲ್ ಪೇಜ್’ಗಳ ಮೇಲೆ ಗಣೇಶ್’ಗೆ ಏಕೆ ಕೋಪ..?

ಟ್ರೊಲ್ ಪೇಜ್’ಗಳ ಮೇಲೆ ಗಣೇಶ್’ಗೆ ಏಕೆ ಕೋಪ..?

 

 

ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್‌, ಟ್ವಿಟ್ಟರ್‌ ಗಳಲ್ಲಿ ಟ್ರೋಲ್’ಗಳ ಸದ್ದು ಜಾಸ್ತಿಯಾಗಿದೆ.. ಕನ್ನಡದ ನಟ-ನಟಿಯರ ಫೋಟೋಗಳನ್ನು ಬಳಸಿಕೊಂಡು ಅವರ ಹಾವ ಭಾವಗಳನ್ನು ಕೀಟಲೆ ಮಾಡುವುದು, ಲೇವಡಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ, ಈ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎನ್ನುವ ಉದ್ದೇಶದಿಂದ ಬೆಂಗಳೂರು ಪೊಲೀಸ್‌ರು, ಇಂಥ ಟ್ರೋಲಿಗರಿಗೆ ಎಚ್ಚರಿಕೆ ನೀಡಿದ್ದರು. ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಬಳಸಿ ಮನಸಿಗೆ ಬಂದಂತೆ ಟ್ರೋಲ್‌ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.

 

 

ಬೆಂಗಳೂರು ಪೋಲೀಸರ ಈ ಕ್ರಮಕ್ಕೆ ಕನ್ನಡ ಚಿತ್ರರಂಗವೂ ಬೆಂಬಲ ಸೂಚಿಸಿತ್ತು. “ಟ್ರಾಲ್ ಮಾಡುವುದು ತುಂಬಾ ಬೇಸರದ ಸಂಗತಿ. ಅವರರ ಅಭಿಪ್ರಾಯಗಳನ್ನು ಟ್ರೋಲ್ ಗಳ ಮುಖಾಂತರ ನಮ್ಮ ಮೇಲೆ ಹೇರೋದು ಸರಿಯಲ್ಲ ಇವಕ್ಕೆಲ್ಲಾ ಕಡಿವಾಣ ಹಾಕಬೇಕು, ನಮ್ಮ ಫೋಟೋ ಬಳಸಿ ಬೇರೆಯವರನ್ನು ನೋಯಿಸೋದು ಸರಿಯಲ್ಲ. ನಿಮ್ಮ ಫೋಟೋ ಹಾಕಿಕೊಂಡು ಟ್ರೊಲ್ ಮಾಡಿಕೊಳ್ಳಿ, ಟ್ರೋಲ್ ಮಾಡುವಾಗ ಯಾರ ಭಾವನೆಗಳನ್ನೂ ನೋಯಿಸಬಾರದು.ಇವೆಲ್ಲಾ ಬ್ಯಾನ್ ಆಗಬೇಕು ಪೊಲೀಸರು ಟ್ರಾಲಿಗರಿಗೆ ಎಚ್ಚರಿಕೆ ನೀಡಿದ್ದು ಒಳ್ಳೇದೇ ಆಯಿತು” ಎಂದು ಗಣೇಶ್ ಹೇಳಿದ್ದರು.

 

 

ಗಣೇಶ್ ಬಗ್ಗೆ ಟ್ರಾಲ್ ಮಾಡಿದ್ದರ ವಿರುದ್ಧ ಕೆರಳಿದ್ದ ಶಿಲ್ಪಾ ಗಣೇಶ್ ಪೊಲೀಸರ ಮೂಲಕ ಟ್ರಾಲ್‍ಪೇಜುಗಳಿಗೆ ಕಡಿವಾಣ ಹಾಕ ಹೊರಟಿದ್ದಾರೆಂಬುದು ಕೆಲ ಟ್ರಾಲಿಗರ ಆರೋಪ. ಪೊಲೀಸರನ್ನು ಟ್ರೊಲ್ ಪೇಜ್ ಗಳ ವಿರುದ್ಧ ಎತ್ತಿಕಟ್ಟಿರುವ ಶಿಲ್ಪಾ ಅವರಿಗೆ ಗಣೇಶ ಅವರೂ ಕೂಡ ಬೆಂಬಲ ಸೂಚಿಸಿರುವುದು ಈಗ ಟ್ರೊಲ್ ಪೇಜ್’ಗಳ ಬೇಸರಕ್ಕೆ ಕಾರಣವಾಗಿದೆ.. ಹಾಗಾಗಿ ಇನ್ಮುಂದೆ ಗಣೇಶ್ ಅವರ ಯಾವುದೇ ಚಿತ್ರದ ಬಿಡುಗಡೆಯ ಸಂಧರ್ಭದಲ್ಲಾಗಲಿ ಅಥವಾ ಇನ್ನ್ಯಾವುದೇ ಸಂದರ್ಭದಲ್ಲಾಗಲಿ ಅವಳ ಫೋಟೋ ಗಳನ್ನ ಟ್ರೊಲ್ ಮಾಡಲು ಬಳಸಬಾರದು ಎಂದು ಟ್ರೊಲ್ ಪೇಜ್ ಗಳು ನಿರ್ಧಾರ ಮಾಡಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top