fbpx
ಸಮಾಚಾರ

15 ವರ್ಷ ವಯಸ್ಸಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹುಡುಗಿಗೆ ಸಾಮೂಹಿಕ ಅತ್ಯಾಚಾರ ಮಾಡಿದರು ನಂತರ ಸಹಾಯ ಮಾಡುವ ನೆಪದಲ್ಲಿ ಬಂದವನು ರೇಪ್ ಮಾಡಿದ

ಮತ್ತೊಂದು ಅಮಾನವೀಯ ಘಟನೆಯಲ್ಲಿ, ಉತ್ತರ ಪ್ರದೇಶದ ಸರೋಜಿನಗರದಲ್ಲಿ ಶನಿವಾರ 15 ವರ್ಷ ವಯಸ್ಸಿನ ರಕ್ತ ಕ್ಯಾನ್ಸರ್ ರೋಗಿಯನ್ನು ಇಬ್ಬರು ಗ್ಯಾಂಗ್ ರೇಪ್ ಮಾಡಿದ್ದಾರೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ಅವರು ಸಹಾಯ ಕೋರಿದ ವ್ಯಕ್ತಿಯು ಸಹ ಸಹಾಯವನ್ನು ನೀಡುವ ನೆಪದಲ್ಲಿ ರೇಪಿಸ್ಟ್ ಗಳ ಜೊತೆ ಸೇರಿ ಅವಳನ್ನು ಅತ್ಯಾಚಾರ ಮಾಡಿದ್ದಾರೆ.

 

 

ಇದು ಇಷ್ಟೇ ಅಲ್ಲದೆ, ಭಾನುವಾರದಂದು, ಚಿಕ್ಕ ಬಾಲಕಿಯು ಕ್ರೂರವಾಗಿ ಅತ್ಯಾಚಾರಕ್ಕೊಳಗಾದರು ಮತ್ತು 16cm ಮರದ ಕೋಲು ಅವಳ ಮರ್ಮಾಂಗಕ್ಕೆ ಸೇರಿಸಲಾಯಿತು. 5 ವರ್ಷದ ಬಾಲಕಿಯನ್ನು ರಾತ್ರಿಯ ಹೊತ್ತಿನಲ್ಲಿ ತನ್ನ ಮನೆಯಿಂದ ಅಪಹರಿಸಿ, ಅತ್ಯಾಚಾರ ಮಾಡಿ ಸಾಯಲು ಬಿಟ್ಟರು. ಪ್ರತಿದಿನ ನಾವು ಇದೆ ರೀತಿಯ ಕೇಸ್ ಗಳ ಬಗ್ಗೆ ಕೇಳುತ್ತಿದ್ದೇವೆ. ಇದು ನಮಗೆ ಮಾನವೀಯತೆಯು ಇನ್ನೂ ಜೀವಂತವಾಗಿದಿಯೋ ಇಲ್ಲವೋ ಎಂದು ಭಯ ಉಂಟು ಮಾಡುತ್ತಿದೆ .

ಈಗಾಗಲೇ ಪೊಲೀಸರು ಈ ಪ್ರಕರಣದ ಅಪರಾಧಿಗಳನ್ನೂ ಬಂಧಿಸಿದ್ದಾರೆ, ಆದರೆ ಅಪರಾಧಿಯನ್ನು ಬಂಧಿಸಿದರೆ ಸಾಲದು!

ಆರೋಪಿಯು ಕಟ್ಟಡದ ಸ್ಥಳದಲ್ಲಿ ಕೆಲಸ ಮಾಡುವವನಾಗಿದ್ದು, ಅವನ ಹೆಸರು ವೀರೇಂದ್ರ ಯಾದವ್, ಅವನು ಬಂತಾರದ ನಿವಾಸಿ ಎಂದು ಗುರುತಿಸಲಾಗಿದೆ. ಪೊಲೀಸರು ಎರಡನೇ ಆರೋಪಿಯನ್ನು ಕೂಡ ಬಂಧಿಸಿದ್ದಾರೆ.

ನಿಜವಾಗಿ ಅಲ್ಲಿ ಏನಾಯಿತು??

 

ಶನಿವಾರ ರಾತ್ರಿ, ಸುಮಾರು 8.30 ರ ವೇಳೆಗೆ, ಹುಡುಗಿಯ ಸ್ನೇಹಿತನು ಅವಳನ್ನುನೂಡಲ್ಸ್ ತಿನ್ನಲು ಆಹ್ವಾನಿಸಿದನು. ಅವರು 9 ಗಂಟೆಗೆ ಮನೆಯಿಂದ ಹೊರಟು 20 ನಿಮಿಷಗಳ ಕಾಲ ಸ್ನೇಹಿತರ ಜೊತೆ ಇದ್ದು ನಂತರ, ಆಕೆಯ ಸ್ನೇಹಿತ (ಇನ್ನೊಬ್ಬ ಆರೋಪಿ) ಸುಮಿತ್ಗೆ ಪರಿಚಯಿಸಿದರು ಮತ್ತು ಅವರು ನೂಡಲ್ಸ್ ತಿನ್ನಲು ಹೋಗೋಣ ಎಂದು ಅವಳನ್ನು ಒತ್ತಾಯಿಸಿದರು.

ಏಕಾಂತ ಸ್ಥಳಕ್ಕೆ ತಲುಪಿದ ನಂತರ, ಇಬ್ಬರು ಯುವಕರು ಅವಳನ್ನು ಅತ್ಯಾಚಾರ ಮಾಡಿ ಪಲಾಯನ ಮಾಡಿದರು. “ನಾನು ಸರಿಯಾಗಿ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗಲಿಲ್ಲ ಮತ್ತು ಭಯದಿಂದ ನಡುಗುತ್ತಿದ್ದೆ” ಎಂದು ಅತ್ಯಾಚಾರಕ್ಕೆ ಒಳಾಗಾದ ಬಾಲಕಿಯು ಪೊಲೀಸರಿಗೆ ತಿಳಿಸಿದ್ದಾಳೆ.

ಅವಳು ಸಹಾಯಕ್ಕಾಗಿ ಅಲ್ಲೇ ಹಾದುಹೋಗುತ್ತಿದೆ ಅವಳ ಸ್ನೇಹಿತನನ್ನು ಸಹಾಯ ಕೇಳಿದಳು, ಆದರೆ ಅವನು ಕೂಡ ಅವಳನ್ನು ಅತ್ಯಾಚಾರ ಮಾಡಿದ್ದಾನೆ.

 

 

“ಒಬ್ಬ ಪರಿಚಯಸ್ಥರಿಂದ ದ್ರೋಹಗೊಂಡಿದ್ದರೂ, ನಾನು ವೀರೇಂದ್ರನನ್ನು ನಂಬಿ ಅವರ ಸಹಾಯವನ್ನು ಕೇಳಿದೆನು . ಆದರೆ ಅವರು ಕೂಡ ನನ್ನನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದರು ಮತ್ತು ಸ್ಥಳದಲ್ಲೇ ಓಡಿಹೋಗುವ ಮೊದಲು ನನ್ನನ್ನು ಅತ್ಯಾಚಾರ ಮಾಡಿದನು” ಎಂದು ಬದುಕುಳಿದ ಹುಡುಗಿಯು ತನ್ನ ದೂರಿನಲ್ಲಿ ಹೇಳಿದ್ದಾಳೆ.

 

ನಾವು ಈಗಿನ ಕಾಲದಲ್ಲಿ ಯಾರನ್ನೂ ನಂಬಲು ಸಾಧ್ಯವಾಗುವುದಿಲ್ಲ! ಒಬ್ಬ ಒಳ್ಳೆಯ ಸ್ನೇಹಿತ ಅಂತಹ ಘೋರ ಅಪರಾಧ ಮಾಡುತ್ತಾನೆ ಎಂದು ಅಂದುಕೊಳ್ಳಲು ಆ ಹುಡುಗಿಗೆ ಹೇಗೆ ಸಾಧ್ಯ?

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top